





ಪುಣಚ: ಪುಣಚ ಗ್ರಾಮದ ಹಿತ್ತಿಲು ಎಂಬಲ್ಲಿ ದೊಡ್ಡಮನೆ ಕುಟುಂಬಸ್ಥರು ನಡೆಸಿಕೊಂಡು ಬರುತ್ತಿರುವ ಶ್ರೀ ಸಪರಿವಾರ ನಾಗಬ್ರಹ್ಮ ಸ್ಥಾನದಲ್ಲಿ ಆ.9ರಂದು ನಾಗರ ಪಂಚಮಿ ಆಚರಣೆ ನಡೆಯಿತು.


ಬೆಳಿಗ್ಗೆ ಶಾಂತಿಗೋಡು ಕೃಷ್ಣ ಶಗ್ರಿತ್ತಾಯರವರ ಪೌರೋಹಿತ್ಯದಲ್ಲಿ ವಿವಿಧ ಅಭಿಷೇಕ, ತಂಬಿಲಸೇವೆ, ಮಹಾಪೂಜೆ ಪ್ರಸಾದ ವಿತರಣೆ ನಡೆದು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ದೊಡ್ಡಮನೆ ಕುಟುಂಬಸ್ಥರು ಗ್ರಾಮಸ್ಥರು ಪಾಲ್ಗೊಂಡರು.













