ನೆಲ್ಯಾಡಿ: ನಿವೃತ್ತ ದೈ.ಶಿ.ಶಿ. ಜೋನ್ ಅವರಿಂದ ಹಿರಿಯರಿಗೆ ಸನ್ಮಾನ

0

ನೆಲ್ಯಾಡಿ: ಬೆಳ್ತಂಗಡಿ ತಾಲೂಕಿನ ಉಜಿರೆ ಹಳೆಪೇಟೆ, ಪುತ್ತೂರು ತಾಲೂಕಿನ ಬಜತ್ತೂರು, ಕಡಬ ತಾಲೂಕಿನ ಗೋಳಿತ್ತಟ್ಟು ಹಾಗೂ ರಾಮಕುಂಜ ಸರಕಾರಿ ಶಾಲೆಗಳಲ್ಲಿ ಸುಮಾರು 30 ವರ್ಷ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿ ಜು.31ರಂದು ಸೇವಾ ನಿವೃತ್ತಿಯಾದ ಜೋನ್ ಕೆ.ಪಿ.ಅವರಿಂದ ಹಿರಿಯರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಸ್ನೇಹಕೂಟ ಆ.೨ರಂದು ತಮ್ಮ ನಿವಾಸ ನೆಲ್ಯಾಡಿ ಮರಿಯಭವನದಲ್ಲಿ ನಡೆಯಿತು.


ಅತ್ತೆ ಏಲಿಕುಟ್ಟಿ ಕೇರಳ, ಸಹೋದರ ನೆಲ್ಯಾಡಿಯ ಉದ್ಯಮಿ ಕೆ.ಪಿ.ತೋಮಸ್, ಸಹೋದರಿ ಆಲಿ ಹಾಗೂ ಬಾವ ಜಾರ್ಜ್ ಅವರನ್ನು ಜೋನ್ ಕೆ.ಪಿ.ಅವರು ಸನ್ಮಾನಿಸಿ ಗೌರವಿಸಿದರು. ಇದೇ ವೇಳೆ ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚ್ ವತಿಯಿಂದ ಕೆ.ಪಿ.ಜೋನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚ್‌ನ ಧರ್ಮಗುರು ರೆ.ಫಾ.ಶಾಜಿ ಮ್ಯಾಥ್ಯು ಅವರು ಮಾತನಾಡಿ, ದೈಹಿಕ ಶಿಕ್ಷಣ ಶಿಕ್ಷಕರಾಗಿ ಸುದೀರ್ಘ 30 ವರ್ಷ ಸೇವೆ ಸಲ್ಲಿಸಿರುವ ಜೋನ್ ಕೆ.ಪಿ.ಅವರ ಸೇವೆಯನ್ನು ಪ್ರಶಂಸಿಸಿದರು. ಅಲ್ಲದೇ ಜೋನ್ ಕೆ.ಪಿ.ಅವರು ತಾನು ಸೇವೆ ಸಲ್ಲಿಸುತ್ತಿದ್ದ ಗೋಳಿತ್ತಟ್ಟು ಶಾಲೆಯಲ್ಲಿ ಸಾವಿರಾರು ರೂ.ವೆಚ್ಚದಲ್ಲಿ ಮಹಾತ್ಮಗಾಂಧಿಯವರ ಪುತ್ಥಳಿಯನ್ನು ನಿರ್ಮಿಸಿ ಲೋಕಾರ್ಪಣೆ ಮಾಡಿದ್ದಾರೆ. ಸಮಾಜದ ಸಾಧಕರನ್ನು ಗುರುತಿಸಿ ಸನ್ಮಾನಿಸಿದ್ದಾರೆ. ಇದೊಂದು ಅಪರೂಪದ ಕಾರ್ಯಕ್ರಮವಾಗಿದ್ದು ಎಲ್ಲಾ ಸರಕಾರಿ ನೌಕರರಿಗೆ ಮಾದರಿಯಾಗಿದೆ ಎಂದರು.

ನೆಲ್ಯಾಡಿ ಸೈಂಟ್ ಸ್ಟೀಫನ್ ಚರ್ಚ್‌ನ ಧರ್ಮಗುರು ಜಿಬಿನ್ ಮಾಥ್ಯು, ಫಾ.ಸ್ಟೀಫನ್ ಬೆಂಗಳೂರು, ನೆಲ್ಯಾಡಿ ಸೇಕ್ರೆಡ್ ಹಾರ್ಟ್‌ಕಾನ್ವೆಂಟ್‌ನ ಧರ್ಮಭಗಿನಿಯರಾದ ಸಿ| ಲಿಸ್ ಮಾತ್ಯು, ಸಿ|ಎಲ್‌ಸ್ಲೀಟ್ ಮತ್ತಿತರರು ಉಪಸ್ಥಿತರಿದ್ದರು. ನಂತಹ ಸಹಭೋಜನ ನಡೆಯಿತು.

LEAVE A REPLY

Please enter your comment!
Please enter your name here