ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸ್ಪರ್ಧೆ | ಹನ್ನೆರಡು ಪ್ರಶ್ನೆಗಳು | ಅಂಚೆ ಮೂಲಕ ಉತ್ತರಿಸುವುದು
ಪುತ್ತೂರು: ದರ್ಬೆ ಬುಶ್ರಾ ಟವರ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಪುತ್ತೂರಿನ ಪ್ರತಿಷ್ಠಿತ ನಯಾ ಚಪ್ಪಲ್ ಬಜಾರ್ ಮಳಿಗೆಯು ಪ್ರಪ್ರಥಮ ಬಾರಿಗೆ ಸ್ವಾತಂತ್ರೋತ್ಸವದ ಅಂಗವಾಗಿ ವಿನೂತನ ರಸ ಪ್ರಶ್ನೆ ಸ್ಪರ್ಧೆಯನ್ನು ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದು, ವಿದ್ಯಾರ್ಥಿಗಳಿಗೆ ಆಕರ್ಷಕ ಬಹುಮಾನಗಳನ್ನು ಪಡೆಯುವ ಸುವರ್ಣಾವಕಾಶವಿದೆ.
ಸ್ಪರ್ಧಾ ನಿಯಮಗಳು:
ಸ್ಪರ್ಧಿಗಳು ಹನ್ನೆರಡು ಪ್ರಶ್ನೆಗಳಿಗೆ ಅಂಚೆ ಮೂಲಕ ಉತ್ತರಿಸಬೇಕು. ಆಗಸ್ಟ್ 13ರ ಒಳಗೆ ಉತ್ತರ ತಲುಪುವಂತಾಗಬೇಕು. ಪ್ರಥಮ, ದ್ವಿತೀಯ, ತೃತೀಯ ಮತ್ತು 7 ಆಕರ್ಷಕ ಬಹುಮಾನಗಳಿವೆ. ವಿಜೇತರಿಗೆ ಆಗಸ್ಟ್ ಹದಿನೈದು ಸ್ವಾತಂತ್ರೋತ್ಸವದ ದಿನದಂದು ದರ್ಬೆ ನಯಾ ಚಪ್ಪಲ್ ಬಜಾರ್ ಶೋರೂಂನಲ್ಲಿ ಬಹುಮಾನ ವಿತರಿಸಲಾಗುವುದು. ಒಂದಕ್ಕಿಂತ ಹೆಚ್ಚು ಸಮಾನ ಅಂಕಗಳು ಬಂದರೆ ವಿಜೇತರನ್ನು ಡ್ರಾ ಮೂಲಕ ನಿರ್ಧರಿಸಲಾಗುತ್ತದೆ. ವಿಜೇತರಿಗೆ ಆಗಸ್ಟ್ 14 ರಂದು ಮಾಹಿತಿ ನೀಡಲಾಗುವುದು. ಸ್ಪರ್ಧಿಗಳು ತಮ್ಮ, ಹೆಸರು, ತರಗತಿ, ಶಾಲೆ ಮತ್ತು ಮೊಬೈಲ್ ಸಂಖ್ಯೆಯನ್ನು ತಪ್ಪದೆ ನಮೂದಿಸಬೇಕು ಎಂಬುದು ಸ್ಪರ್ಧಿಗಳು ನಿಯಮವನ್ನು ಪಾಲಿಸಬೇಕಾಗುತ್ತದೆ.
12 ರಸ ಪ್ರಶ್ನೆಗಳು:
1)ಕರ್ನಾಟಕದಲ್ಲಿ ಮೊತ್ತ ಮೊದಲ ಸ್ವಾತಂತ್ರ್ಯ ಸಂಗ್ರಾಮ ನಡೆದ ಸ್ಥಳ ಯಾವುದು? 2)ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್ ಯಾರು?, 3)ಪ್ರಪಂಚದ ಅತೀ ದೊಡ್ಡ ಸರೋವರ ಯಾವುದು?, 4)ಮಹಾಭಾರತದಲ್ಲಿ ಬರುವ ಜನಮೇಜಯನ ತಂದೆ ಯಾರು?, 5)ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನವನ್ನಾಗಿ ಆಚರಿಸಲು ಹೇಳಿದವರು ಯಾರು?, 6)ಇಂಕಿಲಾಬ್ ಜಿಂದಾಬಾದ್ ಈ ಘೋಷಣೆ ಕೊಟ್ಟವರು ಯಾರು?, 7) ಉಪ್ಪಿನ ಸತ್ಯಾಗ್ರಹದ ವೇಳೆ ಮಹಾತ್ಮ ಗಾಂಧಿಯವರು ಇತರ ಸಾವಿರಾರು ಸ್ವಾತಂತ್ರ್ಯ ವೀರರೊಂದಿಗೆ ಯಾವ ಸ್ಥಳದಿಂದ ಎಲ್ಲಿಯ ತನಕ ಪಾದಯಾತ್ರೆ ಕೈಗೊಂಡರು?, 8)ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಪ್ರಪ್ರಥಮ ಮಹಿಳಾ ಅಧ್ಯಕ್ಷೆ ಯಾರು?, 9)ನಮ್ಮ ರಾಷ್ಟ್ರಧ್ವಜವನ್ನು ಯಾರು ವಿನ್ಯಾಸಗೊಳಿಸಿದವರು?, 10)ಅಸಹಕಾರ ಚಳುವಳಿ ಯಾವಾಗ ಜರಗಿತು?, 11)ಸ್ವತಂತ್ರ ಭಾರತದ ಮೊದಲ ರಾಷ್ಟ್ರಪತಿ ಯಾರು?, 12)ಬುಶ್ರಾ ಟವರ್ಸ್ ನಲ್ಲಿನ ನಯಾ ಚಪ್ಪಲ್ ಬಜಾರ್ ಪ್ರಥಮವಾಗಿ ಉದ್ಘಾಟನೆಗೊಂಡ ದಿನಾಂಕ ಯಾವುದು? ಹೀಗೆ ವಿದ್ಯಾರ್ಥಿಗಳು ಹನ್ನೆರಡು ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ.
ಸ್ವಾತಂತ್ರೋತ್ಸವದ ಅಂಗವಾಗಿ ಮಳಿಗೆಯು ಏರ್ಪಡಿಸಿದ ಈ ರಸ ಪ್ರಶ್ನೆ ಸ್ಪರ್ಧೆಗೆ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರೋತ್ಸಾಹಿಸುವಂತೆ ಮಳಿಗೆಯ ಮಾಲಕರಾದ ರಫೀಕ್ ಎಂ.ಜಿರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.