ಭಾರತ್ ಬ್ಯಾಂಕ್ ನಲ್ಲಿ ಸಂಸ್ಥಾಪನಾ ದಿನಾಚರಣೆ

0

ಪುತ್ತೂರು: ಭಾರತ್ ಕೋಪರೇಟಿವ್ ಬ್ಯಾಂಕ್ ( ಮುಂಬಯಿ )ನಿಯಮಿತ, ಪುತ್ತೂರು ಶಾಖೆ, ಇದರ 46 ನೇ ವರ್ಷದ ಸಂಸ್ಥಾಪನ ದಿನವನ್ನು ಭಾರತ್ ಬ್ಯಾಂಕ್ ಪುತ್ತೂರು ಶಾಖೆಯಲ್ಲಿ ಆ.21ರಂದು ಅಚರಿಸಲಾಯಿತು.


ಮುಖ್ಯ ಅತಿಥಿ ವಿಜಯ ಕಾಲೇಜು ಮುಲ್ಕಿ ಇದರ ನಿವೃತ ಪ್ರೊಪೆಸರ್ ಗೋವಿಂದ ಭಟ್ ಮಾತನಾಡಿ ಇಂದಿನ ಆಧುನಿಕ ಉದ್ಯೋಗ ಮಾಡುವ ಬ್ಯಾಂಕಿಂಗ್ ಕ್ಷೇತ್ರವು ಸಾರ್ವಜನಿಕ ವಲಯದಲ್ಲಿ ಅತಿ ಅಗತ್ಯವಾಗಿದೆ, ಆದರೆ ಒಳ್ಳೆ ಯ ಬ್ಯಾಂಕ್ ಬೇಕು, ಸರಕಾರಿ ಬ್ಯಾಂಕ್ ಗಳ ಸೇವೆಗಳಿಂದ ಸಾರ್ವಜನಿಕರು ರೋಸಿ ಹೋಗಿದ್ದಾರೆ, ಗ್ರಾಹಕರು ಸರಕಾರಿ ಬ್ಯಾಂಕ್ ಗಳಿಗೆ ಲೋನ್ ಅಥವಾ ನಮ್ಮದೇ ಹಣವನ್ನು ಪಡೆಯಲು, ಅಥವಾ ಡೆಪಾಸಿಟ್ ಮಾಡಲು ಹೋದರು ಸೌಜನ್ಯಕ್ಕಾದ್ರು ಮಾತನಾಡುವ ಸಿಬ್ಬಂದಿಗಳು ಇಲ್ಲ, ಈ ಕಾರಣದಿಂದ ನಾನು ಸ್ವಲ್ಪ ಸರಕಾರಿ ಬ್ಯಾಂಕ್ ಗಳಿಂದ ದೂರ ಇದ್ದೇನೆ, ಆದರೆ ಪುತ್ತೂರು ಭಾರತ್ ಬ್ಯಾಂಕ್ ನ ಪ್ರಬಂಧಕರು ಅಥವ ಸಿಬ್ಬಂದಿಗಳ ನಗು ಮುಖದ ಸೇವೆಯಿoದಾಗಿ ಇಲ್ಲಿಗೆ ಬಂದ ಗ್ರಾಹಕರು ಮತ್ತೆಂದು ಬೇರೆ ಬ್ಯಾಂಕ್ ನ ಮೆಟ್ಟಲು ಹತ್ತುವ ಪ್ರಶ್ನೆಯೇ ಇಲ್ಲ, ಆ ಮಟ್ಟಿಗೆ ಗ್ರಾಹಕರಿಗೆ ಸೇವೆಯನ್ನು ಒದಗಿಸುತ್ತಾರೆ ಎಂದರು.


ಇನ್ನೋರ್ವ ಹಿರಿಯ ಉದ್ಯಮಿ ಪದ್ಮ ಸೋಲಾರ್ ಮಾಲಕ ಪದ್ಮನಾಭ ಶೆಟ್ಟಿ ಮಾತನಾಡಿ ಭಾರತ್ ಬ್ಯಾಂಕ್ ನ ಈಗಿನ ಹಾಗು ಹಿಂದಿನ ಎಲ್ಲ ಪ್ರಬಂಧಕರು ಹಾಗು ಸಿಬ್ಬಂದಿಗಳು ನನಗೆ ತುಂಬಾ ಆತ್ಮೀಯ ಬಂಧುಗಳೇ ಆ ಕಾರಣದಿಂದ ನಾನು ಈ ಸಂಸ್ಥೆಯ ಗ್ರಾಹಕನಾಗಿದ್ದೇನೆ. ಬ್ಯಾಂಕ್ ಗೆ ಬಂದ ಗ್ರಾಹಕರನ್ನು ಬಂದ ಕೂಡಲೆ ತಮ್ಮ ಕೆಲಸವನ್ನು ನಗು ಮುಖದಲ್ಲಿ ಸಮಯವನ್ನು ವ್ಯಯಿಸದೆ ಕ್ಲಪ್ತ ಸಮಯದಲ್ಲಿ ಸೇವೆಯನ್ನು ಒದಗಿಸುತಾರೆ, ಇದು ಬ್ಯಾಂಕ್ಕಿಗ್ ನ ಅಭಿವೃದ್ಧಿ ಗೆ ಒಂದು ನಿರ್ದೇಶನವಾಗಿದೆ ಎಂದರು.


ಉದ್ಯಮಿ ಮೂರ್ತೆದಾರರ ಸೇವಾ ಸಹಕಾರ ಸಂಘ ಕುಂಬ್ರ ಪುತ್ತೂರು, ಇದರ ಅಧ್ಯಕ್ಷ ಆರ್. ಸಿ. ನಾರಾಯಣ ಮಾತನಾಡಿ ಈ ಬ್ಯಾಂಕ್ ಪುತ್ತೂರಿನಲ್ಲಿ ಅತಿ ಅಲ್ಪ ಸಮಯದಲ್ಲಿ ಅತೀ ಹೆಚ್ಚು ಗ್ರಾಹಕರ ಮನೆ ಮಾತಾಗಿ ಮನ ಮುಟ್ಟುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಕಾರಣ ಸಿಬ್ಬಂದಿಗಳು ಗ್ರಾಕರೊಂದಿಗೆ ಇರುವ ವ್ಯವಾಹರದ ನಾಜೂಕು ನಯವಾದ ಮಾತು ಈ ಮೆಚ್ಚುಗೆಗೆ ಪಾತ್ರವಾಗಿದೆ. ಈ ಸಂದರ್ಭದಲ್ಲಿ ನಾನು ದಿವಂಗತ ಶ್ರೀ ಜಯಸಿ ಸುವರ್ಣರನ್ನು ನೆನಪಿಸಿಕೊಳ್ಳುತ್ತೇನೆ. ಈ ಒಂದು ಬ್ಯಾಂಕ್ ಅವರು ಹಾಕಿ ಕೊಟ್ಟ ಅಚ್ಚುಕಟ್ಟಾಗಿ ನಿರ್ದೇಶನ ಮಾಡಿದ ಉದಾಹರಣೆ ಅಂದ್ರೆ ತಪ್ಪಾಗದು ಎಂದರು.

ವಿಜಯ ಸುಪಾರಿ ಇಂಡಸ್ಟ್ರೀಸ್ ನ ಮಾಲಕ ರಾಮ ಭಟ್, ಉದ್ಯಮಿ ಸಂಜೀವ ಪಿ ಅಲ್ವಾ, ಪುತ್ತೂರು, ಬಿಲ್ಲವರ ಸಂಘ ಪುತ್ತೂರು ಅಧ್ಯಕ್ಷ ಸತೀಶ್ ಕುಮಾರ್ ಕೆಡೆoಜಿ ಗುತ್ತು, ಕಾರ್ಯ ನಿರ್ವಹಣಾ ಅಧಿಕಾರಿ ಉದಯ ಕುಮಾರ್ ಕೋಲಾಡಿ, ಸಂಜೀವ ಪೂಜಾರಿ ಕಾಣಿಯೂರ್ ಉಪ ರೆಂಜರ್ ಅರಣ್ಯ ಇಲಾಖೆ,ಅಕ್ಷಯ ಕಾಲೇಜು ಪುತ್ತೂರು ಇದರ ಅಧ್ಯಕ್ಷ ಜಯಂತ್ ನಡುಬೈಲು ,ಗೀತಾ ಭಟ್, ನಂದನ ವಿವಿದೋದ್ದೇಶ ಸೌಹಾರ್ದ ಸಹಕಾರಿಯ ನಿರ್ದೇಶಕಿ ಶ್ರೀಲತ ಎಸ್ ರೈ, ಗುರುಪ್ರಸಾದ್ ಪುತ್ತೂರು, ಕೆ ಚಂದ್ರಶೇಖರ್ ಪೂಜಾರಿ, ಸುಧಾಕರ್ ಕೆ ಪಿ, ಪ್ರಬಂಧಕರು ಪರಿವರ್ ಸೊಸೈಟಿ, ನ್ಯಾಯಾದೀಶರಾದ ಕೆ ಪಿ ಉಲ್ಲಾಸ್ ಕೋಟ್ಯಾನ್ , ಉದ್ಯಮಿ ವಿನಾಯಕ ಟ್ರೇಡರ್ಸ್ ನ ಮಾಲಕರಾದ ನವೀನ್ ಶೆಟ್ಟಿ, ವಿಠ್ಠಲ್ ಶೆಟ್ಟಿ ಸಂಸ್ಥೆಗೆ ಶುಭ ಹಾರೈಸಿದರು.


ಉಪ ಪ್ರಬಂಧಕರು ಸ್ವಾತಿ ಜಿ ಸಾಲಿಯಾನ್ , ಭಾಸ್ಕರ್ ಸರಪಾಡಿ, ಸ್ಮಿತಾ ಪೂಜಾರಿ , ಹೇಮಂತ್ ಪೂಜಾರಿ,ಶ್ರುತಿ ಅಮರ್ , ಶೀಪಲಿ ವಿಶಾಲ್, ಶ್ರುತಿ ಭಟ್,ಶ್ರೀಕಾಂತ್ ಹೆಗಡೆ .
ಚಿತ್ರ ಕುಲಾಲ್ , ಉಪಸ್ಥಿತರಿದ್ದರು.
ಶಾಖೆಯ ಪ್ರಬಂಧಕ ಲಕ್ಷ್ಮೀಷ ವೈ ಮೊಗೇರಯ ಸ್ವಾಗತಿಸಿದರು. ಭಾಸ್ಕರ್ ಬಂಗೇರ ಸರಪಾಡಿ ವಂದಿಸಿದರು. ಹರೀಶ ಶಾಂತಿ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here