ಪುತ್ತೂರು: ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಿಶೇಷ ಸಾಧನೆಗೆ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನಿಂದ ನೀಡಲ್ಪಡುವ ಪ್ರಶಸ್ತಿಗೆ ಸತತ 4ನೇ ಬಾರಿಗೆ ಭಾಜನವಾಗಿದೆ.
2023-24ನೇ ಸಾಲಿನಲ್ಲಿ ಸಹಕಾರಿ ಸಂಘವು ಒಟ್ಟು 2,634 ಸದಸ್ಯರಿಂದ ರೂ. 2,25,15,700 ಪಾಲು ಬಂಡವಾಳ ಹೊಂದಿದೆ. ರೂ.8,24,44,915.63 ವಿವಿಧ ರೂಪದ ಠೇವಣಾತಿಗಳನ್ನು ಹೊಂದಿದೆ. ವರದಿ ವರ್ಷದಲ್ಲಿ ಸಂಘವು ಸದಸ್ಯರಿಗೆ ವಿವಿಧ ರೂಪದಲ್ಲಿ ರೂ.22,82,88,222 ಸಾಲ ವಿತರಿಸಲಾಗಿದ್ದು ರೂ.19,66,15,349 ಹೊರಬಾಕಿ ಸಾಲವಾಗಿರುತ್ತದೆ. ರೂ.6,99,501 ಸಾಲ ಸುಸ್ತಿಯಾಗಿರುತ್ತದೆ. ಸಾಲ ವಸೂಲಾತಿಯಲ್ಲಿ ಸಂಘವು ಶೇ.99.66ಸಾಧನೆ ಮಾಡಿದೆ. ಕಳೆದ ಆರ್ಥಿಕ ವರ್ಷದಲ್ಲಿ ರೂ.123ಕೋಟಿ ವ್ಯವಹಾರ ನಡೆಸಿ ರೂ.63.14ಲಕ್ಷ ನಿವ್ವಳ ಲಾಭಗಳಿಸಿದೆ. ಲೆಕ್ಕಪರಿಶೋಧನೆಯಲ್ಲಿ ಸಂಘವು ಸತತ `ಎ’ ಶ್ರೇಣಿಯನ್ನು ಪಡೆದುಕೊಂಡಿದೆ.
ಬಲ್ನಾಡು ಒಂದೇ ಗ್ರಾಮದ ವ್ಯಾಪ್ತಿಯನ್ನು ಹೊಂದಿರುವ ಸಂಘವು ಉಜ್ರುಪಾದೆಯಲ್ಲಿ ಸಂಘದ ಶಾಖೆಯನ್ನು ಹೊಂದಿದೆ. ಸಂಘದ ಕೇಂದ್ರ ಕಚೇರಿಗೆ ನಿವೇಶನ ಖರೀದಿಸಿ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡು ಲೋಕಾರ್ಪಣೆಗೊಂಡಿದೆ. ಸಹಕಾರಿ ಕ್ಷೇತ್ರದಲ್ಲಿ ಅತ್ಯುತ್ತಮ ಕಾರ್ಯನಿರ್ವಹಣೆಗಾಗಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನಿಂದ ಕೊಡಲ್ಪಡುವ ಪ್ರಶಸ್ತಿಗೆ ಸಂಘವು ಆಯ್ಕೆಯಾಗಿದ್ದು, ಮಂಗಳೂರಿನ ಕೊಡಿಯಾಲ್ಬೈಲ್ನಲ್ಲಿರುವ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಕೇಂದ್ರ ಕಚೇರಿಯ ಉತ್ಕೃಷ್ಠ ಸಹಕಾರಿ ಸೌಧದಲ್ಲಿ ಆ.14ರಂದು ನಡೆಯಲಿರುವ ಬ್ಯಾಂಕ್ನ ಮಹಾಸಭೆಯಲ್ಲಿ ಪ್ರಶಸ್ತಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಸಂಘದ ಅಧ್ಯಕ್ಷರಾಗಿ ಸತೀಶ್ ಗೌಡ ಒಳಗುಡ್ಡೆ, ಉಪಾಧ್ಯಕ್ಷರಾಗಿ ಅಬ್ದುಲ್ ಹಕೀಂ, ನಿರ್ದೇಶಕರಾಗಿ ಪ್ರವೀಣ್ಚಂದ್ರ ಆಳ್ವ ಎ.ಯಂ., ಪ್ರಕಾಶ್ಚಂದ್ರ ಆಳ್ವ, ನವೀನ್ ಕರ್ಕೇರ, ಅಂಬ್ರೋಸ್ ಡಿ’ಸೋಜ, ಸೀತಾರಾಮ, ಶುಕವಾಣಿ, ವಿನಯ, ಪ್ರಮೋದ್ ಹಾಗೂ ಸುರೇಶ್ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಸಂಘದ ಅಧ್ಯಕ್ಷ ಸತೀಶ್ ಗೌಡ ತಿಳಿಸಿದ್ದಾರೆ.
ನಮ್ಮ ಸಹಕಾರಿ ಸಂಘವು ಕಳೆದ ಆರ್ಥಿಕ ವರ್ಷದಲ್ಲಿ ಉತ್ತಮ ವ್ಯವಹಾರ ನಡೆಸಿ, ವಸೂಲಾತಿಯಲ್ಲೂ ಸಾಧನೆ ಮಾಡಿದೆ. ಸಂಘದ ಸಾಧನೆಗೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ 4ನೇ ಬಾರಿಗೆ ಪ್ರಶಸ್ತಿ ನೀಡುತ್ತಿದೆ. ಸಂಘದ ಸಾಧನೆ ಪ್ರಶಸ್ತಿ ಪಡೆಯುತ್ತಿರುವುದು ಸಂತಸ ತಂದಿದೆ. ಸಂಘದ ಸಾಧನೆಗೆ ಕಾರಣಕರ್ತರಾದ ಆಡಳಿತ ಮಂಡಳಿ, ಸದಸ್ಯರಿಗೆ, ಗ್ರಾಹಕರಿಗೆ ಹಾಗೂ ಸಿಬಂದಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಸಂಘದ ಅಧ್ಯಕ್ಷ ಸತೀಶ್ ಗೌಡ ಒಳಗುಡ್ಡೆ ತಿಳಿಸಿದ್ದಾರೆ.