ನಿಡ್ಪಳ್ಳಿ; ಇಲ್ಲಿಯ ಕುಕ್ಕುಪುಣಿಯಿಂದ ನಾಕುಡೇಲು ಶ್ರೀ ಶಾಂತದುರ್ಗಾ ದೇವಸ್ಥಾನ ಆಗಿ ಹನುಮಗಿರಿ ಹೋಗುವ ರಸ್ತೆಯಲ್ಲಿ ಪಟ್ಟೆ ಎಂಬಲ್ಲಿ ರಸ್ತೆ ಬದಿ ಗುಡ್ಡ ಕುಸಿದು ಬಿದ್ದ ಘಟನೆ ಜು.30 ರಂದು ನಡೆದಿದೆ.
ಕೆಲವು ದಿನಗಳ ಹಿಂದೆ ಸುರಿದ ಮಳೆಗೆ ಸ್ವಲ್ಪ ಮಣ್ಣು ಕುಸಿದಿತ್ತು.ಪುನಃ ಮತ್ತೆ ಕುಸಿದು ಬಿದ್ದು ಚರಂಡಿ ಮುಚ್ಚಿದ್ದು ನೀರು ರಸ್ತೆ ಮೇಲೆ ಹರಿಯುತ್ತಿದೆ. ಮಣ್ಣು ಜರಿದು ಬಿದ್ದ ಜಾಗದಲ್ಲಿ ಮೇಲೆ ಇದ್ದ ಅಪಾಯಕಾರಿ ಮರವನ್ನು ಇತ್ತೀಚೆಗೆ ತೆರವುಗೊಳಿಸಿ ದೊಡ್ಡ ಮಟ್ಟದ ಅಪಾಯವನ್ನು ತಪ್ಪಿಸಲಾಗಿತ್ತು.ಇನ್ನೂ ಕೂಡ ಅಲ್ಲಿ ಮಣ್ಣು ಕುಸಿಯುವ ಸ್ಥಿತಿಯಲ್ಲಿ ಇದ್ದು ಸಾರ್ವಜನಿಕರು ಆತಂಕದಿಂದಿದ್ದಾರೆ.