ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಗ್ರೇಡ್‌-2 ನೂತನ ಕಾರ್ಯಾಧ್ಯಕ್ಷರಾಗಿ ಸೀತಾರಾಮ ಗೌಡ ಮಿತ್ತಡ್ಕ ನೇಮಕ

0

ಪುತ್ತೂರು: ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಗ್ರೇಡ್‌-2 ಕಾರ್ಯಕಾರಿ ಸಮಿತಿಗೆ ನೂತನ ಕಾರ್ಯಾಧ್ಯಕ್ಷರಾಗಿ ರಾಜ್ಯ ಸಂಘದ ಸೂಚನೆಯಂತೆ ಪುತ್ತೂರು ತಾಲೂಕಿನ ಪೇರಲ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸೀತಾರಾಮ ಗೌಡ ಮಿತ್ತಡ್ಕರವರನ್ನು ನೇಮಕ ಮಾಡಲಾಗಿದೆ.

ಇವರು ಈ ಹಿಂದೆ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರತಿನಿಧಿಯಾಗಿ, ಸರಕಾರಿ ನೌಕರರ ಸಂಘ ಪುತ್ತೂರು ತಾಲೂಕು ಘಟಕದ ಇಲಾಖಾ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ್ದರು.

ಬೆಟ್ಟಂಪಾಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಮಾಜಿ ಅಧ್ಯಕ್ಷರಾಗಿ, ಕೇಸರಿ ಮಿತ್ರವೃಂದ ಕೇಸರಿನಗರದ ಮಾಜಿ ಅಧ್ಯಕ್ಷರಾಗಿ ಸೇರಿದಂತೆ  ಹಲವು ಸಂಘ ಸಂಸ್ಥೆಗಳಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here