





ಪುತ್ತೂರು: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೆಯ್ಯೂರು ಗ್ರಾಮದ ಕೆಲವು ಕಡೆಗಳಲ್ಲಿ ಹಾನಿಯುಂಟಾದ ಬಗ್ಗೆ ವರದಿಯಾಗಿದೆ. ಕೆಯ್ಯೂರು ಗ್ರಾಮದ ಕಟ್ಟತ್ತಾರು ನಿವಾಸಿ ಯೂಸುಫ್ ಎಂಬವರ ಮನೆ ಹಿಂದೆ ಗುಡ್ಡ ಕುಸಿತಗೊಂಡಿದ್ದು ಮನೆಗೆ ಹಾನಿಯುಂಟಾಗಿದೆ. ಎರಕ್ಕಳ ಹರೀಶ್ ಗೌಡರವರ ಮನೆಯ ಹಿಂಬಾಗದಲ್ಲಿ ಮಣ್ಣು ಕುಸಿತಗೊಂಡು ಹಾನಿಯುಂಟಾಗಿದೆ. ಹಾಗೇ ಸಣಂಗಳ ಗಂಗಾಧರ ರೈ ಎಂಬವರ ಮನೆಗೆ ಮರ ಬಿದ್ದು ಹಾನಿಯುಂಟಾಗಿದೆ ಎಂದು ತಿಳಿದು ಬಂದಿದೆ.



ಸ್ಥಳಕ್ಕೆ ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆ, ಗ್ರಾಮ ಆಡಳಿತ ಅಧಿಕಾರಿ ಸ್ವಾತಿ, ಸದಸ್ಯರಾದ ಜಯಂತಿ ಎಸ್. ಭಂಡಾರಿ, ವಿಜಯ ಕುಮಾರ್ ಸಣಂಗಳ, ಜಯಂತ ಪೂಜಾರಿ ಕೆಂಗುಡೇಲು, ಅಬ್ದುಲ್ ಖಾದರ್ ಮೇರ್ಲ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹನೀಫ್ ಮತ್ತು ತಂಡದವರು ಮನೆಗೆ ಬಿದ್ದ ಮರವನ್ನು ತೆರವುಗೊಳಿಸಲು ಸಹಕರಿಸಿದ್ದರು.














