ಪಡುಮಲೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಕೆಸರ್ ಡ್ ಒಂಜಿ ದಿನ ಕಾರ್ಯಕ್ರಮ-ತುಳು ಭಾಷೆಯನ್ನು ವಿಶ್ವಕ್ಕೆ ಪರಿಚಯಿಸುವ ಕೆಲಸ ಆಗಬೇಕಿದೆ  ಶಾಸಕ ಅಶೋಕ್ ರೈ

0

ಬಡಗನ್ನೂರುಃ ತುಳು ಭಾಷೆಯ ಅಭಿಮಾನದಿಂದ ಈ ಭಾಗದ ಜನರ ಅರ್ಶಿವಾದದಲ್ಲಿ  ತುಳು ಭಾಷೆಯನ್ನು 6 ತಿಂಗಳಲ್ಲಿ ಹೆಚ್ಚುವರಿ ಭಾಷೆ ಮಾಡುವ ಕೆಲಸವಾಗಲಿದೆ. ತುಳುವರ ಬೇಡಿಕೆ ಕರ್ನಾಟಕದಲ್ಲಿ ಮೆಡಿಕಲ್ ಕಾಲೇಜ್,  ಇಂಜಿನಿಯರಿಂಗ್ ಕಾಲೇಜ್  ಮತ್ತು ಸರಕಾರಿ ಉದ್ಯೋಗದಲ್ಲಿ ಮೀಸಲಾತಿಗೆ ಅವಕಾಶ ಕಲ್ಪಿಸಬೇಕು ಎಂಬುದಾಗಿದೆ. ಆ ಮೂಲಕ ತುಳು ಭಾಷೆಯನ್ನು ವಿಶ್ವಕ್ಕೆ ಪರಿಚಯಿಸುವ ಕೆಲಸ ಅಗಲಿದೆ.ಬೆಂಗಳೂರಿನಲ್ಲಿ ಕಂಬಳ ಉತ್ಸವ ಮಾಡುವ ಮೂಲಕ ಕಂಬಳವನ್ನು ವಿಶ್ವಕ್ಕೆ ಪರಿಚಯಿಸುವ ಕೆಲಸ ಆಗಿದೆ‌ ಎಂದು ಶಾಸಕ ಅಶೋಕ್‌ ಕುಮಾರ್‌ ಹೇಳಿದರು.

ಅವರು ಪಡುಮಲೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ನಡೆದ ಪ್ರಥಮ ವರ್ಷದ ಕೆಸರ್ ಡ್ ಒಂಜಿ ದಿನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ನಾವೆಲ್ಲರೂ ತುಳು ಭಾಷೆ ಮಾತನಾಡುವ ಜನರು. ಪುತ್ತೂರು ಅಭಿವೃದ್ಧಿ ಹೊಂದಬೇಕು. ಮಕ್ಕಳಿಗೆ ಉದ್ಯೋಗ ಸೃಷ್ಟಿ ಕಲ್ಪಿಸುವ ಉದ್ಯಮ ಬರಬೇಕು ಮೆಡಿಕಲ್ ಕಾಲೇಜ್ ಅಗಬೇಕು.ಇಡೀ .ತುಳುವೆರ್ ಒಂದು ತಾಯಿ ಮಕ್ಕಳಂತೆ ಈ ಕೆಸರ್ ಡ್ ಒಂಜಿ ದಿನ ಭಾಗವಹಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕರು ನಿಮ್ಮ ಸೇವೆ ಮಾಡುವ ಋಣ ನನ್ನಲ್ಲಿದೆ  ಯಾವುದೇ ಜಾತಿ ಭೇದ ಮತ ಇಲ್ಲದೆ ರಾಜಕೀಯ ರಹಿತ ಕೆಲಸ ಮಾಡೋಣ ಯಾವುದೇ ಕೆಲಸ ಆಗಬೇಕಾದರೆ ಅಂಜಿಕೆ ಇಲ್ಲದೆ ನನ್ನ ಬಳಿ ಬನ್ನಿ ಎಂದ ಅವರು ಪುತ್ತೂರಿನ ಹಲವು ಭಾಗದಲ್ಲಿ ಕೆಸರ್ ಡ್ ಒಂಜಿ ದಿನ ಕಾರ್ಯಕ್ರಮ ನಡೆದಿದೆ ಅದರೆ ಅಲ್ಲಿ ಸಂಜೆ ಹೊತ್ತಿಗೆ ನೂರರಷ್ಟು ಮಾತ್ರ ಜನರು ಕಾಣಿಸಿಕೊಂಡಿದ್ದಾರೆ ಆದರೆ ಪಡುಮಲೆ ಈ ಪ್ರದೇಶದಲ್ಲಿ ಸುಮಾರು 300 ಕ್ಕೂ ಹೆಚ್ಚು ಜನರು ಇರುವುದು ನಿಜವಾಗಿ ಅರ್ಥಪೂರ್ಣ ಕಾರ್ಯಕ್ರಮ ಎಂದು ಹೇಳಿದರು.  ಕಾರ್ಯಕ್ರಮವು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಸತೀಶ್ ರೈ ಕಟ್ಟಾವು ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ವೇದಿಕೆಯಲ್ಲಿ ನಗರ ಯೋಜನಾ ಪ್ರಾಧಿಕಾರದ ಸದಸ್ಯ ನಿಹಲ್ ಕುಮಾರ್, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಜನಾರ್ದನ ಪುಜಾರಿ ಪದಡ್ಕ, ಶ್ರೀ ಕ್ಷೇತ್ರ ಪಡುಮಲೆ ವ್ಯವಸ್ಥಾಪನಾ  ಸಮಿತಿ ನಿಕಟಪೂರ್ವ ಅಧ್ಯಕ್ಷ ಮನೊಜ್ ರೈ ಪೇರಾಲು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಚಂದುಕೂಡ್ಲು, ಬಡಗನ್ನೂರು ಗ್ರಾ.ಪಂ ಸದಸ್ಯ ರವಿರಾಜ ರೈ ಸಜಂಕಾಡಿ, ಮಾಜಿ ಸದಸ್ಯ ಪುರಂದರ ರೈ ಕುದ್ಕಾಡಿ  ರಾಕೇಶ್ ರೈ ಕುದ್ಕಾಡಿ,  ಉದ್ಯಮಿ ಸುಧಾಕರ ಶೆಟ್ಟಿ ಮಂಗಳಾದೇವಿ, ,ಕೊಯಿಲ ಬಡಗನ್ನೂರು ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಕಾಶ್ ರೈ ಕೊಯಿಲ, ಉಪಸ್ಥಿತರಿದ್ದರು.

ಸನ್ಮಾನ
ವಿಧಾನಮಂಡಲ ಕಲಾಪದಲ್ಲಿ ತುಳು ಭಾಷೆಯನ್ನು ಹೆಚ್ಚುವರಿ ಭಾಷೆಯನ್ನಾಗಿ ಮಾಡುವ ವಿಚಾರದಲ್ಲಿ ಸದನದಲ್ಲಿ  ಪ್ರಸ್ತಾಪ ಮಾಡಿ ಸದನದಲ್ಲಿ ಸ್ಪೀಕರ್ ರವರಲ್ಲಿ ತುಳು ಭಾಷೆಯಲ್ಲಿ ಮಾತನಾಡಿ ತುಳು ಭಾಷೆ ಅದ್ಯತೆ  ಹೋರಾಟ ಮಾಡುತ್ತಿರುವ ಶಾಸಕ ಅಶೋಕ್ ಕುಮಾರ್ ರೈ ರವರನ್ನು ಶ್ರೀ ಕ್ಷೇತ್ರ ಪಡುಮಲೆ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಚಂದುಕೂಡ್ಲು ಶಾಲು ಹೊದಿಸಿ,ಹಾರ ಹಾಕಿ ಪೇಟ ಧರಿಸಿ ಫಲಪುಷ್ಪ ಸ್ಮರಣಿಕೆ ಅಭಿನಂದಿಸಲಾಯಿತು.

LEAVE A REPLY

Please enter your comment!
Please enter your name here