ವಾರ್ಷಿಕ ವ್ಯವಹಾರ;120 ಕೋ.ರೂ,ನಿವ್ವಳ ಲಾಭ: 1,54,91,660.61 ಕೋ.ರೂ,ಡಿವಿಡೆಂಡ್:ಶೇ.12
ಪುತ್ತೂರು: ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್‌ನ 2023-24ನೇ ಸಾಲಿನ 115ನೇ ವರ್ಷದ ವಾರ್ಷಿಕ ಮಹಾಸಭೆ ಬ್ಯಾಂಕ್‌ನ ಸಭಾಂಗಣದಲ್ಲಿ ನಡೆಯಿತು.
ಬ್ಯಾಂಕ್‌ನ ಮುಖ್ಯ ಕಾರ್ಯರ್ನಿಹಣಾಧಿಕಾರಿ ಬಿ.ಶೇಖರ ಶೆಟ್ಟಿ 2023-24ನೇ ಸಾಲಿನ ವಾರ್ಷಿಕ ವರದಿಯನ್ನು ವಾಚಿಸಿ ಬ್ಯಾಂಕ್ 2023-24ನೇ ಸಾಲಿನಲ್ಲಿ 120 ಕೋ.ರೂ ವ್ಯವಹಾರ ನಡೆಸಿದೆ. ಬ್ಯಾಂಕ್‌ನಲ್ಲಿ 2,73,33,800 ಕೋ.ರೂ ಸದಸ್ಯರ ಪಾಲು ಬಂಡಾವಳವಿದ್ದು ವರ್ಷಾಂತ್ಯದಲ್ಲಿ 73,44,65,222.57 ಕೋ.ರೂ. ಠೇವಣಿಗಳು ಇರುತ್ತದೆ. ನಮ್ಮ ಬ್ಯಾಂಕ್ ಠೇವಣಾತಿ ವಿಮೆ ಕಾನೂನಿನ ವ್ಯಾಪ್ತಿಗೆ ಒಳಪಟ್ಟಿದೆ. ವರ್ಷಾಂತ್ಯಕ್ಕೆ 47,02,65,144 ಕೋ.ರೂ ಸಾಲ ನೀಡಲಾಗಿರುತ್ತದೆ. ವಾರ್ಷಿಕ ಲೆಕ್ಕ ಪರಿಶೋಧನೆಯ ಪ್ರಕಾರ ವರ್ಷಾಂತ್ಯಕ್ಕೆ ಬ್ಯಾಂಕ್‌ಗೆ 1,54,91,660.61 ಕೋ.ರೂ ಲಾಭ ಬಂದಿರುತ್ತದೆ ಎಂದರು. 2023-24ನೇ ಸಾಲಿನ ಅಂಕಿ ಅಂಶಗಳನ್ನು ಪರಿಗಣಿಸಲಾಯಿತು. ಲೆಕ್ಕಪರಿಶೋಧಕರ ವರದಿ ಮತ್ತು ಮಂಡಳಿಯ ಅನುಪಾಲನಾ ವರದಿಯನ್ನು ಪರಿಗಣಿಸಲಾಯಿತು. 2023-24ನೇ ಸಾಲಿನ ನಿವ್ವಳ ಲಾಭ ವಿಂಗಡನೆ ಮತ್ತು ವಿತರಣೆ ಮಾಡಿದ ವರದಿಯನ್ನು ಓದಲಾಯಿತು.
ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್‌ನ ಅಧ್ಯಕ್ಷ ಕಿಶೋರ್ ಕೊಳತ್ತಾಯ ಎನ್. ಮಾತನಾಡಿ 2024-25ನೇ ಸಾಲಿನಲ್ಲಿ ಸಾಲವನ್ನು ವೃದ್ಧಿಸಲಾಗುವುದು. ಬ್ಯಾಂಕ್‌ನ ವ್ಯವಹಾರವನ್ನು 129 ಕೋಟಿಗೆ ಹೆಚ್ಚಿಸುವುದು ನಮ್ಮ ಗುರಿಯಾಗಿದೆ ಎಂದರು. ಶಿಘ್ರದಲ್ಲಿ ವಿಟ್ಲದಲ್ಲಿ ಬ್ಯಾಂಕ್‌ನ ಶಾಖೆಯನ್ನು ಸ್ಥಾಪಿಸುತ್ತೇವೆ. ಬ್ಯಾಂಕ್‌ಗೆ ಸೋಲಾರ್ ಅಳವಡಿಸುವುದು, ಆದ್ಯತೆಯ ಮೇರೆಗೆ ಡಿಜಿಟಲೀಕರಣದ ಅನುಷ್ಠಾನ ಮಾಡಲಾಗುವುದು ಎಂದು ಮುಂದಿನ ಕಾರ್ಯಯೋಜನೆಗಳನ್ನು ತಿಳಿಸಿದರು. 2023-24ನೇ ಸಾಲಿನ ಲಾಭದಲ್ಲಿ ಸದಸ್ಯರಿಗೆ ಶೇ.12 ಡಿವಿಡೆಂಡ್ ನೀಡಲಾಗುವುದು. ಈ ಬಾರಿ ಮಹಾಸಭೆಗೆ ಆಗಮಿಸಿದ ಸದಸ್ಯರಿಗೆ ಗಿಫ್ಟ್ ಐಟಂ ನೀಡಲಾಗುತ್ತದೆ ಎಲ್ಲ ಸದಸ್ಯರು ಕೂಪನ್ ಮುಖಾಂತರ ಇದನ್ನು ಪಡೆದುಕೊಳ್ಳಬಹುದು. ಬ್ಯಾಂಕ್‌ನಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ ಎಲ್ಲಾ ಸಿಬಂದಿಗಳಿಗೆ ಈ ಬಾರಿ ಚಿನ್ನದ ನಾಣ್ಯ ನೀಡಿ ಅವರನ್ನು ಪ್ರೋತ್ಸಾಹಿಸಲಾಗಿದೆ ಎಂದರು. ಬ್ಯಾಂಕ್‌ನ ಹಿರಿಯ ಸದಸ್ಯರ ಮನೆಯಲ್ಲಿರುವ ಯುವ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತನ ಪಡೆಯಬೇಕು. ಈ ಮೂಲಕ ಬ್ಯಾಂಕ್‌ನ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಹೇಳಿದ ಅವರು ಬ್ಯಾಂಕ್‌ನ ಅಭಿವೃದ್ಧಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಪ್ರತಿಭಾ ಪುರಸ್ಕಾರ:
ಟೌನ್‌ಬ್ಯಾಂಕ್ ಸಂಸ್ಥಾಪಕ ಮೊಳಹಳ್ಳಿ ಶಿವರಾಯರವರು ಶಿಕ್ಷಣ ಪ್ರೇಮಿಯಾಗಿದ್ದು ಅವರ ನೆನಪಿಗಾಗಿ ಬ್ಯಾಂಕ್ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪುತ್ತೂರಿನ ಪದವಿ ಕಾಲೇಜುಗಳಲ್ಲಿ ದ್ವಿತೀಯ ಬಿ.ಕಾಂ.ನಲ್ಲಿ ಅಂಕ ಪಡೆದ ಜಿಡೆಕಲ್ಲು ಕಾಲೇಜಿನ ಸಂದೇಶ್ ಮಾರುತಿ ಕದಮ್, ಸಂತ ಫಿಲೋಮಿನಾ ಕಾಲೇಜಿನ ಅಫಿಫ ಫರ್ವಿನ್‌ರವರಿಗೆ ಕೋ ಆಪರೇಟಿವ್ ಟೌನ್ ಬ್ಯಾಂಕ್ ಶತಮಾನೋತ್ಸವದ ವಿದ್ಯಾರ್ಥಿವೇತನ ನೀಡಲಾಯಿತು. ಕಳೆದ ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಪುತ್ತೂರು ಸ.ಪ.ಪೂ ಕಾಲೇಜಿನ ಪವಿತ್ರ ಎಸ್.ಪಿ., ಲವಿತಾ ಪಿ., ಎಚ್. ಅಭಿರಾಮರವರಿಗೆ ಮೊಳಹಳ್ಳಿ ಶಿವರಾಯರ ಶತಾಬ್ದಿಯ ವಿದ್ಯಾರ್ಥಿವೇತನ ನೀಡಲಾಯಿತು. ನೆಲ್ಲಿಕಟ್ಟೆ ಹಿ.ಪ್ರಾ.ಶಾಲೆಯ 6ನೇ ತರಗತಿಯ ನವೀನ ಬಸರಾಜ್ ಭಂಜ್ರ, ಪ್ರಜ್ವಲ್, ಬೊಳ್ವಾರು ಶಾಲೆಯ 6ನೇ ತರಗತಿಯ ಮಹಮ್ಮದ್ ರಾಝಿಕ್, ಫಾತಿಮತ್ ಹಫೀದ, ಪುತ್ತೂರು ಪಟ್ಟಣದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಶ್ರೀಯ, ಪದವಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಅಂಬಿಕಾ ಮಹಾವಿದ್ಯಾಲಯದ ನಯನ, ವರೆಣ್ಯ ಬಿ., ಫಿಲೋಮಿನಾ ಕಾಲೇಜಿನ ರಿತೇಶ್ ರೈ ಎಂ., ವಿವೇಕಾನಂದ ಕಾಲೇಜಿನ ಗಗನ, ವಿವೇಕಾನಂದ ಕಾನೂನು ಕಾಲೇಜಿನ ರಶ್ಮಿ ಬಿ.ಎಸ್., ಬಿ.ಪೂರ್ಣಿಮ, ದಿ. ಬಿ. ಗಣಪತಿ ವಿಷ್ಣು ಹೊಳ್ಳ ಮತ್ತು ಅವರ ಪತ್ನಿ ಶಾರದಾರವರ ನೆನಪಿನಲ್ಲಿ ಪಿಲೋಮಿನಾ ಪ.ಪೂ. ಕಾಲೇಜಿನ ಫಲಕ್, ಇಂಜಿನಿಯರಿಂಗ್ ಪದವಿಯಲ್ಲಿ ರ‍್ಯಾಂಕ್ ಪಡೆದ ಕೇಶವ ಪ್ರಜ್ವಲ್ ಪಿ., ಕೆ. ಪಲ್ಲವಿರವರಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.
ನಿರ್ದೇಶಕರುಗಳಾದ ಸದಾಶಿವ ಪೈ, ಕಿರಣ್ ಕುಮಾರ್ ರೈ, ಚಂದ್ರಶೇಖರ ಗೌಡ ಕೆ., ನಾರಾಯಣ ಎ.ವಿ., ವಿನೋದ್ ಕುಮಾರ್ ಬಿ., ಮಲ್ಲೇಶ್ ಕುಮಾರ್, ರಮೇಶ ನಾಯ್ಕ ಕೆ., ಜಯಂತಿ, ಹೇಮಾವತಿ, ಗಾಯತ್ರಿ ಪಿ., ಅರವಿಂದ ಕೃಷ್ಣ ಬಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬ್ಯಾಂಕ್‌ನ ಸದಸ್ಯರುಗಳಾದ ಚನಿಲ ತಿಮ್ಮಪ್ಪ ಶೆಟ್ಟಿ, ಲೋಕೇಶ್ ಬನ್ನೂರು, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಮುರಳೀಕೃಷ್ಣ ಹಸಂತಡ್ಕ, ಶಿವಪ್ರಸಾದ್ ಇ., ಸುದರ್ಶನ್ ಬನ್ನೂರುರವರು ವಿವಿಧ ಸಲಹೆ ಸೂಚನೆ ನೀಡಿದರು. ಅವರ ಸಲಹೆ ಸೂಚನೆ ಮೇರೆಗೆ ಕೆಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಹಲವು ಸದಸ್ಯರು ಕಳುಹಿಸಿದ ಪ್ರಶ್ನೆಗಳಿಗೆ ಅಧ್ಯಕ್ಷ ಕಿಶೋರ್ ಕೊಳತ್ತಾಯರವರು ಉತ್ತರ ನೀಡಿದರು. ಮಾಜಿ ಶಾಸಕ ಸಂಜೀವ ಮಠಂದೂರು ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು. ತನ್ವಿ ಶೆಟ್ಟಿ ಕೂಡ್ಗಿ ಪ್ರಾರ್ಥಿಸಿ ಬ್ಯಾಂಕ್‌ನ ಉಪಾದ್ಯಕ್ಷ ವಿಶ್ವಾಶ್ ಶೆಣೈ ಸ್ವಾಗತಿಸಿದರು. ನಿರ್ದೇಶಕ ಚಂದ್ರಶೇಖರ ರಾವ್ ಬಪ್ಪಳಿಗೆ ವಂದಿಸಿದರು. ಬ್ಯಾಂಕ್‌ನ ಹಿರಿಯ ಸಹಾಯಕಿ ಜ್ಯೋತಿ ಎನ್.ಎಸ್. ಮತ್ತು ಕಿರಿಯ ಸಹಾಯಕ ಪವನ್ ನಾಯಕ್ ಬಿ. ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಮಹಾಪ್ರಬಂಧಕ ಚೇತನ್ ಯು.ಎನ್., ಸಹಾಯಕ ಲೆಕ್ಕಾಧಿಕಾರಿ ಚಿದಂಬರ ಗೌಡ, ಕಿರಿಯ ಸಹಾಯಕಿಯರಾದ ಮಮತ, ರಮ್ಯ ಬಿ., ಆಶಿಕಾ ಎ., ಕುಮಾರ್ ಬಿ., ಶ್ರೀಕಾಂತ್, ಅಟೆಂಡರ್ ಉದಯ ಕುಮಾರ್ ಕೆ., ರುಕ್ಮಯ್ಯ ಐ.ರವರು ಸಹಕರಿಸಿದರು.
ಹಿರಿಯ ಸದಸ್ಯರಿಗೆ ಸನ್ಮಾನ
ಟೌನ್‌ಬ್ಯಾಂಕ್‌ನ ಹಿರಿಯ ಸದಸ್ಯರಾದ ಹರಿಣಾಕ್ಷ ಕೆ., ಭಾಸ್ಕರ ಆಚಾರ್ಯ ಎನ್., ಜಯರಾಮ ಭಟ್ ಎಂ., ಮೋನಪ್ಪ, ಬಾಳಪ್ಪ ಗೌಡ ಕೆ. ಹಾಗೂ ಗೋಪಿರವರನ್ನು ಮಹಾಸಭೆಯಲ್ಲಿ ಸನ್ಮಾನಿಸಲಾಯಿತು.
ಗೌರವಾರ್ಪಣೆ
ಬ್ಯಾಂಕ್‌ನಲ್ಲಿ ಹಿರಿಯ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದ ಗಿರೀಶ್‌ರಾಜ್ ಎಂ.ವಿ., ಮತ್ತು ಅಟೆಂಡರ್ ಆಗಿ ಕರ್ತವ್ಯ ನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದ ಎಂ.ನಾರಾಯಣ ನಾಕ್‌ರವರನ್ನು ಮಹಾಸಭೆಯಲ್ಲಿ ಗೌರವಿಸಲಾಯಿತು.