ನಿಡ್ಪಳ್ಳಿ: ತುಳುನಾಡ್ ಫ್ರೆಂಡ್ಸ್ ತೂಂಬಡ್ಕ ಪಾಣಾಜೆ ಇದರ ಆಶ್ರಯದಲ್ಲಿ ಆ.4ರಂದು ತೂಂಬಡ್ಕ ಬಾಜುಗುಳಿ ಗದ್ದೆಯಲ್ಲಿ ಕೆಸರ್ ಡ್ ಒಂಜಿ ದಿನ ಕೆಸರ್ ಕಂಡ ಉಚ್ಚಯ- 2024 ಕಾರ್ಯಕ್ರಮ ನಡೆಯಿತು.
ಬೆಳಿಗ್ಗೆ ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೊಳಿಲ್ಲಾಯ ದೀಪ ಬೆಳಗಿಸಿ ತೆಂಗಿನಕಾಯಿ ಹೊಡೆದು ಕ್ರೀಡಾಕೂಟಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಕೆ.ಎಂ.ಎಫ್ ನಿರ್ದೇಶಕ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರು, ಸೂರಂಬೈಲು ಶಾಲಾ ನಿವೃತ್ತ ಮುಖ್ಯ ಗುರು ಶ್ರೀಧರ ವೈ,ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಶುಭ ಹಾರೈಸಿದರು. ಚೆಲ್ಯಡ್ಕ ಶಕ್ತಿ ಆಯಿಲ್ ಮಿಲ್ ಮಾಲಕ ಸೀತಾರಾಮ ರೈ, ಸ್ಕಂದ ಯುವಕ ಮಂಡಲದ ಅಧ್ಯಕ್ಷ ಮೋಹನ ನಾಯ್ಕ ತೂಂಬಡ್ಕ, ಗದ್ದೆ ಮಾಲಕ ವೆಂಕಪ್ಪ ನಾಯ್ಕ ಬಾಜುಗುಳಿ, ತುಳುನಾಡ್ ಫ್ರೆಂಡ್ಸ್ ಅಧ್ಯಕ್ಷ ದಯಾನಂದ ತೂಂಬಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಿಂಚನಾ ಮತ್ತು ಬಳಗ ಪ್ರಾರ್ಥಿಸಿ, ಕೀರ್ತನ್ ಸ್ವಾಗತಿಸಿದರು. ವೈಶಾಖ್ ರೈ ವಂದಿಸಿ ವರ್ಷಾ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು. ಫ್ರೆಂಡ್ಸ್ ಸದಸ್ಯರು ಸಹಕರಿಸಿದರು. ನಂತರ ದಂಪತಿಗಳಿಗೆ ಉಪ್ಪು ಮೂಟೆ ಓಟ, ಮಕ್ಕಳು, ಪುರುಷರು, ಮಹಿಳೆಯರಿಗೆ ವಿವಿಧ ಸ್ಪರ್ಧೆಗಳು ನಡೆಯಿತು.