ಉಪ್ಪಿನಂಗಡಿ: ಪ್ರೌಢಶಾಲಾ ವಿದ್ಯಾರ್ಥಿಗಳ ಉಪ್ಪಿನಂಗಡಿ ವಲಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಇಲ್ಲಿನ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ಬಾಲಕಿಯರ ತಂಡ ಪ್ರಥಮ ಹಾಗೂ ಬಾಲಕರ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡು ತಾಲೂಕು ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದೆ.
ಬಾಲಕಿಯರ ತಂಡದಲ್ಲಿ ಶ್ರುತ, ಅಭೀಕ್ಷ, ಜುವೆಲ್ ಚಾಂಜೆಲ್, ಸುಹಾನಿ, ಸಾನ್ವಿ ಹಾಗೂ ಬಾಲಕರ ತಂಡದಲ್ಲಿ ಭವಿತ್, ಶಲೀಲ್, ಪವನ್, ಶ್ರೇಯಸ್, ನಿರೀಕ್ಷಿತ್ರವರು ಭಾಗವಹಿಸಿದರು. ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಸತೀಶ್ ಹಾಗೂ ವಾಸಪ್ಪರವರು ತರಬೇತಿಯನ್ನು ನೀಡಿದ್ದರು.
ಉದ್ಘಾಟನೆ: ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟವು ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆ.6ರಂದು ನಡೆಯಿತು. ಶಾಲಾ ಸಂಚಾಲಕ ವಂ.ಫಾ. ಜೆರಾಲ್ಡ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಮ್ಯಾಕ್ಸಿಂ ಲೋಬೋ, ಉಪ್ಪಿನಂಗಡಿ ವಲಯದ ಸಿಆರ್ಪಿ ಅಶ್ರಫ್, ಉಪ್ಪಿನಂಗಡಿ ವಲಯ ಪ್ರೌಢಶಾಲಾ ವಿಭಾಗದ ನೋಡಲ್ ಅಧಿಕಾರಿ ಕುಶಾಲಪ್ಪ, ಉಪ್ಪಿನಂಗಡಿ ವಲಯದ ಪ್ರಾಥಮಿಕ ವಿಭಾಗದ ನೋಡಲ್ ಅಧಿಕಾರಿ ಗಂಗಾಧರ, ಸೈಂಟ್ ಮೇರಿಸ್ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮೀರಾ ಮರ್ಲಿನ್ ರೊಡ್ರಿಗಸ್, ಸಂತ ಫಿಲೋಮಿನಾ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಫಿಲೋಮಿನಾ ಪಾಯಸ್, ಸೈಂಟ್ ಮೇರಿಸ್ ನರ್ಸರಿ ವಿಭಾಗದ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ವ್ಯಾಲೆಂಟೀನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕರಾದ ಶ್ರೀಮತಿ ಮೇಘಶ್ರೀ ಸ್ವಾಗತಿಸಿದರು. ಮರಿಯ ಜ್ಯೋತಿ ವಂದಿಸಿದರು. ಕರುಣಾ ಕುಮಾರಿ ಹಾಗೂ ಶಶಿಧರ್ ಕಾರ್ಯಕ್ರಮ ನಿರೂಪಿಸಿದರು.