ಪುತ್ತೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ (ಎಸ್.ಪಿ.ವೈ.ಎಸ್ಸ್.ಎಸ್) ವತಿಯಿಂದ ಎರಡನೇ ಬಾರಿಗೆ ಪುತ್ತೂರಿನ ಅಮರ್ ಜವಾನ್ ಜ್ಯೋತಿ ಸ್ಮಾರಕದಲ್ಲಿ ಜು.26ರಂದು ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಯಿತು.
ಮುಖ್ಯ ಅಭ್ಯಾಗತರಾಗಿ ಪುತ್ತೂರು ನಗರಸಭೆ ಆಯುಕ್ತ ಮಧು ಮನೋಹರ್ ಹಾಗೂ ಅಂಬಿಕಾ ವಿದ್ಯಾಲಯ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಆಗಮಿಸಿದ್ದರು. ಮಾಜಿ ಸೈನಿಕರು ಹಾಗು ಸುಭದ್ರ ಶಾಖೆಯ ಯೋಗ ಬಂಧು ರಾಮಚಂದ್ರ ಪುಚ್ಚೆರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಮಾತುಗಾರರಾಗಿ ಕಲ್ಲೇಗ ಶಾಖೆಯ ಶಿಕ್ಷಕರು ಹಾಗು ಕಾರ್ಯಕ್ರಮದ ಸಂಚಾಲಕ ಲಕ್ಷ್ಮೀಕಾಂತ ವೇದಿಕೆಯಲ್ಲಿದ್ದರು.
ಸಮಿತಿಯ ಸುಮಾರು 250 ಕ್ಕೂ ಹೆಚ್ಚು ಯೋಗಬಂಧುಗಳು ವೀರ ಯೋಧರಿಗೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು. ಮಾಜಿ ಯೋಧರಾದ ಜಗನ್ನಾಥ ರೈ, ವಸಂತ ಕುಮಾರ್ ರೈ, ದಯಾನಂದ, ಹರೀಣ್ ಕುಮಾರ್, ಮಾಧವ ಬಿ.ಕೆ, ರಾಮಚಂದ್ರ ಪುಚ್ಚೆರಿ ಇವರನ್ನು ಶಾಲು ಹೊದಿಸಿ ಫಲ ಪುಷ್ಪಗಳನ್ನು ನೀಡಿ ಗೌರವಿಸಲಾಯಿತು.
ವೀರಯೋಧರ ಪರವಾಗಿ ಜಗನ್ನಾಥ್ ರು ತಮ್ಮ ಅನುಭವ ಹಂಚಿಕೊಂಡರು. ತಾಲ್ಲೂಕು ಶಿಕ್ಷಣ ಪ್ರಮುಖ ಗಣೇಶ್ ಮಾರ್ಗದರ್ಶನ ಮಾಡಿದರು. ಜಿಲ್ಲಾ ಪ್ರಮುಖ ಸೂರಜ್, ಆನಂದ ಕದ್ರಿ, ತಾಲೂಕು ಪ್ರಮುಖ ಅಶೋಕ್, ಪುತ್ತೂರು ತಾಲೂಕು ಸಹ ಶಿಕ್ಷಣ ಪ್ರಮುಖ ಪ್ರದೀಪ್ ಉಪ್ಪಿನಂಗಡಿ ಉಪಸ್ಥಿತರಿದ್ದರು.
ಸುಜಾತಾ ಅತಿಥಿಗಳನ್ನು ಸ್ವಾಗತಿಸಿ ನಿರೂಪಣೆ ಮಾಡಿದರು. ವೈಯಕ್ತಿಕ ಪ್ರಾರ್ಥನೆಯನ್ನು ಅಸ್ಮಿತಾ ಮಾಡಿದರು. ಲಲಿತಾ ವಂದಿಸಿದರು. ವರಲಕ್ಷ್ಮಿ ‘ಒಂದೇ ಮಾತರಂ’ ಹಾಡಿನೊಂದಿಗೆ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು.