





ಕೋಚಕಟ್ಟೆ: ಸ್ವಾತಂತ್ರ್ಯದ 78ನೇ ವರ್ಷದ ಹೊಸ್ತಿಲಿನಲ್ಲಿರುವ ಭವ್ಯ ಭಾರತದ ಸ್ವಾತಂತ್ರ್ಯ ದಿನಾಚರಣೆ ಕೋಚಕಟ್ಟೆ ನೂರುಲ್ ಹುದಾ ಮದ್ರಸದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಹಮೀದ್ ಅಜ್ಮೀರ್ ಅಧ್ಯಕ್ಷತೆ ವಹಿಸಿ ಧ್ವಜಾರೋಹಣವನ್ನು ನೆರವೇರಿಸಿದರು.


ಮದ್ರಸ ಸದರ್ ಉಸ್ತಾದ್ ಫಾರೂಕ್ ದಾರಿಮಿ ಆರಂಭಿಕ ದುಆ ನೆರವೇರಿಸಿ ಸಂದೇಶ ಭಾಷಣ ನಡೆಸಿದರು. ಮದ್ರಸಾ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ಸಿಹಿತಿಂಡಿ ವಿತರಿಸಲಾಯಿತು.














