ಪುತ್ತೂರು: ನಿರಂತರವಾಗಿ ಸುರಿದ ಮಳೆಯಿಂದಾಗಿ ಶೇಖಮಲೆ ನೂತನ ಸೇತುವೆ ಬಳಿ ರಸ್ತೆಯ ಬದಿಯು ಕುಸಿಯತೊಡಗಿದೆ. ನದಿಯ ಬದಿಯಲ್ಲೇ ಸಾಗುವ ಈ ರಸ್ತೆಯು ಹಲವು ಮನೆಗಳಿಗೆ ಸಂಪರ್ಕ ರಸ್ತೆಯಾಗಿದೆ. ಸೇತುವೆ ನಿರ್ಮಾಣದ ವೇಳೆ ರಸ್ತೆಯ ಬದಿಗೆ ತಡೆಗೋಡೆ ನಿರ್ಮಾಣ ಮಾಡದೇ ಇರುವುದರಿಂದ ಇದೀಗ ಮಳೆ ನೀರು ನೇರವಾಗಿ ರಸ್ತೆಯ ಮೇಲೆ ಹರಿದು ಹೋಗುತ್ತಿದ್ದು ಇದರಿಂದ ರಸ್ತೆಯ ಮಣ್ಣು ಸವೆಯುವ ಮೂಲಕ ರಸ್ತೆ ಕುಸಿಯುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.