ಪುಣಚ ಸರವು ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಪುಣಚ: ಪುಣಚ ಗ್ರಾಮದ ಸರವು ಅಂಗನವಾಡಿ ಕೇಂದ್ರದಲ್ಲಿ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆ.15ರಂದು ಆಚರಿಸಲಾಯಿತು. ಪುಣಚ ಗ್ರಾಮದ ನಿವೃತ್ತ ಯೋಧ ಕುಂಞ ನಾಯ್ಕ ದೇವಿನಗರ ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು. ಪಂಚಾಯತ್ ಸದಸ್ಯರಾದ ಶಾರದಾ, ಅಶೋಕ, ಆನಂದ ನಾಯ್ಕ, ಇಲಾಖಾ ವಲಯದ ಪ್ರಭಾರ ಮೇಲ್ವೀಚಾರಕಿ ಶಾರದಾ, ಬಾಲವಿಕಾಸ ಸಮಿತಿ ಪದಾಧಿಕಾರಿಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು, ಸ್ತ್ರೀಶಕ್ತಿ ಗುಂಪಿನ ಮಾತೆಯರು, ಮಕ್ಕಳ ಪೋಷಕರು, ಪುಟಾಣಿ ಮಕ್ಕಳು ಅಂಗನವಾಡಿ ಶಿಕ್ಷಕಿ ಹಾಗೂ ಸಹಾಯಕಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here