ಜಿ.ಎಲ್.ಆಚಾರ್ಯ ಜ್ಯುವೆಲ್ಲರ‍್ಸ್‌ನಲ್ಲಿ ಆಟಿ ಸೇಲ್ ಪ್ರಯುಕ್ತ ಗೋಲ್ಡನ್ ಆಫರ್-ವಜ್ರ, ಚಿನ್ನ, ಬೆಳ್ಳಿಯ ಆಭರಣಗಳ ಖರೀದಿಗೆ ವಿಶೇಷ ಕೊಡುಗೆ ಯೋಜನೆ

0

ಪುತ್ತೂರು: ಪುತ್ತೂರು, ಸುಳ್ಯ, ಮೂಡಬಿದ್ರೆ, ಹಾಸನ ಮತ್ತು ಕುಶಾಲನಗರದಲ್ಲಿರುವ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ‍್ಸ್‌ನಲ್ಲಿ ಆಟಿ ಸೇಲ್ ಪ್ರಯುಕ್ತ ಗ್ರಾಹಕರಿಗೆ ವಜ್ರಾ, ಚಿನ್ನ ಹಾಗೂ ಬೆಳ್ಳಿಯ ಆಭರಣಗಳ ಖರೀದಿಗೆ ಆಕರ್ಷಕ ಕೊಡುಗೆಗಳ ಯೋಜನೆಯ ಉದ್ಘಾಟನೆ ಕಾರ್ಯಕ್ರಮ ಜು.29ರಂದು ಸಂಸ್ಥೆಯ ಡೈಮಂಡ್ ವಿಭಾಗದಲ್ಲಿ ನಡೆಯಿತು.


ರೋಟರಿ ಕ್ಲಬ್ ಪುತ್ತೂರು ಇದರ ನೂತನ ಅಧ್ಯಕ್ಷ ಪುತ್ತೂರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಶ್ರೀಪತಿ ರಾವ್ ಆಟಿ ಸೇಲ್ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿ ಆಲಂಕಾರಿಕ ವಸ್ತುವಾಗಿರುವ ಚಿನ್ನಾಭರಣ ಇವತ್ತು ಇತ್ತೀಚಿಗಿನ ವರ್ಷಗಳಲ್ಲಿ ಹೂಡಿಕೆಗೂ ಬಹಳ ಉತ್ತಮವಾಗಿದೆ. ಇದು ಬಹಳ ಸುಲಭದ ಹೂಡಿಕೆ ಮತ್ತು ಹೆಚ್ಚು ಭದ್ರತೆಯೂ ಇದೆ. ಇವತ್ತು ಚಿನ್ನದ ದರ ಏರುಪೇರಾಗುವ ಸಂದರ್ಭ ಆಟಿಯ ಸಮಯದಲ್ಲಿ ಕನಿಷ್ಠ ದರ ಇಳಿಕೆಯಾದುದರಿಂದ ಗ್ರಾಹಕರಿಗೆ ತುಂಬಾ ಅನುಕೂಲ ಆಗುವ ನಿಟ್ಟಿನಲ್ಲಿ ಜಿ.ಎಲ್.ಆಚಾರ್ಯ ಜ್ಯುವೆಲ್ಲರ‍್ಸ್‌ನ ಬಲರಾಮ ಆಚಾರ್ಯ ಅವರು ಈ ಕಾರ್ಯಕ್ರಮ ಆಯೋಜಿಸಿದ್ದು ಗ್ರಾಹಕರಿಗೆ ತುಂಬಾ ಪ್ರಯೋಜವಾಗಲಿದೆ ಎಂದರು.


ಆಟಿಯ ನಂಬಿಕೆಗೆ ತಕ್ಕಂತೆ ಚಿನ್ನಾಭರಣಗಳ ಮೇಲೆ ವಿಶೇಷ ಆಫರ್ :
ಜಿ.ಎಲ್.ಆಚಾರ್ಯ ಜ್ಯುವೆಲ್ಲರ‍್ಸ್‌ನ ಮಾಲಕ ಜಿ.ಎಲ್.ಬಲರಾಮ ಆಚಾರ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಹೆಚ್ಚಾಗಿ ಜನರಲ್ಲಿ ಆಟಿ ತಿಂಗಳಲ್ಲಿ ತುಳುನಾಡಿನಲ್ಲಿ ಚಿನ್ನಾಭರಣಗಳಿಗೆ ಕಡಿಮೆಯಾಗುತ್ತದೆ ಎಂಬ ನಂಬಿಕೆಯಂತೆ ಚಿನ್ನಾಭರಣಗಳ ಮೇಲೆ ವಿಶೇಷ ಆಫರ್ ನೀಡಿದ್ದೇವೆ. ಮಾರುಕಟ್ಟೆಯಲ್ಲಿರುವ ವಸ್ತು ಸ್ಥಿತಿ ಮತ್ತು ಆಟಿ ತಿಂಗಳ ನಂಬಿಕೆಗೆ ನೇರ ಸಂಬಂಧವಿಲ್ಲ. ಯಾಕೆಂದರೆ ಚಿನ್ನದ ದರ ನಿರ್ಧಾರ ಆಗುವುದು ಅಂತರಾಷ್ಟ್ರೀಯ ಮಟ್ಟದಲ್ಲಿ. ಆದರೂ ಜನರಲ್ಲಿ ಚಿನ್ನಾಭರಣಗಳಿಗೆ ಆಟಿಯಲ್ಲಿ ಕಡಿಮೆ ಆಗುತ್ತದೆ ಎಂಬ ನಂಬಿಕೆಗೆ ಅನುಗುಣವಾಗಿ ನಾವು ವಜ್ರ, ಚಿನ್ನ, ಬೆಳ್ಳಿಯ ಮೇಲೆ ವಿಶೇಷ ಆಫರ್ ನೀಡಿದ್ದೇವೆ. ಸಂಪ್ರದಾಯದಂತೆ ಆಟಿಯಲ್ಲಿ ಖರೀದಿಸಿದ ಚಿನ್ನಾಭರಣಗಳಿಂದಾಗಿ ಜನರ ಜೀವನ ಇಮ್ಮಡಿಯಾಗಲಿ ಎಂದು ಹಾರೈಸಿದರು. ಈ ಸಂದರ್ಭ ಸಂಸ್ಥೆಯ ಆಡಳಿತ ನಿರ್ದೇಶಕ ಲಕ್ಷ್ಮೀಕಾಂತ್ ಆಚಾರ್ಯ ಉಪಸ್ಥಿತರಿದ್ದರು. ಸಂಸ್ಥೆಯ ಸಿಬ್ಬಂದಿಗಳು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಉದ್ಯಮ ಯಶಸ್ವಿಗೆ ಗುಣಮಟ್ಟ ಮತ್ತು ನಂಬಿಕೆ ಇರಬೇಕು. ಇವೆರಡು ಇಲ್ಲದೆ ವೈದ್ಯಕೀಯ ಆಗಿರಬಹುದು ಅಥವಾ ಉದ್ಯಮ ಸಂಸ್ಥೆಯೂ ಆಗಿರಬಹುದು ಯಶಸ್ವಿಯಾಗಲು ಸಾಧ್ಯವಿಲ್ಲ. ಇಂತಹ ಗುಣಮಟ್ಟ ಮತ್ತು ನಂಬಿಕೆಯನ್ನು ಜಿ.ಎಲ್.ಆಚಾರ್ಯ ಜ್ಯುವೆಲ್ಲರ‍್ಸ್ ಸಂಸ್ಥೆಯು ಜಿ.ಎಲ್. ಆಚಾರ್ಯ ಅವರ ಕಾಲದಿಂದಲೂ ಬಂದಿದೆ. ಅದನ್ನು ಅವರ ಪುತ್ರ ಜಿ.ಎಲ್.ಬಲರಾಮ ಆಚಾರ್ಯ ಅವರು ಮುಂದುವರಿಸಿಕೊಂಡು ಬಂದಿದ್ದಾರೆ. ಈ ಸಂಸ್ಥೆ ಬೆಳವಣಿಗೆಯಾಗಲಿ.
ಡಾ. ಶ್ರೀಪತಿ ರಾವ್, ಅಧ್ಯಕ್ಷರು ರೋಟರಿಕ್ಲಬ್ ಪುತ್ತೂರು

ಹೀಗಿದೆ ಆಫರ್ …
ಆಫರ್‌ನಲ್ಲಿ ಗ್ರಾಹಕರು ಖರೀದಿಸುವ ಚಿನ್ನಾಭರಣಗಳ ಮೇಲೆ ಪ್ರತೀ ಗ್ರಾಂ.ಗೆ ರೂ. 200ರವರೆಗೆ ಕಡಿತ ಹಾಗೂ ಪ್ರತೀ 1 ಕ್ಯಾರೆಟ್ ವಜ್ರಾಭರಣಗಳ ಖರೀದಿಯಲ್ಲಿ ರೂ. 5000 ವರೆಗಿನ ಕಡಿತ ಮತ್ತು ಬೆಳ್ಳಿಯ ಆಭರಣಗಳ ಖರೀದಿಗೆ ಪ್ರತೀ ಕೆ.ಜಿ.ಗೆ ರೂ. 2000 ರಿಯಾಯಿತಿ ನೀಡಲಾಗುವುದು.ಯೆಲ್ಲೋ ಟ್ಯಾಗ್ ಹೊಂದಿರುವ ಅತ್ಯಾಕರ್ಷಕ ವಿಎ ಶುಲ್ಕದೊಂದಿಗೆ ವಿಶೇಷ ಆಭರಣಗಳ ಸಂಗ್ರಹವಿದ್ದು ಈ ವಿಎ ಶುಲ್ಕ ಶೇ.6 ರಿಂದ ಪ್ರಾರಂಭವಾಗುತ್ತದೆ ಮತ್ತು ಈ ಆಫರ್ ಚಿನ್ನದ ಗಟ್ಟಿ ನಾಣ್ಯಗಳಿಗೆ ಹಾಗೂ ಯಾವುದೇ ಯೋಜನೆ ಅಥವಾ ಮಾಸಿಕ ಕಂತಿನ ಯೋಜನೆಯೊಂದಿಗೆ ಸೇರಿಸಲಾಗುವುದಿಲ್ಲ.

ಸಂಸ್ಥೆಯ ವಿಶೇಷತೆಗಳು:
ಶೇ.100 ಬಿಎಎಸ್ ಹಾಲ್ ಮಾರ್ಕ್ ಹೊಂದಿರುವ ಶುದ್ಧ ಚಿನ್ನ, ನ್ಯಾಯೋಚಿತ ತಯಾರಿಕಾ ವೆಚ್ಚ, ಸಂಪೂರ್ಣ ಪಾರದರ್ಶಕತೆಯ ಬಿಲ್ಲಿಂಗ್, ಸಿಬ್ಬಂದಿಗಳ ನಗುಮೊಗದ ಸೇವೆ, ಖರೀದಿಯ ಬಳಿಕವೂ ವಸ್ತುಗಳ ಮೇಲೆ ಉತ್ತಮ ಸೇವೆ ಹಾಗೂ ಚಿನ್ನದ ಪರಿಶುದ್ಧತೆಯನ್ನು ಪರೀಕ್ಷಿಸಲು ಸ್ಪೆಕ್ಟ್ರಾಮೀಟರ್ ಸಹ ಲಭ್ಯವಿದೆ.

ಆಟಿಗೆ ಪೂರಕವಾಗಿ ಚಿನ್ನಾಭರಣ ದರಲ್ಲೂ ಇಳಿಕೆ:
ಆಧುನಿಕ ಮತ್ತು ಪಾರಂಪರಿಕ ಚಿನ್ನದ ಆಭರಣಗಳು, ವಜ್ರಾಭರಣಗಳು ಹಾಗೂ ಗುಣಮಟ್ಟದ ಚಿನ್ನಾಭರಣಗಳ ಮಾರಾಟ ನಮ್ಮ ಗುರಿ. ಷರತ್ತುಗಳ ಅನ್ವಯದೊಂದಿಗೆ ಈ ಸ್ಪೆಷಲ್ ಆಫರ್ ಎಲ್ಲಾ ಮಳಿಗೆಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ ಹಾಗೂ 2024ರ ಕೇಂದ್ರ ಬಜೆಟ್ ನಲ್ಲಿ ಚಿನ್ನದ ದರದಲ್ಲಿ ಆಗಿರುವ ಇಳಿಕೆಯ ಲಾಭವನ್ನು ಗ್ರಾಹಕರು ಪಡೆದುಕೊಳ್ಳಬೇಕೆಂದು ಜಿ.ಎಲ್.ಬಲರಾಮ ಆಚಾರ್ಯ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here