ನರಿಮೊಗರು ಪ್ರಾ.ಕೃ ಪತ್ತಿನ ಸಹಕಾರ ಸಂಘದಿಂದ ಮರಣ ಸಾಂತ್ವನ ಧನ ವಿತರಣೆ

0

ಪುತ್ತೂರು: ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಈಗಿನ ಆಡಳಿತ ಮಂಡಳಿಯವರು ನೂತನವಾಗಿ ಪ್ರಾರಂಭಿಸಿದ ಮೃತಪಟ್ಟ ಸಾಲಗಾರ ಸದಸ್ಯರ ಕುಟುಂಬಗಳಿಗೆ ನೀಡುವ ಯೋಜನೆ ‘ಮರಣ ಸಾಂತ್ವನ ಧನ’ವನ್ನು ಇತ್ತೀಚೆಗೆ ಮೃತಪಟ್ಟ ಸಂಘದ ನಾಲ್ವರು ಸದಸ್ಯ ಕುಟುಂಬಸ್ಥರಿಗೆ ವಿತರಿಸಿದರು.

ನವೀನ್ ಡಿ. ಅಧ್ಯಕ್ಷತೆಯ ನೂತನ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡ ಬಳಿಕ ಸಂಘದ ಸದಸ್ಯರು, ಸಾಲಗಾರ ಸದಸ್ಯರಿಗಾಗಿ ಕೆಲವೊಂದು ಪ್ರಮುಖ ಯೋಜನೆಗಳನ್ನು ಹಾಕಿಕೊಂಡಿದೆ. ಸಾಲಗಾರ ಸದಸ್ಯರಿಗೆ ಮರಣ ಸಾಂತ್ವನ ಧನ, ರೂ.2 ಲಕ್ಷದ ಉಚಿತ ವಿಮೆ ಸೇರಿದಂತೆ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಈ ಪೈಕಿ ಮರಣ ಸಾಂತ್ವನ ಧನವನ್ನು ನಾಲ್ವರು ಸದಸ್ಯ ಸಾಲಗಾರರಾದ ಸಂಜೀವ ಪೂಜಾರಿ, ದೇರಣ್ಣ ಗೌಡ, ಆನಂದ ಗೌಡ ಹಾಗೂ ಲೋಕಯ್ಯ ಗೌಡ ಮೃತಪಟ್ಟಿದ್ದು ಅವರ ಕುಟುಂಬಸ್ಥರಿಗೆ ತಲಾ ರೂ.5000ದಂತೆ ಮರಣ ಸಾಂತ್ವನ ಧನವನ್ನು ವಿತರಿಸಿದರು. ಸಂಘದ ಅಧ್ಯಕ್ಷ ನವೀನ್ ಡಿ., ಉಪಾಧ್ಯಕ್ಷ ಪವಿತ್ರ ಕೆ.ಪಿ., ನಿರ್ದೇಶಕರಾದ ಶಿವಪ್ರಸಾದ್, ಪ್ರವೀಣ್ ಶೆಟ್ಟಿ, ನಮಿತಾ ಉಪಸ್ಥಿತರಿದ್ದರು.


ಈಗಿನ ಆಡಳಿತ ಮಂಡಳಿಯು ಸಂಘದ ಸದಸ್ಯರ ಅನುಕೂಲಕ್ಕಾಗಿ ಕೈಂದಾಡಿ ಶಾಖೆಯನ್ನು ನವೀಕರಣಗೊಳಿಸಿ ಅಲ್ಲಿ ಬ್ಯಾಂಕಿಂಗ್ ಸೇವೆ ಆರಂಭಿಸಿದೆ. ಸುರಕ್ಷತೆಯ ದೃಷ್ಟಿಯಿಂದ ಪ್ರಧಾನ ಕಚೇರಿಯ ಎಲ್ಲಾ ವಿಭಾಗಗಳು ಹಾಗೂ ಆನಾಜೆ ಮತ್ತು ಕೈಂದಾಡಿ ಶಾಖೆಗೆ ಸಿಸಿಟಿವಿ ಅಳವಡಿಸಲಾಗಿದೆ. ನಿರಖು ಠೇವಣಿಯ ಬಡ್ಡಿ ದರವನ್ನು ಶೇ.ಅರ್ಧದಷ್ಟು ಏರಿಕೆ, ಆರ್.ಡಿಗೆ ಶೇ.7 ಬಡ್ಡಿದರ, ರೈತರಿಗಾಗಿ ಕೃಷಿ ಸಲಕರಣೆಗಳ ಮಾರಾಟ ಕೇಂದ್ರ ಪ್ರಾರಂಭ, ಸದಸ್ಯರಿಗೆ ಆರು ತಿಂಗಳ ಅವಧಿಗೆ, 1 ತಿಂಗಳ ಬಡ್ಡಿ ರಹಿತ ರಸಗೊಬ್ಬರ ಸಾಲ, ಸಾರ್ವಜನಿಕರ ಅನುಕೂಲಕ್ಕಾಗಿ ಶವ ಸುಡುವ ಪೆಟ್ಟಿಗೆಯನ್ನು ಈಗಾಗಲೇ ಒದಗಿಸಲಾಗುತ್ತಿದೆ. ಇದೀಗ ಸಾಲಗಾರ ಸದಸ್ಯರಿಗೆ ರೂ.5೦೦೦ ಮರಣ ಸಾಂತ್ವನ ನಿಧಿ ವಿತರಿಸಲಾಗಿದೆ. ಇಷ್ಟು ಮಾತ್ರವಲ್ಲದೆ ಸಾಲಗಾರ ಸದಸ್ಯರಿಗೆ ರೂ.2 ಲಕ್ಷದ ಉಚಿತ ಅಪಘಾತ ವಿಮೆ ನೀಡುವ ಯೋಜನೆ ಆಡಳಿತ ಮಂಡಳಿಯಲ್ಲಿದೆ.

LEAVE A REPLY

Please enter your comment!
Please enter your name here