ಪಟ್ಟೆ ವಿದ್ಯಾ ಸಂಸ್ಥೆಯಲ್ಲಿ ಉಚಿತ ಸಮವಸ್ತ್ರ ವಿತರಣೆ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ನೂತನ ಎಸ್‌ಡಿಎಂಸಿ ರಚನೆ

0

ಬಡಗನ್ನೂರುಃ  ಪಟ್ಟೆ ವಿದ್ಯಾ ಸಂಸ್ಥೆಗಳಲ್ಲಿ ಶಾಲಾ ಆಡಳಿತ ಮಂಡಳಿಯ ವತಿಯಿಂದ  ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ನೂತನ ಎಸ್‌ಡಿಎಂಸಿ ರಚನೆ ಜು.18 ರಂದು ನಡೆಯಿತು.

ಸಂಸ್ಥೆಗಳಲ್ಲಿ ನೂತನವಾಗಿ ದಾಖಲಾದ ವಿದ್ಯಾರ್ಥಿಗಳಿಗೆ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿ ವತಿಯಿಂದ ಉಚಿತ ಸಮವಸ್ತ ವಿತರಣೆ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಟ್ಟೆ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ವೇಣುಗೋಪಾಲ್. ಪಿ ವಹಿಸಿ ಮಾತನಾಡಿ ಸಂಸ್ಥೆಗಳಲ್ಲಿ ಮೂಲಭೂತ ಸೌಲಭ್ಯದೊಂದಿಗೆ ಗುಣಮಟ್ಟದ ಶಿಕ್ಷಣವನ್ನು ಕೊಡುವಲ್ಲಿ ನಮ್ಮ ವಿದ್ಯಾ ಸಂಸ್ಥೆಯು ಮುಂಚೂಣಿಯಲ್ಲಿದೆ ಎಂದು ಹೇಳಿದರು. ನೂತನವಾಗಿ ದಾಖಲಾತಿಗೊಂಡ ಶ್ರೀ ಕೃಷ್ಣ.ಹಿ ಪ್ರಾಥಮಿಕ ಶಾಲೆಯ 17 ವಿದ್ಯಾರ್ಥಿಗಳಿಗೆ ಹಾಗೂ ಪ್ರತಿಭಾ ಪ್ರೌಢಶಾಲೆಯ 20 ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ವತಿಯಿಂದ ಉಚಿತವಾಗಿ ಸಮವಸ್ತ್ರವನ್ನು ವಿತರಣೆ ಮಾಡಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಟ್ಟೆ ವಿದ್ಯಾ ಸಂಸ್ಥೆಗಳ ಸಂಚಾಲಕರಾದ ನಾರಾಯಣ ಭಟ್ ಬಿರ್ನೋಡಿ,  ನಿರ್ದೇಶಕರಾದ ಶಿವಪ್ರಸಾದ್ ಪಟ್ಟೆ, ಪ್ರತಿಭಾ ಪ್ರೌಢಶಾಲೆ ಎಸ್‌ಡಿ ಎಂಸಿ ಅಧ್ಯಕ್ಷ ಬೆಳಿಯಪ್ಪ ಗೌಡ ಕನ್ನಾಯ ಉಪಸ್ಥಿತರಿದ್ದರು.

ನೂತನ ಎಸ್ ಡಿ ಎಂ ಸಿ ರಚನೆ:
ಇದೇ ಸಂದರ್ಭದಲ್ಲಿ  ಶ್ರೀ ಕೃಷ್ಣ.ಹಿ. ಪ್ರಾಥಮಿಕ ಶಾಲೆಯ ನೂತನ ಎಸ್ ಡಿ ಎಂ ಸಿ ಅಧ್ಯಕ್ಷರಾಗಿ  ಕೇಶವಪ್ರಸಾದ್ ನೀಲಗಿರಿ ಉಪಾಧ್ಯಕ್ಷರಾಗಿ ಜಯಲಕ್ಷ್ಮಿ ಹೊಯ್ ಗೆ ಗದ್ದೆ ಆಯ್ಕೆ ಮಾಡಲಾಯಿತು. ಪ್ರತಿಭಾ ಪ್ರೌಢಶಾಲೆಯ ನೂತನ ಎಸ್ ಡಿ ಎಂಸಿ ಅಧ್ಯಕ್ಷರಾಗಿ  ಲಿಂಗಪ್ಪಗೌಡ ಮೋಡಿಕೆ  ಉಪಾಧ್ಯಕ್ಷರಾಗಿ ನಿವೃತ್ತ ಮುಖ್ಯ ಗುರುಗಳಾದ ಯಮುನಾ ಪಟ್ಟೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಸುಮಾರು 12 ಸಾವಿರ ರೂಪಾಯಿ ಮೌಲ್ಯದ ನೋಟ್ಸ್ ಪುಸ್ತಕವನ್ನು 10ನೇ ತರಗತಿಯ ವಿದ್ಯಾರ್ಥಿಯ ಹೆತ್ತವರರಾದ ರವಿತೇಜ ತೇಜಲಕ್ಷ್ಮಿ ಅವರು ಕೊಡುಗೆಯಾಗಿ ನೀಡಿದರು. ಪ್ರತಿಭಾ ಪ್ರೌಢಶಾಲೆ ಮುಖ್ಯ ಗುರುಗಳಾದ ಸುಮನ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ  ರಾಜಗೋಪಾಲ್ ಎಸ್ ಡಿ ಎಂ ಸಿ ರಚನೆಯನ್ನು ಮಾಡಿದರು.  ಶಿಕ್ಷಕ ರಾಮಚಂದ್ರಪ್ಪ ಧನ್ಯವಾದ ಮಾಡಿದರು ಪ್ರೌಢಶಾಲಾ ಸಹ ಶಿಕ್ಷಕ ವಿಶ್ವನಾಥ್ ಗೌಡ ಬೊಳ್ಳಾಡಿ ಅವರು ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ  ಮೋನಪ್ಪ, ವಿಠಲ ಸುವರ್ಣ, ಭವಿತಾ, ಜಯಶ್ರೀ, ಪ್ರೀತಿ ಕುಮಾರಿ, ಶೈಲಶ್ರೀ, ಮಮತಾ, ಪುಷ್ಪಲತಾ, ಧನಲಕ್ಷ್ಮಿ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here