ಕೊರಿಂಗಿಲದಲ್ಲಿ ತೋಟಕ್ಕೆ ಉರುಳಿದ ಕಾಂಕ್ರಿಟ್ ಮಿಕ್ಸರ್ ವಾಹನ

0

ಬೆಟ್ಟಂಪಾಡಿ: ಇಲ್ಲಿನ ಕೊರಿಂಗಿಲ ಎಂಬಲ್ಲಿ ವಾಹನವೊಂದಕ್ಕೆ ಸೈಡ್ ಕೊಡುವ ವೇಳೆ ಕಾಂಕ್ರಿಟ್ ಮಿಕ್ಸರ್ ವಾಹನವೊಂದು ತೋಟಕ್ಕೆ ಉರುಳಿಬಿದ್ದ ಘಟನೆ ಆ. 9ರಂದು ಮಧ್ಯಾಹ್ನ ನಡೆದಿದೆ.
ಪಾಣಾಜೆಯ ಸರಕಾರಿ ಸಮುದಾಯ ಆಸ್ಪತ್ರೆಯ ನಿರ್ಮಾಣ ಕಾಮಗಾರಿಗೆ ಈ ವಾಹನ ಹೋಗುತ್ತಿತ್ತು ಎನ್ನಲಾಗಿದೆ. ಎದುರಿನಿಂದ ಲಾರಿಯೊಂದು ಬಂದಾಗ ರಸ್ತೆ ಬದಿ ಸೈಡ್ ಕೊಡುವ ವೇಳೆ ಮಿಕ್ಸರ್ ವಾಹನ ಮಣ್ಣಿನಲ್ಲಿ ಹೂತು ಹೋಗಲಾರಂಭಿಸಿ, ನಿಯಂತ್ರಣ ಸಿಗದೆ ಪಕ್ಕದ ತೋಟಕ್ಕೆ ಉರುಳಿದೆ. ಘಟನೆಯಲ್ಲಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here