ಕ್ರೀಡಾ ಕ್ಷೇತ್ರದಲ್ಲಿ ಕಡಬದ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ಸಾಧನೆ

0

ಕಡಬ: ಕಡಬ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗಗಳ ಶಟಲ್ ಪಂದ್ಯಾಟವು ಆ.3ರಂದು ಬಿಳಿನೆಲೆ ಬೈಲು ಶಾಲೆಯವರ ಮೇಲ್ವಿಚಾರಣೆಯಲ್ಲಿ ಕುಲ್ಕುಂದದಲ್ಲಿ ಜರಗಿತು. ಶಟಲ್ ನ ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಕಡಬದ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಸ್ವಸ್ತಿಕ ರಾಮ ಯು, ಮಹಮ್ಮದ್ ಅಜ್ಮೀರ್ , ಗೌರನ್ ರೈ, ನಿಕ್ಷಿತ್ ಮತ್ತು ಭೌತಿಕ್ ಅವರ ತಂಡವು ದ್ವಿತೀಯ ಸ್ಥಾನವನ್ನು ಗಳಿಸಿದೆ. ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದಲ್ಲಿ ಸ್ಪರ್ಶ ಪಿ, ಕೃತಿ ಮತ್ತು ಸಾನ್ವಿ ಡಿ ಅವರ ತಂಡವು ದ್ವಿತೀಯ ಸ್ಥಾನವನ್ನು ಗಳಿಸಿದೆ. ಹೈಸ್ಕೂಲ್ ಬಾಲಕರ ವಿಭಾಗದಲ್ಲಿ ಪ್ರಜ್ಯೋತ್ ಎನ್ ಕೆ , ನಮನ್ ಮತ್ತು ಸ್ಟೆಬಿನ್ ಅವರ ತಂಡವು ದ್ವಿತೀಯ ಸ್ಥಾನವನ್ನು ಗಳಿಸಿದೆ.

ಕರಾಟೆ:
ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗಗಳ ಕರಾಟೆ ಪಂದ್ಯಾಟವು ಆ.5ರಂದು ಪುತ್ತೂರಿನ ಸಂತ ವಿಕ್ಟರ್ಸ್ ಶಾಲೆಯಲ್ಲಿ ಜರಗಿತು. ಇದರಲ್ಲಿ ಬಾಲಕಿಯರ ಪ್ರಾಥಮಿಕ ವಿಭಾಗದಲ್ಲಿ ಕಡಬದ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಮಾನ್ವಿ ಮತ್ತು ಪ್ರೌಢ ವಿಭಾಗದಲ್ಲಿ ಧೃತಿ ಹಾಗು ಯಾನ್ವಿತ ಎಂ ಕೆ ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ.

ಚೆಸ್
ಕಡಬ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗಗಳ ಚೆಸ್ ಪಂದ್ಯಾಟವು ಆ. 7ರಂದು ಆಲಂಕಾರಿನ ಶ್ರೀ ಭಾರತೀ ಶಾಲೆಯಲ್ಲಿ ಜರಗಿತು. ಇದರಲ್ಲಿ ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದಲ್ಲಿ ಕಡಬದ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಅಲ್ವಿಶಾ ಪಿ ಪಿ ಮತ್ತು ಎಂಟನೇ ತರಗತಿಯ ಬಾಲಕರ ವಿಭಾಗದಲ್ಲಿ ಅದ್ವೈತ್ ಎಸ್ ಪಿ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ

LEAVE A REPLY

Please enter your comment!
Please enter your name here