ಪುತ್ತೂರು: ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ Design and Simulation of Fault Tolerant Dc-Dc Converter with Zero Interruption Time for Critical Applications ಎಂಬ ವಿಷಯದ ಕುರಿತು ಪ್ರೀತಿ ಶರ್ಮಾ ಕೆ.ರವರು ಸಲ್ಲಸಿದ ಸಂಶೋಧನಾ ಪ್ರಬಂಧಕ್ಕೆ ಪಿಎಚ್ಡಿ ಪದವಿ ಲಭಿಸಿದೆ. ಈಶ್ವರಮಂಗಲ ಕತ್ರಿಬೈಲು ನಿವಾಸಿ ವೆಂಕಟೇಶ್ವರ ಶರ್ಮ ಮತ್ತು ವನಿತಾ ಶರ್ಮ ದಂಪತಿ ಪುತ್ರಿ ಹಾಗೂ ಕೆಮ್ಮಿಂಜೆ ಪುತ್ತೂರಮೂಲೆ ಕಿರಣ್ ವೈ.ಎಂ.ರವರ ಪತ್ನಿಯಾದ ಇವರು ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಉದ್ಯೋಗಿಯಾಗಿದ್ದಾರೆ.