ಪುತ್ತೂರು: ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆ ಹಾಗೂ ಸಂತ ಫಿಲೋಮಿನಾ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯು ಆ.15ರಂದು ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ರೊಟೇರಿಯನ್ ಪುರಂದರ ರೈ ಮಿತ್ರಂಪಾಡಿ ಧ್ವಜರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಇಂದು ದೇಶಕ್ಕಾಗಿ ಹೋರಾಡಿದ ಹುತಾತ್ಮರನ್ನು ಸ್ಮರಿಸುವ ದಿನ. ದೇಶಾಭಿಮಾನ ಮತ್ತು ನಿರಂತರ ಹೋರಾಟ, ಛಲದಿಂದ ಜೀವನದಲ್ಲಿ ಯಶಸ್ಸು ಹೊಂದಲು ಸಾಧ್ಯ. ಸಿಕ್ಕಿದ ಸ್ವಾತಂತ್ರ್ಯವನ್ನು ಉಳಿಸಿ ಬೆಳೆಸುವುದು ನಮ್ಮಲ್ಲರ ಕರ್ತವ್ಯ ಎಂದು ಕರೆಯಿತ್ತರು.
ಸಂತ ಫಿಲೋಮಿನಾ ಶಾಲೆಯ ಮುಖ್ಯಗುರುಗಳಾದ ಫಾ. ಮ್ಯಾಕ್ಸಿಂ ಡಿ ಸೋಜಾ ಎಂ ಮಾತನಾಡಿ, ವಿದ್ಯಾರ್ಥಿಗಳು ದೇಶದ ಭವಿಷ್ಯ, ಸಾಧನೆ, ಕ್ರಿ ಯಾಶೀಲತೆ, ಜೀವನದಲ್ಲಿ ಯಶಸ್ಸು, ಸಾಮರಸ್ಯ ಈ ರೀತಿ ದೇಶವನ್ನು ಕಟ್ಟುವ ಸಂದೇಶವನ್ನು ಸಾರುವ ನಮ್ಮಲ್ಲಿರುವ ಜಾತಿ, ಮತ, ಬೇಧಗಳನ್ನು ತೊಡೆದು ನಾವೆಲ್ಲರು ಒಂದೇ. ಭಾರತ ದೇಶದವರು ಎoಬ ಭಾವನೆಯಿಂದ ಸಮೃದ್ಧವಾಗಿ ನಮ್ಮ ದೇಶವನ್ನು ಬೆಳೆಸೋಣ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಶಾಲೆಯ ಶಿಕ್ಷಕಿ ಮೋಲಿ ಫೆರ್ನಾಂಡಿಸ್ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಗುರುಗಳಾದ ಸಿಸ್ಟರ್ ಲೋರಾ, ಉಭಯ ಶಾಲೆಗಳ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಸೌಮ್ಯ ಭಟ್ ಹಾಗೂ ವಿವೇಕ್ ಆಳ್ವ, ಶಾಲಾ ನಾಯಕ ತರುಣ್ ಕುಮಾರ್ ಉಪಸ್ಥಿತರಿದ್ದರು.
ಎನ್.ಸಿ.ಸಿ., ಭೂದಳ, ನೌಕಾದಳ, ವಾಯುದಳ, ಸ್ಕೌಟ್ಸ್, ಬುಲ್ ಬುಲ್, ಬ್ಯಾಂಡ್ ಹಾಗೂ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಮತ್ತು ಶಾಲಾ ಸಿಬ್ಬಂದಿ ವರ್ಗದವರಿಂದ ರಾಷ್ಟ ಧ್ವಜಕ್ಕೆ ವಂದನೆ ಸಲ್ಲಿಸಲಾಯಿತು. ವಿದ್ಯಾರ್ಥಿಗಳಾದ ಪ್ರಜ್ಞಾ ಹಾಗೂ ಆದ್ಯ ಇವರು ಸ್ವಾತಂತ್ರ್ಯ ದಿನಾಚರಣೆಯ ಮಹತ್ವದ ಬಗ್ಗೆ ತಿಳಿಸಿದರು.
ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಪ್ರಿಯಾ ವಂದನಾರ್ಪಣೆ ಮಾಡಿ, ಶಾಲಾ ಶಿಕ್ಷಕಿ ರೇಶ್ಮಾ ರೆಬೆಲ್ಲೊ ನಿರೂಪಣೆಗೈದರು. ಉಭಯ ಶಾಲೆಗಳ ಎಲ್ಲಾ ಶಿಕ್ಷಕ ವೃಂದದವರು ಸಹಕರಿಸಿದರು.