ನೆಲ್ಯಾಡಿ: ನೆಲ್ಯಾಡಿ ಸಂತ ಜಾರ್ಜ್ ವಿದ್ಯಾ ಸಂಸ್ಥೆಯಲ್ಲಿ ಕವಿ ರವೀಂದ್ರನಾಥ ಠಾಗೋರ್ ಅವರ ಪುಣ್ಯತಿಥಿಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಅಬ್ರಾಹಾಂ ವರ್ಗಿಸ್ ವಹಿಸಿ ಕವಿ ರವೀಂದ್ರನಾಥ್ ಠಾಗೋರ್ ಅವರ ಸೇವೆ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿರದೆ ಅವರ ಆದರ್ಶಗಳು ಪ್ರಪಂಚಕ್ಕೆ ಮಾದರಿಯಾಗಿದೆ ಎಂದರು.
ಅತಿಥಿ ಎಸ್.ಡಿ ಎಂ. ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ದಿವಾಕರ ಕೊಕ್ಕಡ ಮಾತಾಡಿ, ಠಾಗೋರರು ಪ್ರಕೃತಿ ಕವಿ ಆಗಿದ್ದರು ವಿದ್ಯಾರ್ಥಿಗಳೆಲ್ಲರೂ ಪ್ರಕೃತಿಯನ್ನು ಸಂರಕ್ಷಿಸಬೇಕು ಪ್ರಕೃತಿ ವಿಕೋಪದಿಂದ ಪಾರಾಗಬೇಕು ಎಂದರು. ಸಂಸ್ಥೆಯ ಸಂಚಾಲಕರಾದ ರೇ ಫಾ. ನೋಮಿಸ್ ಕುರಿಯಾಕೋಸ್ ಮಾತನಾಡಿ ಟಾಗೋರ್ರರ ಆದರ್ಶಗಳು ಪ್ರತಿಯೊಂದು ವಿದ್ಯಾಸಂಸ್ಥೆಯನ್ನು ಮತ್ತು ವಿದ್ಯೆಯನ್ನು ಪವಿತ್ರವಾದ ಗುರಿಯತ್ತ ಸಾಗಿಸುತ್ತದೆ ಎಂದರು. ಪ್ರಾಚಾರ್ಯರಾದ ಎಂ. ಕೆ. ಎಲಿಯಾಸ್, ಮುಖ್ಯಗುರು ಎಂ. ಐ. ತೋಮಸ್ ಉಪಸ್ಥಿತರಿದ್ದರು.
ಉಪನ್ಯಾಸಕಿ ಜಸಿಂತ ಕೆ.ಜೆ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಕಿ ಜೆಸಿಂತ ಡಿಸೋಜ ವಂದಿಸಿ, ಉಪನ್ಯಾಸಕ ಕಿರಣ್ ರೈ ಮತ್ತು ಶಿಕ್ಷಕಿ ಅನುಷಾ ನಿರೂಪಿಸಿದರು.
ಬಳಿಕ ವಿದ್ಯಾರ್ಥಿಗಳಿಂದ ಠಾಗೂರರ ಕುರಿತಾಗಿ ವಿವಿಧ ಸಾಹಿತ್ಯ ಕಾರ್ಯಕ್ರಮಗಳು ನೆರವೇರಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ನಿವೃತ್ತ ಅಧ್ಯಾಪಕರುಗಳು ಎಲ್ಲಾ ಉಪನ್ಯಾಸಕ ಬಂಧುಗಳು ಶಿಕ್ಷಕರುಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.