Sky Bird Aviation ಬೆಂಗಳೂರು ಸಂಸ್ಥೆಯ ವತಿಯಿಂದ ಪ್ರಗತಿ ಸ್ಟಡಿ ಸೆಂಟರ್‌ನ ಮುಖ್ಯಸ್ಥರಿಗೆ ಗೌರವ, ಸಮ್ಮಾನ

0

ಪುತ್ತೂರು: ಕಳೆದ 17 ವರ್ಷಗಳಿಂದ ಪ್ರಗತಿ ಸ್ಟಡಿ ಸೆಂಟರ್‌ನ ಅನೇಕ ವಿದ್ಯಾರ್ಥಿಗಳನ್ನು ವಿಮಾನಯಾನದಲ್ಲಿ ಡಿಪ್ಲೋಮ, ಪದವಿ ಹಾಗೂ ಸ್ನಾತಕೋತ್ತರ ಪದವಿಗಳಿಗೆ ಪ್ರೇರೇಪಿಸಿ, ಮಾರ್ಗದರ್ಶನ ನೀಡಿ ಪ್ರಗತಿ ಸ್ಟಡಿ ಸೆಂಟರ್‌ನ ಹಿರಿಯ ವಿದ್ಯಾರ್ಥಿಗಳು ದೇಶ-ವಿದೇಶದ ಅನೇಕ ವಿಮಾನ ನಿಲ್ದಾಣಗಳಲ್ಲಿ ವಿವಿಧ ಉನ್ನತ ಉದ್ಯೋಗದಲ್ಲಿ ಸೇವೆ ಸಲ್ಲಿಸಲು ಕಾರಣೀಭೂತರಾದ ಪ್ರಗತಿ ಸ್ಟಡಿ ಸೆಂಟರ್ ಸ್ಥಾಪಕಾಧ್ಯಕ್ಷ ಗೋಕುಲ್‌ನಾಥ್ ಪಿ.ವಿ. ಹಾಗೂ ಪ್ರಾಂಶುಪಾಲೆ ಹೇಮಲತಾ ಗೋಕುಲ್‌ನಾಥ್ ದಂಪತಿಗಳನ್ನು Sky Bird Aviation ಬೆಂಗಳೂರು ಇದರ ಸಂಸ್ಥಾಪಕಿ ಸುಜಾತ ಬೈರಿ ಇವರು ಆಗಸ್ಟ್ 2ರಂದು ಬೆಂಗಳೂರಿನಲ್ಲಿ Sky Bird Aviation ವಿದ್ಯಾರ್ಥಿಗಳ ಗ್ರಾಜುವೇಶನ್ ದಿನದಂದು ಸನ್ಮಾನಿಸಿದರು.

ಈ ಕಾರ್ಯಕ್ರಮವು ಅಗ್ರಗಾಮಿ ಬೆಂಗಳೂರು ಗ್ರೂಪ್‌ ಆಫ್‌ ಎಜುಕೇಷನಲ್‌ ಇನ್ಸ್ಟಿಟ್ಯೂಷನ್‌ ಜತೆ ಕಾರ್ಯದರ್ಶಿ ಪ್ರಭಾಕರ ವೇಲು ,ಸ್ಪೆಷಲ್‌ ಆಫೀಸರ್‌ ಮಿನಿಸ್ಟ್ರಿ ಆಫ್‌ ಎಕ್ಸಝ್‌ ಗವರ್ನಮೆಂಟ್‌ ಆಫ್‌ ಕರ್ನಾಟಕ ಅನೀಲ್‌ ಎ.ಎನ್ ,ಮ್ಯಾನೇಜಿಂಗ್‌ ಡೈರೆಕ್ಟರ್‌ ಭಾರತ್‌ ಇನ್ಸ್ಟಿಟ್ಯೂಟ್‌ ಆಫ್‌ ಸ್ಕೂಲಿಂಗ್‌ ಎಜುಕೇಶನ್‌ ಮಂಜುಳಾ ಎಸ್‌ ಇ , ಪ್ರಾಂಶುಪಾಲರು ಸ್ಕೈ ಬರ್ಡ್‌ ಏವಿಯೇಷನ್‌ ಬೆಂಗಳೂರಿನ ಎಮ್‌ ಆರ್‌ ಕೆಂಪರಾಜ್‌ ಬಿ.ಜಿ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ನೆರವೇರಿತು.

LEAVE A REPLY

Please enter your comment!
Please enter your name here