ಮಂತ್ರಾಲಯದಲ್ಲಿ ಪುತ್ತೂರಿನ ನೃತ್ಯೋಪಾಸನಾ ಅಕಾಡೆಮಿಯ ತಂಡದ ನೃತ್ಯವೈಭವ

0

ಪುತ್ತೂರು: ಆಂಧ್ರಪ್ರದೇಶದ ಮಂತ್ರಾಲಯದಲ್ಲಿರುವ ಜಗದ್ಗುರು ಶ್ರೀಮದ್ ಮಧ್ವಾಚಾರ್ಯ ಮೂಲ ಮಠ ಸಂಸ್ಥಾನಂ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ‘ಶ್ರೀ ರಾಘವೇಂದ್ರ ತೀರ್ಥ ಗುರು ಸಾರ್ವಭೌಮರ 353 ನೇ ಆರಾಧನಾ ಮಹೋತ್ಸವ’ದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ ವತಿಯಿಂದ ಸೋಮವಾರ ‘ನೃತ್ಯೋಹಂ’ ಭರತನಾಟ್ಯ ಕಾರ್ಯಕ್ರಮ ಏರ್ಪಟ್ಟಿತು.

ಕಲಾ ಅಕಾಡೆಮಿ ಗುರು, ವಿದುಷಿ ಶಾಲಿನಿ ಆತ್ಮಭೂಷಣ್ ಮಾರ್ಗದರ್ಶನದಲ್ಲಿ ನೃತ್ಯ ತಂಡದ ಕಲಾವಿದರು ಶಾಸ್ತ್ರೀಯ ನೃತ್ಯ ಪ್ರದರ್ಶನ ನೀಡಿದರು.ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ 108 ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರು ನೃತ್ಯ ತಂಡದ ಕಲಾವಿದರಿಗೆ ಫಲಮಂತ್ರಾಕ್ಷತೆ ನೀಡಿ ಹರಸಿದರು.

ವೇದಿಕೆಯಲ್ಲಿ ಶ್ರೀಮಠದ ಆನಂದ ರಾವ್, ಪದ್ಮನಾಭ ಆಚಾರ್, ಜಯಪ್ರಕಾಶ್ ಮತ್ತಿತರರು ಇದ್ದರು.ಕಲಾತಂಡದ ಕಲಾವಿದರಾದ ಹಂಸಾನಂದಿನಿ, ಪೃಥ್ವಿ ಶ್ರೀ, ಶ್ರದ್ಧಾ ಎ, ತನುವಿ, ಫಲ್ಗುಣಿ, ತೇಜಸ್ವಿರಾಜ್, ಭಾರತಿ, ನಿಹಾರಿಕಾ, ಶ್ರೀಮಾ, ಧನ್ಯಶ್ರೀ, ವೈಷ್ಣವಿ ವಿನಯ್ ಶರ್ಮಾ ನೃತ್ಯ ಪ್ರದರ್ಶನ ನೀಡಿದರು.

LEAVE A REPLY

Please enter your comment!
Please enter your name here