ಚೇತನಾ ಆಸ್ಪತ್ರೆಯಲ್ಲಿ ಉಚಿತ ಫೈಬ್ರೋಸ್ಕ್ಯಾನ್ ಟೆಸ್ಟ್ ತಪಾಸಣೆ

0

ಪುತ್ತೂರು:ಇಲ್ಲಿನ ಮಹಮ್ಮಾಯ ದೇವಸ್ಥಾನದ ಬಳಿಯ ಚೇತನಾ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಪುತ್ತೂರು ಸಹಯೋಗದೊಂದಿಗೆ ಆ.8 ರಂದು ಫ್ಯಾಟಿ ಲಿವರ್(ಲಿವರ್ ನ ಕೊಬ್ಬು) ಇರುವವರಿಗೆ ವಿಶೇಷ  ಫೈಬ್ರೋಸ್ಕ್ಯಾನ್ ಟೆಸ್ಟ್  ತಪಾಸಣೆಯನ್ನು ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ನಡೆಯಿತು.

40 ಮಂದಿ ಫಲಾನುಭವಿಗಳು ಈ ಶಿಬಿರದಲ್ಲಿ ಪಾಲ್ಗೊಂಡಿದ್ದು ಆಸ್ಪತ್ರೆ ವೈದ್ಯ ಡಾ.ಜೆ.ಸಿ ಅಡಿಗರವರು  ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಪುತ್ತೂರು ಹಿರಿಯ ಸದಸ್ಯ ಸುರೇಶ್ ಶೆಟ್ಟಿ, ಆಸ್ಪತ್ರೆ ಮ್ಯಾನೇಜರ್ ನೋಯಲ್ ಡಿ’ಸೋಜ ಉಪಸ್ಥಿತರಿದ್ದರು.  

LEAVE A REPLY

Please enter your comment!
Please enter your name here