ಅತೀ ದೊಡ್ಡ ಸಂಗ್ರಹ
ಅತೀ ಕಡಿಮೆ ಬೆಲೆ
ಪ್ರತೀ ದಿನ ಹೊಸ ಸಂಗ್ರಹ
ಪುತ್ತೂರು: ಕಳೆದ 29 ವರ್ಷಗಳಿಂದ ಜವುಳಿ ಉದ್ಯಮದಲ್ಲಿ ಪುತ್ತೂರಿನ ಜನತೆಗೆ ಹೊಸತನವನ್ನು ಪರಿಚಯಿಸುತ್ತಾ ಮನೆ ಮಾತಾಗಿರುವ ಪ್ರತಿಷ್ಠಿತ ಜವುಳಿ ಮಳಿಗೆ ಕೋರ್ಟ್ ರಸ್ತೆಯ ರಾಧಾ’ಸ್‌ನಲ್ಲಿ ಫ್ಯಾಷನ್ ಲೋಕದ ಮಹಾಉತ್ಸವ ಮಾನ್ಯೂನ್ ಮೇಳ ಆ.5ರಂದು ಪ್ರಾರಂಭಗೊಂಡಿದೆ. ಮದುವೆ ಜವುಳಿ ಸೇರಿದಂತೆ ಮಕ್ಕಳ, ಮಹಿಳೆಯರ ಹಾಗೂ ಪುರುಷರ ಎಲ್ಲಾ ರೀತಿಯ ರೆಡಿಮೇಡ್ ಉಡುಪುಗಳನ್ನು ಅತೀ ಕಡಿಮೆ ಬೆಲೆಯಲ್ಲಿ ತಮ್ಮದಾಗಿಸಿಕೊಳ್ಳುವ ಸುವರ್ಣಾವಕಾಶವನ್ನು ಗ್ರಾಹಕರಿಗೆ ಸಮರ್ಪಿಸಿದೆ.
ತುಂಬಿ ತುಳುಕಿದ ಮಳಿಗೆ:
ಪ್ರತಿ ವರ್ಷ ಮಳೆಗಾಲದಲ್ಲಿ ತನ್ನ ಗ್ರಾಹಕರಿಗಾಗಿ ಕಡಿಮೆ ಬೆಲೆಯಲ್ಲಿ ತಮ್ಮ ಮನದಿಚ್ಚೆಯ ಉಡುಪುಗಳನ್ನು ಕೊಂಡುಕೊಳ್ಳುವ ವಿಪುಲ ಅವಕಾಶಗಳನ್ನು ರಾಧಾಸ್ ಮಳಿಗೆಯು ಮಾನ್ಸೂನ್ ಮೇಳದ ಮೂಲಕ ನೀಡುತ್ತಿದೆ. ಪುತ್ತೂರಿನ ಫ್ಯಾಷನ್ ಲೋಕದ ಮಹಾಉತ್ಸವವೆಂದೇ ಖ್ಯಾತಿ ಪಡೆದ ಮಾನ್ಸೂನ್ ಮೇಳ ಈ ವರ್ಷವೂ ಪ್ರಾರಂಭಗೊಂಡಿದ್ದು ಈಗಾಗಲೇ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿ ಮಳಿಗೆಯು ಗ್ರಾಹಕರಿಂದ ತುಂಬಿ ತುಳುಕುತ್ತಿದೆ. ಬೆಳಿಗ್ಗಿನಿಂದಲೇ ಗ್ರಾಹಕರು ಮಳಿಗೆಗೆ ಭೇಟಿ ನೀಡಿ ತಮ್ಮ ಇಚ್ಚೆಯ ಉಡುಪುಗಳನ್ನು ಖರೀದಿಸುವ ಭರಾಟೆಯಲ್ಲಿ ತೊಡಗಿದ್ದಾರೆ.
ಪ್ರತೀ ದಿನವೂ ಹೊಸ ಸಂಗ್ರಹ, ಹೊಸ ವಿನ್ಯಾಸ:
ಗ್ರಾಹಕರಿಗಾಗಿ ಮಳಿಗೆಯಲ್ಲಿ ಪ್ರತೀ ದಿನವೂ ಹೊಸ ಹೊಸ ಬಟ್ಟೆಗಳ ಸಂಗ್ರಹ ಹಾಗೂ ಹೊಸ ವಿನ್ಯಾಸಗಳು ಲಭ್ಯವಿದೆ. ವಿನೂತನ ಶೈಲಿಯ, ಕಣ್ಮನ ಸೆಳೆಯುವ ನವನವೀನ ಮಾದರಿಯ ಉಡುಪುಗಳು, ಅತೀ ಕಡಿಮೆ ಬೆಲೆಗೆ ದೊರೆಯಲಿದ್ದು ಗ್ರಾಹಕರು ತಮಗೆ ಒಪ್ಪುವ ವಿವಿಧ ಉಡುಪುಗಳನ್ನು ಖರೀದಿಸಲು ಇದು ಸಕಾಲವಾಗಿದೆ. ಈ ಅವಕಾಶದ ಮೂಲಕ ತಮಗೆ ಬೇಕಾದ ಬಟ್ಟೆಗಳನ್ನು ಇಂದೇ ಖರೀದಿಸಿ ಇಟ್ಟುಕೊಳ್ಳಬಹುದು.
ಮೂರು ಅಂತಸ್ತಿನ ಮಳಿಗೆಯಲ್ಲಿ ಖರೀದಿ:
ರಾಧಾಸ್ ಮಳಿಗೆಯು ಮೂರು ಅಂತಸ್ತಿನಲ್ಲಿ ವ್ಯವಹರಿಸುತ್ತಿದ್ದು ಮಕ್ಕಳ, ಮಹಿಳೆಯರ ಹಾಗೂ ಪುರುಷರ ಉಡುಪುಗಳು ಪ್ರತ್ಯೇಕ ವಿಭಾಗಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ. ನೆಲ ಅಂತಸ್ತಿನಲ್ಲಿ ಮಕ್ಕಳ ಉಡುಪುಗಳು, ಪ್ರಥಮ ಅಂತಸ್ತಿನಲ್ಲಿ ಮಹಿಳೆಯರ ಎಲ್ಲಾ ತರಹದ ಉಡುಪುಗಳು, ಎರಡನೇ ಅಂತಸ್ತಿನಲ್ಲಿ ಮಹಿಳೆಯರ ಅಚ್ಚುಮೆಚ್ಚಿನ ಸೀರೆಗಳು ಹಾಗೂ ಮೂರನೇ ಅಂತಸ್ತಿನಲ್ಲಿ ಪುರುಷರ ವಿವಿಧ ಉಡುಪುಗಳ ಸಂಗ್ರಹವಿದೆ. ಕುಟುಂಬ ಸಮೇತ ಆಗಮಿಸಿ ಎಲ್ಲರಿಗೂ ಒಪ್ಪುವ ಬಟ್ಟೆಗಳನ್ನು ಖರೀದಿಸಲು ಸೂಕ್ತವಾದ ಮಳಿಗೆಯಾಗಿದೆ.
ರಾಧಾಸ್‌ನಲ್ಲಿ ನಡೆಯುವ ಮಳೆಗಾಲದ ಮಾನ್ಸೂನ್ ಮೇಳ ಕೆಲವೇ ದಿನಗಳು ಮಾತ್ರ ಲಭ್ಯವಿದೆ. ಎಲ್ಲಾ ಆದಿತ್ಯವಾರವೂ ರಾತ್ರಿ 8 ಗಂಟೆ ತನಕ ಮಳಿಗೆ ತೆರೆದಿರುತ್ತದೆ. ಗ್ರಾಹಕರು ಆಗಮಿಸಿ ಮೇಳದ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗ್ರಾಹಕರ ನಂಬಿಕೆ ವಿಶ್ವಾಸದಿಂದ ನಾವು ಮೇಲೆ ಬಂದಿದ್ದೇವೆ
ಪುತ್ತೂರಿನಲ್ಲಿ ಮಾನ್ಸೂನ್ ಮೇಳ ಫೇಮಸ್ ಆಗಿದೆ. ಗ್ರಾಹಕರು ಇಷ್ಟಪಡುವ ಡಿಸ್ಕೌಂಟ್ ಇಲ್ಲಿದೆ. ಹೊಸ ವಿನ್ಯಾಸ, ಹೊಸ ಸಂಗ್ರಹ, ಅತೀ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ದೊರೆಯಲಿದೆ. ಸಿಬಂದಿಗಳ ಶ್ರಮ ಉತ್ತಮವಾಗಿದೆ. ಮಿಲ್ಸ್, ಇಂಡಸ್ಟ್ರೀ, ಹೋಲ್‌ಸೇಲ್‌ನವರಲ್ಲಿ ಹೋಗಿ ಕ್ವಾಲಿಟಿ ಪರೀಕ್ಷಿಸಿ ತರಲಾಗುತ್ತದೆ. ಮಕ್ಕಳ, ಮಹಿಳೆಯರ, ಪುರುಷರ ಎಲ್ಲಾ ತರಹದ ವಿನ್ಯಾಸಗಳ ಬಟ್ಟೆಗಳು ಲಭ್ಯವಿದೆ. ಒಮ್ಮೆ ಮಳಿಗೆಗೆ ಭೇಟಿ ಕೊಡಿ. ನಮ್ಮ ಸಿಬ್ಬಂದಿಗಳು ತುಂಬಾ ಶ್ರಮದಿಂದ ಕೆಲಸ ಮಾಡುತ್ತಿದ್ದಾರೆ. ಗ್ರಾಹಕರ ನಂಬಿಕೆ ವಿಶ್ವಾಸದಿಂದ ನಾವು ಮೇಲೆ ಬಂದಿದ್ದೇವೆ.
ಪ್ರಥಮ್, ರಾಧಾಸ್ ಮಳಿಗೆಯ ಮಾಲಕರು