ಪುತ್ತೂರು: ಕೆಯ್ಯೂರು ಶ್ರೀಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ಪುತ್ತೂರು ವತಿಯಿಂದ ನಡೆದ ಬೊಳಿಕ್ಕಲ ಒಕ್ಕೂಟದ ಆಟಿಡೊಂಜಿ ದಿನ ಕಾರ್ಯಕ್ರಮವು ಆ.11 ರಂದು ಸ. ಹಿ. ಪ್ರಾ ಶಾಲೆ ಬೊಳಿಕ್ಕಲದಲ್ಲಿ ನಡೆಯಿತು.
ದೀಪ ಪ್ರಜ್ವಲಿಸಿ ಮಾತನಾಡಿದ ಕೆ.ಪಿ. ಎಸ್ ಕೆಯ್ಯೂರು ಸಂಸ್ಥೆಯ ಉಪ ಪ್ರಾಂಶುಪಾಲ ವಿನೋದ್ ಕುಮಾರ್ ಕೆ. ಎಸ್, ಆಟಿ ಆಚರಣೆಯ ವಿಶೇಷತೆ ಹಾಗೂ ಆಟಿ ಖಾದ್ಯಗಳ ಮಹತ್ವದ ಬಗ್ಗೆ ತಿಳಿಸಿದರು. ಹಾಗೂ ಅಳಿವಿನಂಚಿನಲ್ಲಿರುವ ಹಿಂದಿನ ಸಂಸ್ಕೃತಿಯ ಉಳಿವಿನ ಅಗತ್ಯತೆಯನ್ನು ತಿಳಿಸಿದರು.
ಕ್ಕೂಟ ಸಭೆಯಲ್ಲಿ ವಲಯ ಮೇಲ್ವಿಚಾರಕಿ ಶುಭಾವತಿ ಪಿ. ಸಿ ಮಾತನಾಡಿ ಆಟಿ ಕಷಾಯದ ಮಹತ್ವವನ್ನು ತಿಳಿಸಿ ಶುಭ ಹಾರೈಸಿದರು. ಬೊಳಿಕ್ಕಲ ಶಾಲೆಯ ಗೌರವ ಶಿಕ್ಷಕ ಪದ್ಮಯ್ಯ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಸ್ಥೆಗಳ ಸದಸ್ಯರ ಶಿಸ್ತುಭದ್ಧ ನಡವಳಿಕೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷ ಉದಯ ಗೌಡ ಮಾತನಾಡಿ “ಆಟಿಡೊಂಜಿ ದಿನ” ಕಾರ್ಯಕ್ರಮದ ಯಶಸ್ವಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಇನ್ನು ಮುಂದೆಯೂ ಎಲ್ಲರ ಸಹಕಾರದಿಂದ ಇಂತಹ ಕಾರ್ಯಕ್ರಮ ನಮ್ಮ ಒಕ್ಕೂಟದಲ್ಲಿ ನಡೆಯುವಂತಾಗಲಿ ಎಂದರು. ವೇದಿಕೆಯಲ್ಲಿ ನಿವೃತ್ತ ಸೈನಿಕ ಕರುಣಾಕರ ಗೌಡ , ಪಲ್ಲತಡ್ಕ ಉಪಸ್ಥಿತರಿದ್ದರು.
ಸಂಘದ ಸದಸ್ಯರಿಗೆ ಒಳಾಂಗಣ ಹಾಗೂ ಹೊರಾಂಗಣ ಸ್ಪರ್ಧೆಗಳನ್ನು ನಡೆಸಲಾಯಿತು. ಹಾಗೂ ಬಹುಮಾನಗಳನ್ನು ವಿತರಿಸಲಾಯಿತು. ವಿಶೇಷವಾಗಿ ಬೊಳಿಕ್ಕಲ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿಯವರು ಅತಿ ದೊಡ್ಡ ಗಾತ್ರದ ಕುಂಕುಮ ಹಾಕಿದ ಸದಸ್ಯರಿಗೆ ಹಾಗೂ ಕೈ ತುಂಬಾ ಗಾಜಿನ ಬಳೆ ತೊಟ್ಟ ಸದಸ್ಯರಿಗೆ ಹಾಗೂ ಬಿಳಿ ಪಂಚೆ ಹಾಗೂ ಬಿಳಿ ಅಂಗಿ ಧರಿಸಿದವರಿಗೆ ವಿಶೇಷ ಬಹುಮಾನ ನೀಡುವ ಮೂಲಕ ತುಳುನಾಡಿನ ಸಂಸ್ಕೃತಿಯ ಮಹತ್ವವನ್ನು ಬಿಂಬಿಸಿದರು. ಹಾಗೂ ಸಮವಸ್ತ್ರದೊಂದಿಗೆ ಶೇ.100 ರಷ್ಟು ಹಾಜರಾತಿ ಪಡೆದಿರುವ ಸಂಘಗಳನ್ನು ಗೌರವಿಸಲಾಯಿತು.
ಒಕ್ಕೂಟದ ಸದಸ್ಯರಿಂದ ತಯಾರಾದ ಆಟಿ ತಿಂಗಳ ವಿಶಿಷ್ಟ ಖಾದ್ಯಗಳೊಂದಿಗೆ ಭೋಜನ ಕೂಟ ನಡೆಯಿತು. ಸೇವಾ ಪ್ರತಿನಿಧಿ ರಜನಿ ಅವರು ಒಕ್ಕೂಟದ ಸಾಧನ ವರದಿಯನ್ನು ವಾಚಿಸಿದರು. ಜಸ್ಮಿ ಪ್ರಾರ್ಥನೆಯೊಂದಿಗೆ. ಚಿತ್ರಾವತಿ ಸ್ವಾಗತಿಸಿ, ಕೆಯ್ಯೂರು ಸೇವಾ ಪ್ರತಿನಿಧಿ ವಾರಿಜಾ ವೈ ವಂದಿಸಿದರು. ಒಕ್ಕೂಟದ ಉಪಾಧ್ಯಕ್ಷೆ ಪುಷ್ಪಾವತಿ ಕಾರ್ಯಕ್ರಮ ನಿರೂಪಿಸಿದರು.