ನರಿಮೊಗರು ಶಾಲೆಯಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಮಾಹಿತಿ, ಪ್ರಾತ್ಯಕ್ಷಿಕೆ

0

ಪುತ್ತೂರು: ನರಿಮೊಗರು ಸ.ಹಿ.ಪ್ರಾ.ಶಾಲೆಯಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯ ಎಎಸ್‌ಐ ಧರ್ಮಪಾಲ್ ಮತ್ತು ಸಿಬ್ಬಂದಿಗಳ ಸಹಕಾರದಲ್ಲಿ ನಡೆಯಿತು.

ಹೆಲ್ಮೆಟ್ ರಹಿತ ಚಾಲನೆ, ಅತಿ ವೇಗದ ಚಾಲನೆ, ವಾಹನದ ದಾಖಲೆಗಳ ಪರಿಶೀಲನೆ ನಡೆಸಿ ತಪ್ಪು ಕಂಡು ಬಂದವರಿಗೆ ಗುಲಾಬಿ ನೀಡುವ ಮೂಲಕ ಮುಂದಕ್ಕೆ ತಿದ್ದಿಕೊಳ್ಳುವಂತೆ ಸಂದೇಶ ನೀಡಲಾಯಿತು. ನರಿಮೊಗರು ಹಿ.ಪ್ರಾ.ಶಾಲಾ ಮುಖ್ಯಗುರು ಶ್ರೀಲತಾ ರೈ ಸ್ವಾಗತಿಸಿ ರಸ್ತೆ ಸುರಕ್ಷತಾ ನಿಯಮಗಳು ಹಾಗೂ ಇಲಾಖೆಯ ಪರಿಚಯ ಮಾಡಿಕೊಟ್ಟರು.

ಪೂರ್ವ ಪ್ರಾಥಮಿಕ ವಿಭಾಗದ ‘ಯಲ್ಲೋ ಡೇ’ ಕಾರ್ಯಕ್ರಮ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣರಾಜ ಜೈನ್, ಸದಸ್ಯರಾದ ಸಲೀಂ ಮಾಯಂಗಳ, ಸೌಮ್ಯ, ಗಾಯತ್ರಿ, ಶೋಭಾ, ಎಸ್‌ಡಿಎಂಸಿ ಜಿಲ್ಲಾ ಸಮನ್ವಯ ವೇದಿಕೆಯ ಉಪಾಧ್ಯಕ್ಷ ಪ್ರವೀಣ್ ಆಚಾರ್ಯ ಉಪಸ್ಥಿತರಿದ್ದರು. ಶಿಕ್ಷಕರಾದ ಸುಮನ, ಜೋಸ್ಲಿನ್ ಪಸನ್ಹ, ಸ್ನೇಹಲತಾ, ಮಂಜುಳಾ, ಸ್ವಾತಿ, ನಯನ್, ದಿವ್ಯ ಮತ್ತು ರಕ್ಷಿತಾರವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here