ಪುತ್ತೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ನಡೆದ ಕೊಂಕಣಿ ಲೇಖಕರ ಸಹಮಿಲನದಲ್ಲಿ ಗಂಜಿಮಠ ನಿವಾಸಿ, ಪುತ್ತೂರಿನ ಕಲ್ಲಿಮಾರು ಹೆನ್ರಿ ಮಸ್ಕರೇನ್ಹಸ್ ರವರ ಪತ್ನಿ ಲವಿ ಗಂಜಿಮಠರವರು ಕೊಂಕಣಿ ಭಾಷೆಯಲ್ಲಿ ಬರೆದ ಕಿರು ಕಥೆಗಳ ಸಂಗ್ರಹ “ಆಗುಂಬೆಚಿ ಘುಂವ್ಡಿ(ಆಗುಂಬೆಯ ತಿರುವು)” ಇದರ ಅನಾವರಣವು ಜು.21 ರಂದು ಮಂಗಳೂರಿನ ಸಂದೇಶ ಸಭಾಭವನದಲ್ಲಿ ನೆರವೇರಿತು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸ್ಟ್ಯಾನಿ ಅಲ್ವಾರಿಸ್ ರವರು ಪುಸ್ತಕವನ್ನು ಬಿಡುಗಡೆಗೊಳಿಸಿದರು. ಮೈಕಲ್ ಡಿಸೋಜ ವಿಷನ್ ಕೊಂಕಣಿ ಪುಸ್ತಕ ಯೋಜನೆ ಅನುದಾನದಲ್ಲಿ ಮುದ್ರಣಗೊಂಡ ಈ ಪುಸ್ತಕವು ಲವಿ ಗಂಜಿಮಠ ಇವರ ನಾಲ್ಕನೇ ಸಾಹಿತ್ಯ ಕೃತಿಯಾಗಿದೆ. ಕೊಂಕಣಿ ಸಾಹಿತ್ಯ ಅಕಾಡೆಮಿ ಸಂಚಾಲಕ ರಿಚರ್ಡ್ ಮೋರಸ್, ಸಂದೇಶ ನಿರ್ದೇಶಕರಾದ ವಂ.ಸುದೀಪ್ ಪಾವ್ಲ್, ಲೇಖಕಿ ಲವಿ ಗಂಜಿಮಠ ಹಾಗೂ ಅಕಾಡೆಮಿ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.