ಪುಣಚ: ನಿವೃತ್ತ ಪೋಸ್ಟ್ ಮಾಸ್ಟರ್ ನಡುಸಾರು ರಾಮ ನಾಯ್ಕ ನಿಧನ

0

ಪುಣಚ: ಪುಣಚ ಗ್ರಾಮದ ಅಜ್ಜಿನಡ್ಕ ನಡುಸಾರು ನಿವಾಸಿ ನಿವೃತ್ತ ಪೋಸ್ಟ್ ಮಾಸ್ಟರ್ ರಾಮಣ್ಣ ನಾಯ್ಕ (67ವ.) ಆ.17ರ ಮುಂಜಾನೆ ನಿಧನರಾದರು.
ಮೃತರು ಹಲವಾರು ವರ್ಷಗಳಿಂದ ಪುಣಚ ಪರಿಯಾಲ್ತಡ್ಕದಲ್ಲಿ ಪೋಸ್ಟ್ ಮಾಸ್ಟರ್ ಆಗಿ ಸೇವೆ ಸಲ್ಲಿಸಿ, ಬಳಿಕ ನಿವೃತ್ತಿ ಜೀವನದಲ್ಲಿದ್ದರು. ಕೆಲ ದಿನಗಳ ಅಸೌಖ್ಯದಿಂದ ಮಂಗಳೂರು ಕೆ.ಎಂ.ಸಿ.ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ.
ಮೃತರು ಪತ್ನಿ ಸರಸ್ವತಿ, ಪುತ್ರ ಪ್ರವೀಣ, ಪುತ್ರಿಯರಾದ ಸೌಮ್ಯ, ಕಾವ್ಯ, ಅಳಿಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here