ಆನಡ್ಕ ಶಾಲೆಯಲ್ಲಿ ಮೇಳೈಸಿದ ಆಟಿದ ನೆಂಪು ಕಾರ್ಯಕ್ರಮ

0

ಪುತ್ತೂರು:ಆನಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆ.13ರಂದು ಆಟಿದ ನೆಂಪು ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮವನ್ನು ಚೆನ್ನೆಮಣೆ ಆಟದ ಮೂಲಕ ಕರ್ನಾಟಕ ಜಾನಪದ ಪರಿಷತ್ ಪುತ್ತೂರು ಘಟಕ ಇದರ ಉಪಾಧ್ಯಕ್ಷ ಸುಧಾಕರ ಕುಲಾಲ್ ಉದ್ಘಾಟಿಸಿದರು .

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸಾಹಿತಿ, ಲೇಖಕಿ ಮತ್ತು ತುಳು ಅಪ್ಪೆ ಕೂಟ ಪುತ್ತೂರು ಇದರ ಪ್ರಧಾನ ಕಾರ್ಯದರ್ಶಿ ವಿದ್ಯಾಶ್ರೀ ಎಸ್ ತುಳುನಾಡ್ ತುಳುವರ ಆಚಾರ ವಿಚಾರಗಳು, ಆಟಿ ತಿಂಗಳ ವಿಶೇಷತೆಗಳು, ಆಟಿಯ ಆಹಾರಭ್ಯಾಸಗಳಿಗೆ ಕಾರಣಗಳು ಮುಂತಾದ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪ್ರಗತಿಪರ ಕೃಷಿಕ ಶ್ರೀಧರ ಮರಕ್ಕೂರು, ಸ್ಥಳೀಯ ನಾಟಿ ವೈದ್ಯ ನಾರ್ಣಪ್ಪ ಸಾಲಿಯಾನ್, ನರಿಮೊಗರು ಹಾಲು ಒಕ್ಕೂಟ ಸಂಘದ ಕಾರ್ಯದರ್ಶಿಯ ಕೃಷ್ಣರಾಜ ಜೈನ್ ,ಪುತ್ತೂರು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ನವೀನ್ ಸ್ಟೀಫನ್ ವೇಗಸ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರವಿಚಂದ್ರ, ಉಪಾಧ್ಯಕ್ಷ ಉಮೇಶ್, ಸದಸ್ಯರುಗಳಾದದಿನೇಶ್ ,ತಾರಾನಾಥ ,ಎಸ್ ಡಿ ಎಂ ಸಿ ಅಧ್ಯಕ್ಷ ನಾರಾಯಣ, ಶಾಲಾ ಮುಖ್ಯ ಗುರು ಫೆಲ್ಸಿಟಾ ಡಿ ಕುನ್ಹ ಉಪಸ್ಥಿತರಿದ್ದರು.

ಅತಿಥಿಗಳು ಆಟಿ ತಿಂಗಳ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಅನುಭವಗಳನ್ನು ಹಂಚಿಕೊಂಡರು. ಶಿಕ್ಷಕಿ ವಿಶಾಲಾಕ್ಷಿ ತಾವೇ ರಚಿಸಿದ ಆಟಿದ ನೆಂಪು ಎಂಬ ಕವನವನ್ನು ವಾಚಿಸಿದರು.

ಪೋಷಕರು ತಯಾರಿಸಿದ ಹಾಗೂ ಶಾಲೆಯಲ್ಲಿ ತಯಾರಿಸಿದ ಸುಮಾರು 26 ಬಗೆಯ ಆಟಿಯ ವಿಶೇಷ ತಿನಿಸುಗಳನ್ನು ಪ್ರದರ್ಶಿಸಿ, ಭೋಜನವನ್ನು ಸವಿದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ,ಪೋಷಕರು, ಹಿರಿಯ ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮ ಪಂಚಾಯತ್ ಸಿಬ್ಬಂದಿಗಳು, ವಿವಿಧ ಶಾಲೆಗಳ ಶಿಕ್ಷಕ ವೃಂದ, ಊರದಾನಿಗಳು ,ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.

ಪ್ರಭಾರ ಮುಖ್ಯಗುರು ಫೆಲ್ಸಿಟಾ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕಿ ಮಾಲತಿ ವಂದಿಸಿದರು. ಶಿಕ್ಷಕಿ ವಿಶಾಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ನೀತಾರವರು ಸಂಪನ್ಮೂಲ ವ್ಯಕ್ತಿ ವಿದ್ಯಾಶ್ರೀ ಅವರ ಕಿರು ಪರಿಚಯ ಮಾಡಿದರು. ಶಿಕ್ಷಕ ಸುನಿಲ್, ಸೌಮ್ಯ ಹಾಗೂ ಅಕ್ಷರ ದಾಸೋಹ ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here