ಪುತ್ತೂರು: ಪಾರ್ಟ್‌ಟೈಮ್ ಜಾಬ್ ಇದೆ ಎಂದು ಇನ್ಸ್ಟ್ರಾಗ್ರಾಮ್ ಖಾತೆಗೆ ಸಂದೇಶ ಕಳುಹಿಸಿ ಬಳಿಕ 3.50ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಟ್ಟಣಿಗೆ ಮುಡ್ನೂರು ಗ್ರಾಮದ ಕರ್ನೂರು ಮಡ್ಯಳಮಜಲು ನಿವಾಸಿ ಕುಶಾಲಪ್ಪ ಗೌಡ ಅವರ ಪುತ್ರಿ ಆಶಾ ಎಂಬವರು ದೂರುದಾರರು. ತನ್ನ ಇನ್‌ಸ್ಟಾಗ್ರಾಂ ಖಾತೆಗೆ ಪಾರ್ಟ್ ಟೈಮ್ ಜಾಬ್ ನ ಜಾಹಿರಾತು ಬಂದಿದ್ದು, ಅದನ್ನು ಸಂಪರ್ಕಿಸಿದಾಗ ಟಾರ್ಗೆಟ್ ಕಾರ್ಪೋರೇಶನ್ ಇಂಡಿಯಾ ಕಂಪೆನಿಯಲ್ಲಿ ಪಾರ್ಟ್ ಟೈಮ್ ಜಾಬ್ ವರ್ಕ್ ಆಟ್ ಹೋಮ್ ನೀಡುವುದಾಗಿ ವಾಟ್ಸಪ್‌ಗೆ ಬಂದಿರುವ ಸಂದೇಶದ ಲಿಂಕ್‌ನ್ನು ಒತ್ತಿದಾಗ ಪ್ರತಿ ದಿನ ಟಾರ್ಗೆಟ್ ಟಾಸ್ಕ್ ಪೂರ್ಣಗೊಳಿಸಲು ಅಪರಿಚಿತ ವ್ಯಕ್ತಿಗಳು ತಿಳಿಸಿದ ಬ್ಯಾಂಕ್ ಖಾತೆಗಳಿಗೆ ಹಣವನ್ನು ಹಂತಹಂತವಾಗಿ ವರ್ಗಾವಣೆ ಮಾಡಿದ್ದಾರೆ. ಹೀಗೆ ಒಟ್ಟು ರೂ. 3,50,596 ಅನ್ನು ಹಣ ವರ್ಗಾವಣೆ ಮಾಡಿದ ಬಳಿಕ ತಾನು ವಂಚನೆಗೊಳಪಟ್ಟಿರುವುದನ್ನು ಅರಿತು ಸೆನ್ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಕಲಂ 66(ಸಿ), 66(ಡಿ), ಐಟಿ ಆಕ್ಟ್ ಮತ್ತು 111(1), 111(2) ಬಿಎನ್‌ಎಸ್ ರಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.