ಪುತ್ತೂರು ತಾಲೂಕು ಮಟ್ಟದ ಧರ್ಮಸ್ಥಳ ಶಾಂತಿವನ ಟ್ರಸ್ಟ್ ನ ಮೌಲ್ಯಾಧಾರಿತ ಪುಸ್ತಕಗಳ ಪ್ರಾಥಮಿಕ ಪ್ರೌಢಶಾಲಾ ವಿದ್ಯಾರ್ಥಿಗಳ ಸ್ಪರ್ಧೆ

0

ಪುತ್ತೂರು:  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ಗಿನ್ನಿಸ್ ಪ್ರಶಸ್ತಿ ಪುರಸ್ಕೃತ ಸಂಸ್ಥೆ, ಶ್ರೀ ಕ್ಷೇತ್ರ ಧರ್ಮಸ್ಥಳ ಇದರ ವತಿಯಿಂದ ಪುತ್ತೂರು ತಾ. ಮಟ್ಟದ, ಜ್ಞಾನರಥ (ಪ್ರಾಥಮಿಕ ಶಾಲಾವಿಭಾಗ), ಮತ್ತು ಜ್ಞಾನ ಪಥ (ಪ್ರೌಢಶಾಲಾ ವಿಭಾಗ), ನೈತಿಕ ಮೌಲ್ಯಾಧಾರಿತ ಪುಸ್ತಕಗಳ ಭಾಷಣ, ಪ್ರಬಂಧ, ಪದ್ಯ ಕಂಠಪಾಠ, ಹಾಗೂ ಚಿತ್ರಕಲಾ ಸ್ಪರ್ಧೆಯು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯಲ್ಲಿ ನ. 11 ರಂದು ನಡೆಯಿತು.

. ಪುತ್ತೂರು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕಿಶಕುಂತಳಾ ಟಿ. ಶೆಟ್ಟಿ ಕಾರ್ಯಕ್ರಮವನ್ನು ದೀಪ ಪ್ರಜ್ವಲನಗೊಳಿಸಿ ಮಾತನಾಡುತ್ತಾ, ನೈತಿಕ ಮೌಲ್ಯಗಳು ಕುಸಿಯದಂತೆ ಎಳೆಯ ಮಕ್ಕಳ ಮನಸ್ಸಿನಲ್ಲಿ ಸುಜ್ಞಾನದ ಬೆಳಕು ಮೂಡುವಂತೆ ಅಮೂಲ್ಯ ಪುಸ್ತಕಗಳ ಪ್ರಕಟಿಸಿ ಕಳೆದ ಮುವತ್ತೊಂದು ವರ್ಷಗಳಿಂದ ತಾಲೂಕು, ಜಿಲ್ಲೆ, ರಾಜ್ಯಮಟ್ಟದ ಸ್ಪರ್ಧೆಗಳ ನಡೆಸಿ ಓದುವ ಬರೆಯುವ, ಹಾಡುವ ಚಿತ್ರಿಸುವ ಕೌಶಲ್ಯಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ತಮ್ಮ ಶಾಂತಿವನ ಟ್ರಸ್ಟ್ ನ ಮೂಲಕ ಮಾಡಿಕೊಂಡುಬರುತ್ತಿರುವ ಅವರ ಮಗುವಿನಂಥ ಮನಸ್ಸಿಗೆ ಹಿಡಿದ ಕನ್ನಡಿಯಾಗಿದೆ. ಮಕ್ಕಳ ಮುಗ್ದ ಮನಸುಗಳಲ್ಲಿ ತಂದೆ ತಾಯಿ, ಗುರು ಹಿರಿಯರಲ್ಲಿ ಗೌರವ ಮೂಡುವುದರ ಮೂಲಕ ಸಂಸ್ಕಾರ ಸಂಸ್ಕೃತಿಗಳು ಮಾನವ ಸಮಾಜವನ್ನು ಸಮ ಸಮಾನತಾ ಭಾವನೆಯೊಂದಿಗೆ ಬೆಳಗಿಸಲಿ ಎಂದು ಶುಭ ಹಾರೈಸಿದರು.

 ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶಿವಪ್ರಕಾಶ್ ಎಂ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್, ಶಾಂತಿವನ ಟ್ರಸ್ಟ್ ನ ನಿರ್ದೇಶಕರು ಡಾ. ಐ. ಶಶಿಕಾಂತ್ ಜೈನ್, ಶಾಲಾ ಮುಖ್ಯ ಶಿಕ್ಷಕ ಸತೀಶ್ ಕುಮಾರ್ ರೈ ಎಂ., ಮಾಜಿ ಶಾಸಕಿ ಶ್ರೀಮತಿ ಶಕುಂತಲಾ ಶೆಟ್ಟಿ ಅವರ ಶಿಕ್ಷಣ ಸಮಾಜದ ಮಹಿಳಾ ಜಾಗೃತಿ, ಕಲೆ ಸಾಹಿತ್ಯ ಸಾಧನೆಗಾಗಿ ಶಾಂತಿವನ ಟ್ರ ಸ್ಟ್ ವತಿಯಿಂದ ಶಾಲು ಹೊದಿಸಿ, ಹಾರಾರ್ಷಣೆಗೈದು, ಪೇಟತೊಡಿಸಿ ಫಲಪುಷ್ಪ ನೀಡಿ ಅಭಿನಂದಿಸಲಾಯಿತು. ಕ್ಷೇತ್ರಶಿಕ್ಷಣಾಧಿಕಾರಿ ವಿಷ್ಣು ಪ್ರಸಾದ್ ಅವರು ಮಾತನಾಡಿ  ‘ನಮ್ಮ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯುವುದರೊಂದಿಗೆ, ಹೆತ್ತವರನ್ನು ವೃದ್ಧಾಶ್ರಮಗಳಿಗೆ ಸೇರಿಸದೆ ಕೊನೆ ತನಕ ಅವರ ಸೇವೆ ಮಾಡುವುದೇ ಆದ್ಯ ಕರ್ತವ್ಯ ವಾಗಬೇಕೆಂದು ಮಕ್ಕಳು, ಶಿಕ್ಷಕರಿಗೆ ಕಿವಿಮಾತು ಹೇಳಿದರು.

ಸಭಾಧ್ಯಕ್ಷತೆ ವಹಿಸಿದ್ದ ಡಾ. ಶಿವಪ್ರಕಾಶ್  ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ತಾಳ್ಮೆ,ಸಾಮಾಜಿಕ ಜನಪರ ಚಿಂತನೆ, ವಿಕಸಿತ ಭಾರತದ ಅನನ್ಯ ಕೊಡುಗೆಗಳಾಗಿವೆ ಎಂದರು.

.ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲೆ  ಡಾ. ಶೋಭಿತಾ ಸತೀಶ್, ಅಂಕಣಕಾರ ಲೇಖಕ ನಾರಾಯಣ ರೈ ಕುಕ್ಕುವಳ್ಳಿ, ಕೈಕಾರ ಸಹ್ಯಾದ್ರಿ ಯುವಕ ಮಂಡಲದ ಅಧ್ಯಕ್ಷ ಪ್ರಜ್ವಲ್ ರೈ ತೊಟ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಂತಿವನ ಟ್ರಸ್ಟ್ ಯೋಜನಾ ನಿರ್ದೇಶಕ ಡಾ. ಐ. ಶಶಿಕಾಂತ್ ಜೈನ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ‘ಖಾವಂದರ ಮಕ್ಕಳ ಜ್ಞಾನ ವೃದ್ಧಿ, ಸಮಾಜಧರ್ಮ, ಪರಿಸರ ಚಿಂತನೆ,ಸೃಜನಶೀಲತೆ, ಭಾವನಾತ್ಮಕ ಸಂಬಂಧ ಸೌಹಾರ್ದತೆ ಕುರಿತು ಮಾತನಾಡಿ ಜ್ಞಾನರಥ, ಜ್ಞಾನ ಪಥ ಕೃತಿಗಳನ್ನಾಧರಿಸಿದ ವಿವಿಧ ಸ್ಪರ್ಧೆಗಳ ಕುರಿತು ಮಾಹಿತಿ ನೀಡಿದರು.  ಪುತ್ತೂರು ತಾ. ಯೋಗ ಮತ್ತು ನೈತಿಕ ಶಿಕ್ಷಣ ಸಂಚಾಲಕ, ಕೈಕಾರ ಶಾಲಾ  ಜಿಲ್ಲಾ ಪ್ರಶಸ್ತಿ ಪುರಸ್ಕೃತ ಮುಖ್ಯಶಿಕ್ಷಕ ರಾಮಣ್ಣ ರೈ ಅಧ್ಯಕ್ಷರು ಮುಖ್ಯ ಅತಿಥಿಗಳ ಪರಿಚಯ ಸ್ವಾಗತ ಮಾಡುವುದರೊಂದಿಗೆ ವಿದ್ಯಾರ್ಥಿಗಳಿಗೆ ತೀರ್ಪುಗಾರರಿಗೆ ವಿವರ ಮಾಹಿತಿ ನೀಡಿದರು.

. ಜ್ಞಾನ ರಥ, ಜ್ಞಾನ ಪಥ ಕೃತಿಗಳಾಧಾರಿತ ವಿವಿಧ ಸ್ಪರ್ಧೆಗಳ ನಿರ್ವಾಹಕರು, ತೀರ್ಪುಗಾರರು ತಾಲೂಕಿನ ವಿವಿಧ ಶಾಲೆಗಳಿಂದ ಆಗಮಿಸಿದ ನೂರಾರು ವಿದ್ಯಾರ್ಥಿಗಳ ವಿವಿಧ ಸ್ಪರ್ಧೆ ಗಳ ಫಲಿತಾಂಶ ಬಹುಮಾನ ವಿತರಣೆ, ಸಮಾರೋಪ ಕಾರ್ಯಕ್ರಮದಲ್ಲಿ ಪುತ್ತೂರಿನ ಖ್ಯಾತ ದಂತ ವೈದ್ಯ ರೊ. ಡಾ. ಪ್ರಕಾಶ್ ಮಾತನಾಡಿ, ಮಕ್ಕಳು ರಾಷ್ಟ್ರದ ಸಂಪತ್ತು.ಅವರು ಹಂತಹಂತವಾಗಿ ಬೆಳೆದಂತೆ ವಿವಿಧ ಆಸಕ್ತಿ ಪ್ರತಿಭೆಗಳು ಗರಿಕೆದರುತ್ತವೆ.. ಆಗ ಇಂತಹ ಅವಕಾಶಗಳನ್ನು ನೀಡಬೇಕಾಗುತ್ತದೆ ಎಂದರು. ನಾರಾಯಣ ರೈ ಕುಕ್ಕುವಳ್ಳಿ, ಬನ್ನೂರು ಶಾಲಾ ಮುಖ್ಯ ಶಿಕ್ಷಕ, ಉಪ್ಪಿನಂಗಡಿ ಕೇಂದ್ರ ಸಂಪನ್ಮೂಲರು ಮಹಮ್ಮದ್ ಅಶ್ರಫ್ ಸಂದರ್ಭೋಚಿತವಾಗಿ ಮಾತನಾಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ  ಬಹುಮಾನ,ಪ್ರಶಸ್ತಿ ಪತ್ರ ನೀಡಿ ಅತಿಥಿಗಳು ಅಭಿನಂದಿಸಿದರು. ಪಟ್ಟೆ ಶಾಲಾ ಶಿಕ್ಷಕ ವಿಶ್ವನಾಥ ಗೌಡ ಉಪಸ್ಥಿತರಿದ್ದರು.

ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯ ಸುಭಾಷ್ ರೈ ಬೆಳ್ಳಿಪ್ಪಾಡಿ  ಅಧ್ಯಕ್ಷತೆ ವಹಿಸಿ ಮಾತನಾಡುತ್ತ,ಮಕ್ಕಳ ಆಸಕ್ತಿ ನೋಡಿದಾಗ ತುಂಬಾ ಸಂತೋಷವಾಗುತ್ತದೆ. ಇಂದು ಮಕ್ಕಳ ಪ್ರತಿಭಾ ವಿಕಾಸಕ್ಕೆ ತುಂಬಾ ಅವಕಾಶಗಳಿವೆ. ಹೆತ್ತವರು ಪೂರ್ಣ ಅವಕಾಶ ನೀಡಬೇಕೆಂದರು. ತೀರ್ಪುಗಾರರನ್ನು, ಸ್ಪರ್ಧಾನಿರ್ವಾಹಕರನ್ನು ಪುಸ್ತಕ ಪೆನ್ನು ನೀಡಿ ಅಭಿನಂದಿಸಲಾಯಿತು.ಶಿಕ್ಷಕಿ ಅನುರಾಧ ವಿಜೇತರ ಪಟ್ಟಿ ಓದಿದರು. ರಾಮಣ್ಣ ರೈ ಕೈಕಾರ  ಕೃತಜ್ಞತೆ ಸಲ್ಲಿಸಿದರು. ಶಿಕ್ಷಕಿ ಯಶೋಧ ಬಲ್ನಾಡು ಕಾರ್ಯಕ್ರಮ ನಿರ್ವಹಿಸಿದರು. ಲತಾ ಅಮರನಾಥ್, ಟ್ರಸ್ಟ್ ನ ಸಿಬ್ಬಂದಿಗಳಾದ ಸಂಜೀವ, ದಾಮೋದರ ಸಹಕರಿಸಿದರು.

LEAVE A REPLY

Please enter your comment!
Please enter your name here