ಚಿಕ್ಕಮುಡ್ನೂರು ಸರಕಾರಿ ಹಿರಿಯ ಪ್ರಾಥಾಮಿಕ ಶಾಲೆಯಲ್ಲಿ ವಿವಿಧ ಕಾರ್ಯಕ್ರಮ

0

ಕೆಮ್ಮಾಯಿ: ಚಿಕ್ಕಮುಡ್ನೂರು ಸರಕಾರಿ ಹಿರಿಯ ಪ್ರಾಥಾಮಿಕ ಶಾಲೆಯಲ್ಲಿ ಆ.7ರಂದು ಎಸ್‌ ಡಿ ಎಂ ಸಿ, ಪೋಷಕರ ಸಭೆ, ಆಟಿಡೊಂಜಿ ದಿನ, ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ನಡೆಯಿತು.

ಕೆ.ನಳಿನಿ ಅವರ ಅಧ್ಯಕ್ಷತೆಯಲ್ಲಿ ಎಸ್‌ ಡಿ ಎಂ ಸಿ ಸಭೆ ನಡೆಯಿತು. ಎಸ್‌ ಡಿ ಎಂ ಸಿಯ 13 ಸದಸ್ಯರು ಭಾಗವಹಿಸಿದ್ದರು.ಆ ಬಳಿಕ ಪೋಷಕರಿಗೆ ಸ್ತನ್ಯಪಾನದ ಮಹತ್ವದ ಕುರಿತು ಮಾಹಿತಿ ನೀಡಲಾಯಿತು. ಪ್ರಾಥಾಮಿಕ ಆರೋಗ್ಯ ಕೇಂದ್ರ ಬೀರ್ನಹಿತ್ಲು ಇಲ್ಲಿನ ಸಮುದಾಯ ಆರೋಗ್ಯ ಅಧಿಕಾರಿ ಸುಷ್ಮಾ ಮಾಹಿತಿ ನೀಡಿದರು. ಆಶಾ ಕಾರ್ಯಕರ್ತೆ ಚಂದ್ರಾವತಿ ಸಹಕರಿಸಿದರು.

ಕಾರ್ಯಕ್ರಮದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಆಚರಿಸಲಾಯಿತು.ನಾನಾ ರೀತಿಯ ಆಟಿಯ ತಿನಿಸುಗಳನ್ನು ಹಂಚಲಾಯಿತು.

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಗುರು ಪುಷ್ಪಾ ಕೆ ಸ್ವಾಗತಿಸಿ, ಅತಿಥಿ ಶಿಕ್ಷಕಿ ಮೋಹಿನಿ ವಂದಿಸಿದರು. ಜ್ಞಾನದೀಪ ಶಕ್ಷಕಿ ಲಾವಣ್ಯ ಸಹಕರಿಸಿದರು. ಅಡುಗೆ ಸಿಬ್ಬಂದಿ ಜಯಶ್ರೀ, ಕಮಲ ಸಹಕರಿಸಿದರು.

LEAVE A REPLY

Please enter your comment!
Please enter your name here