ಜು.27: ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ನೇತೃತ್ವದಲ್ಲಿ ‘ಮುಂಡೂರು ಗ್ರಾಮ ಸಾಹಿತ್ಯ ಸಂಭ್ರಮ’

0

ಪುತ್ತೂರು: ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ, ಗ್ರಾಮ ಪಂಚಾಯತ್ ಮುಂಡೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಸಹಕಾರದೊಂದಿಗೆ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಂಯೋಜನೆಯಲ್ಲಿ, ಹೊರನಾಡ ಕನ್ನಡಿಗ ಮಿತ್ರಂಪಾಡಿ ಜಯರಾಮ್ ರೈ ಅಬುದಾಬಿ ಪೋಷಕತ್ವದಲ್ಲಿ, ಯುವ ಜನತೆಯನ್ನು ಸಾಹಿತ್ಯ ಲೋಕದತ್ತ ಬರಮಾಡಿಕೊಳ್ಳುವ ಹಾಗೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮುಂಡೂರು ಗ್ರಾಮದಲ್ಲಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಎಂಬ ಘೋಷ ವಾಕ್ಯದಲ್ಲಿ ನಡೆಸುವ ಗ್ರಾಮ ಸಾಹಿತ್ಯ ಸಂಭ್ರಮ ಸರಣಿ-15 ಮುಂಡೂರು ಪ್ರಾ.ಕೃ.ಪ.ಸ.ಸಂಘದ ಸಭಾಂಗಣದಲ್ಲಿ ಜು.27ರಂದು ಬೆಳಿಗ್ಗೆ 9.30ರಿಂದ ಸಂಜೆ 4 ಗಂಟೆ ವರೆಗೆ ನಡೆಯಲಿದೆ.

ಮುಂಡೂರು ಸ.ಉ.ಹಿ.ಪ್ರಾ ಶಾಲೆಯ ವಿದ್ಯಾರ್ಥಿನಿ ಸಮ್ನ ಅಧ್ಯಕ್ಷತೆ ವಹಿಸಲಿದ್ದು ಮಧ್ಯಾಹ್ನ 3 ಗಂಟೆಗೆ ನಡೆಯುವ ಸಮಾರೋಪ ಭಾಷಣವನ್ನು ಎಸ್.ಜಿ.ಎಂ ಅನುದಾನಿತ ಪ್ರೌಢ ಶಾಲೆಯ ವಿದ್ಯಾರ್ಥಿನಿ ಪೂಜಾ ಮಾಡಲಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಅಧ್ಯಕ್ಷತೆ ವಹಿಸಲಿದ್ದು, ಮುಂಡೂರು ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ ಎನ್‌ಎಸ್‌ಡಿ ಸಮಾರಂಭ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಮುಂಡೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಅಜಿತ್, 21 ನೇ ಪುತ್ತೂರು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ ಶ್ರೀಧರ ಎಚ್.ಜಿ, ನರಿಮೊಗರು ಸಿ.ಆರ್.ಪಿ ಪರಮೇಶ್ವರಿ ಪ್ರಸಾದ್ ಭಾಗವಹಿಸಲಿದ್ದಾರೆ.

9 ಸಾಧಕರಿಗೆ ಸನ್ಮಾನ:
ಮುಂಡೂರು ಗ್ರಾಮದ ವಿವಿಧ ಕ್ಷೇತ್ರದ ಸಾಧಕರಾದ ಮನೋರಮಾ ಹೆಜಮಾಡಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬಿ. ವೆಂಕಟ್ರಮಣ ಶಗ್ರಿತ್ತಾಯ, ಬಿ. ವಿ. ಸೂರ್ಯ ನಾರಾಯಣ ಎಲಿಯ, ವಿನೋದ್ ರೈ ಸೊರಕೆ, ಕೆ.ಎಂ ಹನೀಫ್ ರೆಂಜಲಾಡಿ, ಧರ್ಣಪ್ಪ ಪೂಜಾರಿ, ಜಯರಾಜ್ ಸುವರ್ಣ, ಯೂಸುಫ್ ರೆಂಜಲಾಡಿ, ಕು.ನವ್ಯ ರೆಂಜಲಾಡಿ ಇವರನ್ನು ಮುಂಡೂರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷರಾದ ಸುರೇಶ್ ಕುಮಾರ್ ಸೊರಕೆ ಅಭಿನಂದಿಸಿ ಸನ್ಮಾನಿಸಲಿದ್ದಾರೆ.

ವಿವಿಧ ಗೋಷ್ಠಿಗಳು:
ಸಭಾ ಕಾರ್ಯಕ್ರಮದ ಬಳಿಕ ಸಾಹಿತ್ಯಕ್ಕೆ ಮುಂಡೂರು ಗ್ರಾಮದ ಕೊಡುಗೆ ವಿಷಯದ ಕುರಿತು ತರಂಗ ಪತ್ರಿಕೆಯ ಉಪಸಂಪಾದಕರಾದ ಮನೋರಮಾ ಹೆಜಮಾಡಿ ಹಾಗೂ ಕನ್ನಡದಲ್ಲೂ ಐಎಎಸ್ ಬರೆಯಿರಿ ಕುರಿತು ಪ್ರಣವ್ ಭಟ್ ಉಪನ್ಯಾಸ ನೀಡಲಿದ್ದಾರೆ. ಮುಂಡೂರು ಗ್ರಾಮಕ್ಕೆ ಸಂಬಂಧ ಪಟ್ಟ ಸ.ಉ.ಹಿ.ಪ್ರಾ.ಶಾಲೆ ಮುಂಡೂರು, ಎಸ್.ಜಿ.ಎಂ ಅನುದಾನಿತ ಪ್ರೌಢ ಶಾಲೆ ಸರ್ವೆ, ಸ.ಹಿ.ಪ್ರಾ.ಶಾಲೆ ಭಕ್ತಕೋಡಿ, ಸ.ಹಿ.ಪ್ರಾ.ಶಾಲೆ ಸರ್ವೆ ಕಲ್ಪಣೆ, ಸರಕಾರಿ ಪ್ರೌಢ ಶಾಲೆ ಸರ್ವೆ ಕಲ್ಪಣೆ ಇಲ್ಲಿನ ವಿದ್ಯಾರ್ಥಿಗಳು ಬಾಲ ಕವಿಗೋಷ್ಠಿ, ಬಾಲ ಕಥಾಗೋಷ್ಠಿ, ಅಲ್ಲದೇ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.ಮಕ್ಕಳನ್ನ ಸಾಹಿತ್ಯ ಮತ್ತು ಬರವಣಿಗೆ ಕ್ಷೇತ್ರಕ್ಕೆ ಸೆಳೆಯುವ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಪ್ರವಾಸ ಕಥನ ಅಳವಡಿಸಿಕೊಳ್ಳಲಾಗಿದೆ. ನಂತರ ನಡೆಯುವ ಸಾರ್ವಜನಿಕ ವಿಭಾಗದ ಕವಿಗೋಷ್ಠಿ ಹಿರಿಯ ಸಾಹಿತಿಗಳಾದ ನಾರಾಯಣ ರೈ ಕುಕ್ಕುವಳ್ಳಿಯವರ ಅಧ್ಯಕ್ಷತೆಯಲ್ಲಿ ನೆರವೇರಲಿದೆಯೆಂದು ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕರಾದ ನಾರಾಯಣ ಕುಂಬ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here