ಪೆರಿಯಡ್ಕ ಸರ್ವೋದಯ ಪ್ರೌಢಶಾಲೆಯಲ್ಲಿ ಶ್ರಮದಾನ – ಔಷಧಿ ವನ ನಿರ್ಮಾಣದ ಉದ್ದೇಶ

0

ಉಪ್ಪಿನಂಗಡಿ: ಆದಿಚುಂಚನಗಿರಿ ಪ್ರವರ್ತಿತ ಪೆರಿಯಡ್ಕ ಸರ್ವೋದಯ ಪ್ರೌಢಶಾಲಾ ಮುಂಭಾಗದಲ್ಲಿ ಬೆಳಿದಿದ್ದ ಕುರುಚಲು ಗಿಡಗಳನ್ನು ತೆರವು ಮಾಡುವ ಸ್ವಚ್ಛತಾ ಕಾರ್ಯ ಆ.18ರಂದು ನಡೆಯಿತು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ ಟ್ರಸ್ಟ್ ಪುತ್ತೂರು ಇದರ ಪೆರಿಯಡ್ಕ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಸರ್ವೋದಯ ಪ್ರೌಢಶಾಲಾ ಎಸ್‌ಡಿಎಂಸಿ ಮತ್ತು ಪೋಷಕ ವರ್ಗ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸರ್ವೋದಯ ಪ್ರೌಢಶಾಲಾ ಆವರಣದ ಮುಂಭಾಗದಲ್ಲಿರುವ ಸುಮಾರು ಅರ್ಧ ಎಕರೆ ಪ್ರದೇಶದಲ್ಲಿ ಔಷಧಿ ವನವೊಂದನ್ನು ನಿರ್ಮಿಸುವ ಉದ್ದೇಶದಿಂದ ಇಲ್ಲಿದ್ದ ಪೊದರು ಹಾಗೂ ಮುಳ್ಳಿನ ಗಿಡಗಂಟಿಗಳನ್ನು ತೆರವು ಮಾಡಲಾಯಿತು. ಪುತ್ತೂರಿನ ಪಡುಮಲೆ ದೇಯಿ ಬೈದೆತಿ ವನ ನಿರ್ಮಾಣದ ಹಾಗೆಯೇ ಸರ್ವೋದಯದ ಈ ಔಷಧಿವನ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಉಪಯೋಗವಾಗುವ ರೀತಿಯಲ್ಲಿ ನಿರ್ಮಾಣವಾಗಲಿದೆ. ಪ್ರತಿಯೊಂದು ಔಷಧಿ ಸಸ್ಯದ ಜತೆಗೆ ಅದರ ಹೆಸರು ಮತ್ತು ಉಪಯೋಗದ ಮಾಹಿತಿ ಫಲಕಗಳನ್ನು ಅಳವಡಿಕೆ ಮಾಡಲು ಚಿಂತನೆ ನಡೆಸಲಾಗಿದೆ. ಈ ಔಷಧಿವನ ನಿರ್ಮಾಣಕ್ಕೆ ನೀಲನಕ್ಷೆ ತಯಾರಿಯಾಗಿದ್ದು, ಅಚ್ಚುಕಟ್ಟು ವ್ಯವಸ್ಥೆಯೊಂದಿಗೆ ಸುಂದರವಾದ ಔಷಧವನ ನಿರ್ಮಿಸಲು ಉದ್ದೇಶಿಸಲಾಗಿದೆ.
ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಸುಮಾರು ೮೦ಕ್ಕೂ ಹೆಚ್ಚು ಮಂದಿ ಶ್ರಮದಾನ ಮಾಡಿದ್ದು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿಬಂಧು ಹಾಗೂ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಶೇಖರ ಗೌಡ ಪಂಚೇರು ನೇತೃತ್ವದಲ್ಲಿ ಭಾಗಿಯಾಗಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಲಕ್ಷ್ಮಿ ಪಿ, ಶಿಕ್ಷಕರಾದ ಮೋಹನ್, ಸವಿತಾ, ಡೊಂಬಯ ಗೌಡ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಶೀನಪ್ಪ ಗೌಡ ಬೊಳ್ಳಾವು, ಯೋಜನೆಯ ಉಪ್ಪಿನಂಗಡಿ ವಲಯದ ಮೇಲ್ವಿಚಾರಕರಾದ ಶಿವಪ್ಪ ಎಂ.ಕೆ, ಸೇವಾಪ್ರತಿನಿಧಿ ಮಮತಾ, ರಾಮಚಂದ್ರ ಗೌಡ ನೆಡ್ಚಿಲ್, ಪ್ರಶಾಂತ್ ಪೆರಿಯಡ್ಕ, ರಾಮಣ್ಣ ಶೆಟ್ಟಿ, ರುಕ್ಮಯ್ಯ ಗೌಡ ಓಮಂದೂರು, ಸುಂದರ ಗೌಡ ಮರೋಜಿಕಾನ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here