





ಪುತ್ತೂರು: ಮಹಿಳಾ ಬಂಟರ ಸಂಘ ಕೈಕಾರ ವಲಯ ಪುತ್ತೂರು ತಾಲೂಕು ಇದರ ಆಶ್ರಯದಲ್ಲಿ 2ನೇ ವರ್ಷದ “ಆಟಿದ ಐಸಿರ” ಕಾರ್ಯಕ್ರಮವು ಜು.21ರಂದು ಒಳಮೊಗ್ರು ಗ್ರಾಮದ ಕೈಕಾರ ವೀರೇಂದ್ರ ಗಾಂಭೀರರ ಮನೆಯಲ್ಲಿ ನಡೆಯಿತು.


ಸಂಘದ ಗೌರವಾಧ್ಯಕ್ಷೆ ಸೌಮ್ಯ ವೀರೇಂದ್ರ ಗಾಂಭೀರ ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಘದ ಹಲವು ಸದಸ್ಯರು ತಮ್ಮ ಮನೆಯಲ್ಲಿ ತಯಾರಿಸಿದ ವಿವಿಧ ಬಗೆಯ ಆಷಾಢಮಾಸದ ಆರೋಗ್ಯದಾಯಕ ಆಹಾರಗಳು ಗಮನ ಸೆಳೆಯಿತು. ಆಹಾರ ಸ್ಪರ್ಧೆಯನ್ನೂ ಕೂಡ ಆಯೋಜಿಸಲಾಗಿತ್ತು. ಹಲವಾರು ಆಟೋಟ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು.





ಸಂಘದ ಅಧ್ಯಕ್ಷೆ ವಿದ್ಯಾ ರಮಾನಂದ ರೈ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಸುನೀತಾ ಎನ್ ರೈ ವಂದಿಸಿದರು.






