ಪೆರ್ಲಂಪಾಡಿ ಆದಿಶಕ್ತಿ ಮಹಿಳಾ ಮಂಡಲಕ್ಕೆ ಆಯ್ಕೆ

0

ಅಧ್ಯಕ್ಷೆ: ನಾಗವೇಣಿ, ಕಾರ್ಯದರ್ಶಿ: ಕವಿತಾ ಪ್ರಕಾಶ್, ಕೋಶಾಧಿಕಾರಿ: ಪುಷ್ಪಾವತಿ

ಪುತ್ತೂರು: ಪೆರ್ಲಂಪಾಡಿ ಆದಿಶಕ್ತಿ ಮಹಿಳಾ ಮಂಡಲದ ಪದಾಧಿಕಾರಿಗಳ ಆಯ್ಕೆಯು ಕೊಳ್ತಿಗೆ ಗ್ರಾಪಂ ಸಭಾಂಗಣದಲ್ಲಿ ನಡೆಯಿತು. ಆದಿಶಕ್ತಿ ಮಹಿಳಾ ಮಂಡಲದ ಅಧ್ಯಕ್ಷೆ ಮಮತಾ ಗೋಳಿತ್ತಡ್ಕರವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷೆಯಾಗಿ ನಾಗವೇಣಿ, ಕಾರ್ಯದರ್ಶಿಯಾಗಿ ಕವಿತಾ ಪ್ರಕಾಶ್, ಕೋಶಾಧಿಕಾರಿಯಾಗಿ ಪುಷ್ಪಾವತಿ ಕೊಳ್ತಿಗೆ, ಉಪಾಧ್ಯಕ್ಷರಾಗಿ ಗೀತಪ್ರಿಯ, ಜೊತೆ ಕಾರ್ಯದರ್ಶಿಯಾಗಿ ಕವಿತಾ ಭಾಸ್ಕರ್, ಸಾಂಸ್ಕೃತಿಕ ಕಾರ್ಯಕ್ರಮ ಕಾರ್ಯದರ್ಶಿಯಾಗಿ ಸವಿತಾ, ಕ್ರೀಡಾ ಕಾರ್ಯದರ್ಶಿಯಾಗಿ ಪ್ರೇಮಗಂಗಾಧರರವರುಗಳನ್ನು ಆಯ್ಕೆ ಮಾಡಲಾಯಿತು. ಗೀತಪ್ರಿಯ ಪ್ರಾರ್ಥಿಸಿದರು. ಪುಷ್ಪಲತಾ ಸ್ವಾಗತಿಸಿ, ವಿಶಾಲಾಕ್ಷಿ ವಂದಿಸಿದರು.

LEAVE A REPLY

Please enter your comment!
Please enter your name here