ಹಿಂದಿನ ಕಾಲದ ಆಹಾರ ಪದ್ಧತಿ ಇಂದು ನಶಿಸಿ ಹೋಗುತ್ತಿದೆ-ಎಚ್.ಎಂ. ಕೃಷ್ಣಕುಮಾರ್
ಪುತ್ತೂರು: ಎಪಿಎಂಸಿ ರಸ್ತೆಯ ಕ್ರಿಸ್ತೋ-ರ್ ಕಟ್ಟಡದಲ್ಲಿ ವ್ಯವಹರಿಸುತ್ತಿರುವ ಸುದ್ದಿ ಅರಿವು ಕೃಷಿ ಸೇವಾ ಕೇಂದ್ರದಿಂದ ಆಹಾರೋದ್ಯಮ ಪ್ರಾರಂಭಿಸುವವರು ಹಾಗೂ ಈಗಾಗಲೇ ಆಹಾರೋದ್ಯಮ ನಡೆಸುತ್ತಿರುವವರಿಗೆ ಜು.27ರಂದು ಬೆಳಗ್ಗೆ 10 ಗಂಟೆಯಿಂದ ಅರಿವು ಕೃಷಿ ಕೇಂದ್ರದಲ್ಲಿ ಮಾಹಿತಿ ಕಾರ್ಯಾಗಾರ ನಡೆಯಿತು.
ಪ್ರಗತಿಪರ ಕೃಷಿಕ ಪಿ.ಕೆ.ಎಸ್.ಭಟ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿದ್ದ ಪುತ್ತೂರು ತಾಲೂಕು ಪಂಚಾಯತ್ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಹಾಯಕ ನಿರ್ದೇಶಕಿ ಶೈಲಜಾರವರು ಮಾತನಾಡಿ ಸುದ್ದಿ ಸಮೂಹ ಸಂಸ್ಥೆಗಳಿಂದ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಆಹಾರ ಉದ್ಯಮ ನನಗೆ ಹೊಸ ಕ್ಷೇತ್ರವಾಗಿದೆ. ಉದ್ಯಮ ನಡೆಸಲು ಹಲವಾರು ಅವಕಾಶಗಳಿವೆ. ಉದ್ಯಮಕ್ಕಾಗಿ ಪಿಎಂಎ-ಎಮ್‌ಇ ಯೋಜನೆಯಲ್ಲಿ ಸಾಲ ಸೌಲಭ್ಯ ನೀಡಲಾಗುತ್ತದೆ. ಮಹಿಳೆಯರಿಗೂ ಉದ್ಯಮ ಪ್ರಾರಂಭಿಸಲು ಅವಕಾಶ ನೀಡಲಾಗಿದೆ. 18 ವರ್ಷದ ಮೇಲಿನ ಎಲ್ಲರೂ ಯೋಜನೆಯ ಲಾಭ ಪಡೆಯಬಹುದು ಎಂದರು. ಉದ್ಯಮದಲ್ಲಿ ಮೌಲ್ಯವರ್ಧನ ಉತ್ಪನ್ನಗಳನ್ನು ಮಾಡಬಹುದು. ಮೌಲ್ಯವರ್ಧನದಲ್ಲಿ ಲಾಭ ಹೆಚ್ಚು ಇದೆ ಎಂದು ಹೇಳಿ ಕಾರ್ಯಕ್ರಮದ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಿ ಎಂದರು.
ಕ್ಯಾಂಪ್ಕೊದ ಮಾಜಿ ವ್ಯವಸ್ಥಾಪಕ ನಿರ್ದೇಶಕ, ಆಹಾರ ತಂತ್ರಜ್ಞ ಎಚ್.ಎಂ. ಕೃಷ್ಣಕುಮಾರ್ ಮಾತನಾಡಿ, ಅನ್ನ ಎಂದರೆ ಬ್ರಹ್ಮ, ಆಹಾರ ಎಂದರೆ ದೇವರು. ಆಹಾರಕ್ಕೆ ದೇವರ ಶಕ್ತಿ ಇದೆ. ನಾವು ಮಾಡಿದ ಆಹಾರ ಉತ್ಪನ್ನಗಳಿಂದ ಇನ್ನೊಬ್ಬರಿಗೆ ತೊಂದರೆ ಆಗಬಾರದು ಎಂದರು. ಹಿಂದಿನ ಕಾಲದ ಆಹಾರ ಪದ್ಧತಿಯಲ್ಲಿ ಶಕ್ತಿ ಇತ್ತು. ಇಂದು ಅದು ನಶಿಸಿ ಹೋಗುತ್ತಿದೆ. ಆಹಾರದಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಹೇಳಿದ ಅವರು ಬೆಳಿಗ್ಗೆ ಆಹಾರ ಸಂಸ್ಕರಣೆ, ಸ್ಟಾರ್ಟಪ್ ಮತ್ತು ವಿದ್ಯಾರ್ಥಿಗಳಿಗೆ ಆಹಾರ ಪದಾರ್ಥ ಸಂಸ್ಕರಣೆಯ ಸಾಮಾನ್ಯ ತತ್ವಗಳು ವಿಷಯ ಮತ್ತು ಅಪರಾಹ್ನ ಆಹಾರ ಉದ್ಯಮದಾರರಿಗೆ ಮೌಲ್ಯವರ್ಧನೆ- ವೇಸ್ಟ್ ಕಡಿಮೆಗೊಳಿಸುವಿಕೆ ಕುರಿತು ಮಾಹಿತಿ ಶಿಬಿರ ನಡೆಸಿಕೊಟ್ಟರು. ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ಲೋಬಲ್ ಇನ್‌ಸ್ಟಿಟ್ಯೂಷನ್ ಮತ್ತು ರಿಸರ್ಚ್ ಸೆಂಟರ್‌ನ ರಾಜ್ಯ ನಿರ್ದೇಶಕ ಆಶಿಕ್, ಸುದ್ದಿ ಸಮೂಹ ಸಂಸ್ಥೆಗಳ ಸಿಇಒ ಸೃಜನ್ ಉರುಬೈಲು, ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆಯ ಸಿಇಒ ಸಿಂಚನಾ ಉರುಬೈಲು, ಸುದ್ದಿ ಬಿಡುಗಡೆಯ ರಾಜೇಶ್ ಎಂ.ಎಸ್.ಮಾಡಾವು, ಶಿವಕುಮಾರ್ ಈಶ್ವರಮಂಗಲ, ಚಂದ್ರಕಾಂತ್ ಉರ್ಲಾಂಡಿ , ಕುಶಾಂತ್ ಸುಳ್ಯ, ಅಶ್ವಥ್, ಕಾರ್ತಿಕ್, ಸುದ್ದಿ ಕೃಷಿ ಸೇವಾ ಕೇಂದ್ರದ ಚೈತ್ರ ನೆಕ್ಕಿಲು, ರಮ್ಯಾ, ರಕ್ಷಾ, ರಾಜೇಶ್ ರಾವ್, ಹಸೈನಾರ್ ಜಯನಗರ ಸುಳ್ಯ ಸುದ್ದಿ, ಪ್ರಶಾಂತ್, ರಮೇಶ್ ಬೆಳ್ಳಿಪ್ಪಾಡಿ, ಬೆಳ್ತಂಗಡಿ ಸುದ್ದಿ ಬಿಡುಗಡೆಯ ಸಂದೀಪ್ ಶೆಟ್ಟಿ, ಸುವೀರ್ ಜೈನ್, ನೈನ ಪ್ರಸಾದ್ ಉಪಸ್ಥಿತರಿದ್ದರು. ಸುದ್ದಿ ಮಾಹಿತಿ ವಿಭಾಗದ ಹರಿಪ್ರಸಾದ್ ಸ್ವಾಗತಿಸಿ ವಂದಿಸಿದರು. ಕಾರ್ಯಾಗಾರದಲ್ಲಿ ಇಂದಿರಾ ಬಿ.ಬಿ., ಐಶ್ವರ್ಯ ರೈ, ಶೃತಿ, ಪ್ರೇಮ್, ನಿತಿನ್ ಶೆಣೈ, ನವೀನ್ ಕೃಷ್ಣ ಶಾಸ್ತ್ರೀ, ಗೋಪಾಲಕೃಷ್ಣ ರಾವ್, ಶ್ರೀಕಾಂತ್ ಭಟ್, ವಿನಯ್ ಪುತ್ತೂರು, ಲಲಿತಾ ಚಂದ್ರಶೇಖರ್, ನವೀನ್ ಮುಕ್ವೆ, ಬಾಲಕೃಷ್ಣ ಮುಂಗ್ಲಿಮನೆ, ಪುನೀತ್ ಕಾಣಿಯೂರು, ಅನ್ವಿತಾ ರಾಮಕುಂಜ, ಅನಿಲ್ ರಾಮಕುಂಜ, ಹಾರ್ದಿಕ್ ಕಲ್ಲಾರೆ, ಎಸ್.ಗಣಪತಿ ಭಟ್ ಎಕ್ಕಡ್ಕ, ಸುಜಾತ ಕುರಿಯ, ರಜತ್ ರಾವ್, ಮಯೂರ್, ಕೆ.ಸಿ.ಅಶೋಕ ಶೆಟ್ಟಿ, ಡಾ.ಜೆ.ಗಣಪತಿ ಭಟ್, ವೆಂಕಟ್ರಮಣ ಪುಣಚ, ರಶೀದ್ ಉಪ್ಪಿನಂಗಡಿ, ಪ್ರತೀಕ್.ಪಿ., ಆಶಾ ಭಂಡಾರಿ ಕುರಿಯ ಹಾಗೂ ದರ್ಬೆ ಬ್ಯಾಂಕ್ ಆಫ್ ಬರೋಡಾದ ಇಂದುಮತಿ, ಕಾರ್ತಿಕ್ ರವರು ಭಾಗವಹಿಸಿದ್ದರು.