ಸುದಾನ ವಸತಿ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ

0

ಪುತ್ತೂರು: ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ಜು.30ರಂದು ಐದರಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಶಾಲಾ ಮುಖ್ಯಶಿಕ್ಷಕಿ ಶೋಭಾ ನಾಗರಾಜ್ ಹಿರಿಯ ವಿಜ್ಞಾನಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ರವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವು ಬೆಳೆಯಬೇಕು, ಪರಿಸರವನ್ನು ಸೂಕ್ಷ್ಮವಾಗಿ ಅವಲೋಕಿಸುವ ಕುತೂಹಲ ಪ್ರಜ್ಞೆಯು ಜಾಗೃತವಾಗಬೇಕು, ಮನುಕುಲವನ್ನು ಉಳಿಸುವ ಅವಿಷ್ಕಾರಗಳತ್ತ ಒಲವು ತೋರಬೇಕು ಎಂದರು. ಶಾಲೆಯ ವಿಜ್ಞಾನ ಸಂಘದ ವಿದ್ಯಾರ್ಥಿ ಕಾರ್ಯದರ್ಶಿ ಮಿಥುನ್ ಪಿ.ಪಿ ವಿಜ್ಞಾನ ವಸ್ತು ಪ್ರದರ್ಶನವನ್ನು ಸಂಘಟಿಸುವುದರಿಂದ ಆಗುವ ಪ್ರಯೋಜನ ಮತ್ತು ಪ್ರಾಮುಖ್ಯತೆಗಳ ಬಗೆಗೆ ತಮ್ಮ ಅನುಭವವನ್ನು ಹಂಚಿಕೊಂಡರು.


ಸ್ಪರ್ಧೆಯಲ್ಲಿ ಒಟ್ಟು 56 ವಿಜ್ಞಾನ ಮಾದರಿಗಳು ಪ್ರದರ್ಶಿತವಾಗಿದ್ದು, ವಿಜ್ಞಾನ ಸಂಘದ ಸಂಯೋಜಕಿ ಪ್ರತಿಮಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸ್ಪರ್ಧೆಯನ್ನು ಶಾಲೆಯ ಅವನಿ ವಿಜ್ಞಾನ ಸಂಘವು ಆಯೋಜಿಸಿದ್ದು ವಿಜ್ಞಾನ ಶಿಕ್ಷಕರಾದ. ರೇಖಾಮಣಿ, ಶಾರದಾ ನೇತೃತ್ವವಹಿಸಿದ್ದರು. ವಿಜ್ಞಾನ ಸಂಘದ ವಿದ್ಯಾರ್ಥಿ ಪ್ರತಿನಿಧಿ ಅಝ ಫಾತಿಮಾ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here