ವಿಟ್ಲ: ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಲು “ಇಕೋ ಕ್ಲಬ್” ಗಳ ಮೂಲಕ ಪ್ರತಿ ವರ್ಷ “ವಿಶ್ವ ಪರಿಸರ ದಿನ”- “ವನಮಹೋತ್ಸವ” ಕಾರ್ಯಕ್ರಮ ನಡೆಸುವುದರ ಉದ್ದೇಶ, ನೀವೇ ಮುಂದಿನ ಸಮಾಜದ ಭವಿಷ್ಯ; ಮಾನವ – ಪ್ರಾಣಿ ಸಂಘರ್ಷ, ಪ್ರಕೃತಿ ವಿಕೋಪ, ಅತಿಯಾದ ಪ್ಲಾಸ್ಟಿಕ್ ಬಳಕೆ – ಇದೆಲ್ಲ ಕೊನೆಯಾಗಬೇಕು ಎಂದು ಬಂಟ್ವಾಳ ವಲಯ ಅರಣ್ಯಾಧಿಕಾರಿಗಳಾದ ಪ್ರಪುಲ್ ಶೆಟ್ಟಿ ಹೇಳಿದರು.
ಅವರು ಲಯನ್ಸ್ ಕ್ಲಬ್ ಮಾಣಿ ಮತ್ತು ಕರ್ನಾಟಕ ಪ್ರೌಢ ಶಾಲೆ ಇವುಗಳ ಸಹಭಾಗಿತ್ವದಲ್ಲಿ ನಡೆದ – ಪರಿಸರ ಸಂರಕ್ಷಣೆ – – ವನಮಹೋತ್ಸವ ಹಾಗೂ ಸಸಿ ನೆಡುವಿಕೆ – ವಿತರಣಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಅತಿಥಿಯಾಗಿದ್ದ ಕ್ಲಬ್ ನ ವಲಯಾಧ್ಯಕ್ಷ ಉಮೇಶ್ ಮಾತನಾಡಿ ಹಲವಾರು ಸಮಾಜಮುಖಿ ಕಾರ್ಯ ಮಾಡುತ್ತಾ ಬಂದಿರುವ ಕ್ಲಬ್ ನಲ್ಲಿ ಪ್ರಸ್ತುತ 45 ಮಂದಿ ಸಕ್ರಿಯ ಸದಸ್ಯರಿದ್ದಾರೆ, ಈ ಶಾಲೆಗೂ ನಮಗೂ ಅವಿನಾಭಾವ ಸಂಬಂಧವಿದೆ ಎಂದರು.
ಇದೇ ಸಂದರ್ಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾಭಿವರ್ಧಕ ಸಂಘ (ರಿ) ಮಾಣಿ ಇದರ ಅಧ್ಯಕ್ಷರಾದ ರೊ. ಕಿರಣ್ ಹೆಗ್ಡೆ, ಕೋಶಾಧಿಕಾರಿ, ಶಾಲಾ ಸಂಚಾಲಕ, ಗ್ರಾ.ಪಂ. ಅಧ್ಯಕ್ಷ ಹಾಜಿ ಇಬ್ರಾಹಿಂ ಕೆ. ಮತ್ತು ಭಡ್ತಿ ಹೊಂದಿ ಬೆಂಗಳೂರಿಗೆ ವರ್ಗವಾಗುತ್ತಿರುವ ಮುಖ್ಯ ಅತಿಥಿ ಪ್ರಫುಲ್ ಶೆಟ್ಟಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿ ರವಿರಾಜ್, ಕ್ಲಬ್ ಅಧ್ಯಕ್ಷ ರಾಮಕಿಶನ್ ರೈ, ಕಾರ್ಯದರ್ಶಿ ಗಣೇಶ್ ಪೂಜಾರಿ, ಕೋಶಾಧಿಕಾರಿ ರಾಜೇಶ ಶೆಟ್ಟಿ, ಸಂಯೋಜಕ ಉದ್ಯಮಿ ಬಾಲಕೃಷ್ಣ ಶೆಟ್ಟಿ ಪಾಂಡಿಬೆಟ್ಟು, ಮುಖ್ಯ ಶಿಕ್ಷಕ ಎಸ್. ಚೆನ್ನಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು.
ಕ್ಲಬ್ ಹಿರಿಯ ಸದಸ್ಯರಾದ ಗಂಗಾಧರ ರೈ ವಡ್ಯದಗಯ ಸ್ವಾಗತಿಸಿ, ಗ್ರಾ.ಪಂ.ಸದಸ್ಯ ಬಾಲಕೃಷ್ಣ ಆಳ್ವ ಕೊಡಾಜೆ ವಂದಿಸಿ ಕಾರ್ಯಕ್ರಮ ನಿರೂಪಿಸಿದರು ಶಿಕ್ಷಕಿ ಶ್ಯಾಮಲ ಕೆ. ಪ್ರಾರ್ಥಿಸಿದರು.