ಪುತ್ತೂರು: ಸಂಸ್ಕಾರ ಭಾರತೀ ದ.ಕ.ಜಿಲ್ಲೆ, ಪುತ್ತೂರು ತಾಲೂಕು ವಿಭಾಗದ ವತಿಯಿಂದ ಇಡ್ಕಿದು ಗ್ರಾಮದ ಅಳಕೆಮಜಲಿನಲ್ಲಿ ವಾಸಿಸುವ ಹಿರಿಯ ದೈವ ನರ್ತಕ ಕರಿಯ ಅಜಿಲ ಕಡ್ಯ ಅವರಿಗೆ ಗುರುಪೂರ್ಣಿಮೆಯ ಅಂಗವಾಗಿ ಅವರ ಸ್ವಗೃಹದಲ್ಲಿ ಜು.28ರಂದು ಸನ್ಮಾನಿಸಿ ಅಭಿನಂದಿಸಲಾಯಿತು.
ಹಲವಾರು ವರ್ಷಗಳಿಂದ ತಮ್ಮ ಕಾಯಕವನ್ನು ಶ್ರದ್ಧೆಯಿಂದ ಪಾಲಿಸುತ್ತಾ ಬಂದ ಇವರು; ತಮ್ಮನ್ನು ಗುರುತಿಸಿ, ದಂಪತಿಗೆ ನೀಡಿದ ಅಭಿನಂದನೆಗೆ ಕೃತಜ್ಞತೆಯನ್ನು ಸಲ್ಲಿಸಿ ಮಾತನಾಡಿ ನಂಬಿದ ದೇವ ದೈವರುಗಳ ದಯೆಯಿಂದ ಅನಕ್ಷರಸ್ಥನಾದ ತನಗೆ ದೈವ ಸೇವೆ ಮಾಡುವ ಭಾಗ್ಯ ಒದಗಿ ಬಂದಿದೆ. ಈ ಮೊದಲೆ ಹಲವಾರು ಪುರಸ್ಕಾರಗಳು ಲಭಿಸಿದ್ದರೂ, ತಮ್ಮ ಮನೆಯಲ್ಲಿಯೇ ಪಡೆದ ಈ ಪುರಸ್ಕಾರವು ಜೀವಮಾನದಲ್ಲಿ ಪ್ರಥಮವಾಗಿದ್ದು, ಅತೀವ ತೃಪ್ತಿ, ಆನಂದವನ್ನು ನೀಡಿದೆ ಎಂದು ತಮ್ಮ ಸಂತಸವನ್ನು ವ್ಯಕ್ತಪಡಿಸಿದರು.
ಸನ್ಮಾನಿತರ ಪತ್ನಿ ಗಂಗು ಹಾಗೂ ಕುಟುಂಬದ ಸದಸ್ಯರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ತಾಲೂಕು ಸಂಯೋಜಕ ವಿದ್ವಾನ್ ದೀಪಕ್ ಕುಮಾರ್ ಪ್ರಾಸ್ತಾವಿಕ ನುಡಿಗಳೊಂದಿಗೆ ಕಾರ್ಯಕ್ರಮ ನಿರ್ವಹಿಸಿದರು. ಜಿಲ್ಲಾ ಉಪಾಧ್ಯಕ್ಷ ರೂಪಲೇಖ ಅಭಿನಂದನಾ ಪತ್ರವನ್ನು ವಾಚಿಸಿದರು.
ಸದಸ್ಯೆಯರಾದ ಪದ್ಮಾ ಆಚಾರ್ಯ, ಜಯಲಕ್ಷ್ಮಿ ವಿ. ಭಟ್, ವೀಣಾ ಕೊಳತ್ತಾಯ, ಶಂಕರಿ ಶರ್ಮ, ಆಶಾ ರಾವ್, ಕರ್ನಾಟಕ ಜಾನಪದ ಕಲಾಪರಿಷತ್ತು ಪುತ್ತೂರು ವಿಭಾಗದ ಉಪಾಧ್ಯಕ್ಷ ಸುಧಾಕರ ಕುಲಾಲ್ ಹಾಗೂ ಸನ್ಮಾನಿತರ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಸದಸ್ಯರಾದ ವಿದ್ವಾನ್ ಗೋಪಾಲಕೃಷ್ಣ ವೀರಮಂಗಲ ಸ್ವಾಗತಿಸಿ, ವಿದುಷಿ ನಯನ ವಿ. ರೈ ವಂದಿಸಿದರು., ವಿದುಷಿ ಪ್ರೀತಿಕಲಾ ಸಹಕರಿಸಿದರು.