ಈಜು ಸ್ಪರ್ಧೆ: ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿನಿಯರು ರಾಷ್ಟ್ರಮಟ್ಟಕ್ಕೆ ಆಯ್ಕೆ

0

ಪುತ್ತೂರು: ವಿದ್ಯಾ ಭಾರತಿ ಇದರ ವತಿಯಿಂದ ಬೆಂಗಳೂರಿನ ಥಣಿಸಂದ್ರದಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಇದೇ ಆ.17ರಂದು ನಡೆದ ಈಜು ಸ್ಪರ್ಧೆಯಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿನಿಯರು ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿ ಸಾಧನೆಗೈದಿದ್ದಾರೆ.

8ನೇ ತರಗತಿಯ ಲಾಸ್ಯ ಕಿಶನ್ (ಕಿಶನ್ ಡಿ. ಪಿ ಮತ್ತು ದೀನಾ ಕಿಶನ್ ದಂಪತಿ ಪುತ್ರಿ) ಇವರು, 50 ಮೀಟರ್ ಫ್ರೀ ಸ್ಟೈಲ್ ಮತ್ತು 50 ಮೀಟರ್ ಬ್ಯಾಕ್ ಸ್ಟ್ರೋಕ್ ಗಳಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಹಾಗೂ 50 ಮೀಟರ್ ಬ್ರೆಸ್ಟ್ ಸ್ಟ್ರೋಕ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಗೆದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 9ನೇ ತರಗತಿ ವಿದ್ಯಾರ್ಥಿನಿಯಾದ ಕು|ಸಿಯಾ ಭಾವಿನ್ ಸವಜಾನಿ (ಭಾವಿನ್ ಅಶೋಕ್ ಭಾಯಿ ಸವಜಾನಿ ಮತ್ತು ಸಹನಾ ಭವಿನ್ ಸವಜಾನಿ ದಂಪತಿ ಪುತ್ರಿ), 200 ಮೀಟರ್ ಫ್ರೀ ಸ್ಟೈಲ್ ಮತ್ತು 100 ಮೀಟರ್ ಫ್ರೀ ಸ್ಟೈಲ್ ನಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕವನ್ನು ಪಡೆದುಕೊಂಡಿದ್ದು, 100ಮೀಟರ್ ಬ್ಯಾಕ್ ಸ್ಟ್ರೋಕ್, 4×100 ರಿಲೇ, 4×100 ರಿಲೇ ಫ್ರೀ ಸ್ಟೈಲ್ ಗಳಲ್ಲಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಪದಕವನ್ನು ಪಡೆದು ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಇವರಿಬ್ಬರೂ ಪುತ್ತೂರಿನ ಬಾಲವನದ ಈಜು ತರಬೇತಿದಾರರಾದ ದೀಕ್ಷಿತ್, ಪಾರ್ಥ ವಾರಾಣಸಿ ಮತ್ತು ನಿರೂಪ್ ಕೋಟ್ಯಾನ್ ಅವರಿಂದ ತರಬೇತಿ ಪಡೆದಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here