





ಇತಿಹಾಸ ಸೃಷ್ಟಿಸಿದ ಕ್ರೀಡಾಕೂಟ: ದಾಖಲೆಯ ತಂಡಗಳ ಭಾಗಿ


ಮೂರು ಸ್ಪರ್ಧೆಗಳಲ್ಲಿ 65 ತಂಡ: ಮೂರು ಜಿಲ್ಲೆಗಳಿಂದ ಭಾಗವಹಿಸಿದ ತಂಡಗಳು : ಅಭೂತಪೂರ್ವ ಯಶಸ್ಸು





ಮುಕ್ಕೂರು: ನೇಸರ ಯುವಕ ಮಂಡಲ ಇದರ ದಶಪ್ರಣತಿ ಪ್ರಯುಕ್ತ ನ.9ರಂದು ಮುಕ್ಕೂರು ಶಾಲಾ ವಠಾರದಲ್ಲಿ ನಡೆದ ಪುರುಷರ ವಿಭಾಗದ ಲೆವೆಲ್, ಸಿಂಗಲ್ ಗ್ರಿಪ್ ಮಾದರಿ, ಮಹಿಳಾ ವಿಭಾಗದ ಲೆವೆಲ್ ಮಾದರಿ ಹಗ್ಗಜಗ್ಗಾಟ ಹಾಗೂ ಗ್ರಾಮ ಗ್ರಾಮಗಳ ನಡುವಿನ ವಾಲಿಬಾಲ್ ಪಂದ್ಯಾಟಕೂಟದಲ್ಲಿ ದಕ್ಷಿಣ ಕನ್ನಡ, ಕೊಡಗು, ಉಡುಪಿ ಜಿಲ್ಲೆಗಳಿಂದ ಒಟ್ಟು 65 ತಂಡಗಳು ಆಗಮಿಸಿತ್ತು. ಈ ಮೂಲಕ ಪೆರುವಾಜೆ ಗ್ರಾಮದಲ್ಲೇ ಅತ್ಯಧಿಕ ತಂಡ ಭಾಗವಹಿಸಿ ಇತಿಹಾಸ ಸೃಷ್ಟಿಸಿತ್ತು.

65 ತಂಡಗಳು
ಪುರುಷರ ವಿಭಾಗದ ಲೆವೆಲ್ ಮಾದರಿಯ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ 24 ತಂಡಗಳು, ಸಿಂಗಲ್ ಗ್ರಿಪ್ ಮಾದರಿಯ ಸ್ಪರ್ಧೆಯಲ್ಲಿ 18 ತಂಡಗಳು, ಗ್ರಾಮ ಗ್ರಾಮಗಳ ನಡುವಿನ ವಾಲಿಬಾಲ್ ಪಂದ್ಯಾಟದಲ್ಲಿ 19 ತಂಡಗಳು ಹಾಗೂ ಪೆರುವಾಜೆ ಗ್ರಾಮ ಮಟ್ಟದ ಮಹಿಳಾ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ 4 ತಂಡಗಳು ಭಾಗವಹಿಸಿತ್ತು.
ವಾಲಿಬಾಲ್ ಪಂದ್ಯಾಟ
ಗ್ರಾಮ ಗ್ರಾಮಗಳ ವಾಲಿಬಾಲ್ ಪಂದ್ಯಾಟಕೂಟದಲ್ಲಿ ಎಸ್ ಕೆಜಿಸಿ ಪಟ್ಟೆ ಪ್ರಥಮ ಸ್ಥಾನ ಪಡೆದು 5001 ರೂ. ನಗದು ಮತ್ತು ದಶಪ್ರಣತಿ ಟ್ರೋಫಿ, ಎಸ್ ಕೆಜಿಸಿ ಕೈರಂಗಳ ದ್ವಿತೀಯ ಸ್ಥಾನದೊಂದಿಗೆ 3001 ಮತ್ತು ದಶಪ್ರಣತಿ ಟ್ರೋಫಿ, ಡೈಮಂಡ್ ಬಾಯ್ಸ್ ಕಾರ್ಕಳ ತೃತೀಯ ಸ್ಥಾನದೊಂದಿಗೆ ದಶಪ್ರಣತಿ ಟ್ರೋಫಿ, ಪ್ರೆಂಡ್ಸ್ ಕುತ್ತಾರು ತಂಡ ಚತುರ್ಥ ಸ್ಥಾನದೊಂದಿಗೆ ದಶಪ್ರಣತಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು.
ಲೆವೆಲ್ ಮಾದರಿ ಹಗ್ಗಜಗ್ಗಾಟ
ಪುರುಷರ ವಿಭಾಗದ ಲೆವೆಲ್ ಮಾದರಿ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಜಠಾಯು ವಿಟ್ಲ ಪ್ರಥಮ ಸ್ಥಾನಿಯಾಗಿ 5001 ರೂ. ನಗದು ಮತ್ತು ದಶಪ್ರಣತಿ ಟ್ರೋಫಿ, ಮಿತ್ತಡ್ಕ ಕೇಸರಿ ಮಿತ್ರವೃಂದ ದ್ವಿತೀಯ ಸ್ಥಾನದೊಂದಿಗೆ 3001 ರೂ. ನಗದು ಮತ್ತು ದಶಪ್ರಣತಿ ಟ್ರೋಫಿ, ನ್ಯೂ ಫ್ರೆಂಡ್ಸ್ ಬೊಮ್ಮಾರು ತೃತೀಯ ಸ್ಥಾನದೊಂದಿಗೆ 2001 ರೂ. ನಗದು ಮತ್ತು ದಶಪ್ರಣತಿ ಟ್ರೋಫಿ, ಶಿವಾಜಿ ಫ್ರೆಂಡ್ಸ್ ದುಗಲಡ್ಕ ಚತುರ್ಥ ಸ್ಥಾನದೊಂದಿಗೆ 1001 ರೂ. ನಗದು ಮತ್ತು ದಶಪ್ರಣತಿ ಟ್ರೋಫಿ ಪಡೆಯಿತು.
ಸಿಂಗಲ್ ಗ್ರಿಫ್ ಮಾದರಿ
ಪುರುಷರ ವಿಭಾಗದ ಸಿಂಗಲ್ ಗ್ರಿಪ್ ಮಾದರಿ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಶ್ರೀ ವಿಷ್ಣು ಫ್ರೆಂಡ್ಸ್ ಕಾನಾವು ಪ್ರಥಮ ಸ್ಥಾನಿಯಾಗಿ 5001 ರೂ. ನಗದು ಮತ್ತು ದಶಪ್ರಣತಿ ಟ್ರೋಫಿ, ಕುಂಡಡ್ಕ ಶ್ರೀ ದುರ್ಗಾ ಫ್ರೆಂಡ್ಸ್ ದ್ವಿತೀಯ ಸ್ಥಾನದೊಂದಿಗೆ 3001 ರೂ. ನಗದು ಮತ್ತು ದಶಪ್ರಣತಿ ಟ್ರೋಫಿ, ಪರುಶರಾಮ ಉದನೆ ತೃತೀಯ ಸ್ಥಾನದೊಂದಿಗೆ 2001 ರೂ. ನಗದು ಮತ್ತು ದಶಪ್ರಣತಿ ಟ್ರೋಫಿ, ಶ್ರೀ ವಿಷ್ಣು ಬಳಗ ಸಂಪ್ಯ ಚತುರ್ಥ ಸ್ಥಾನದೊಂದಿಗೆ 1001 ರೂ. ನಗದು ಮತ್ತು ದಶಪ್ರಣತಿ ಟ್ರೋಫಿ ಗಿಟ್ಟಿಸಿತ್ತು.
ಮಹಿಳಾ ಹಗ್ಗಜಗ್ಗಾಟ ಸ್ಪರ್ಧೆ
ಪೆರುವಾಜೆ ಗ್ರಾಮದ ಮಹಿಳೆಯರಿಗೆ ನಡೆದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ರೂಪಾ ಮತ್ತು ತಂಡ 1501 ರೂ. ನಗದು ಮತ್ತು ದಶಪ್ರಣತಿ ಟ್ರೋಫಿ, ಉಷಾ ಕೂರೋಡಿ ಮತ್ತು ತಂಡ 1001 ರೂ. ನಗದು ಮತ್ತು ದಶಪ್ರಣತಿ ಟ್ರೋಫಿ ಪಡೆಯಿತು.
ಗಣ್ಯರಿಂದ ಪ್ರಶಸ್ತಿ ಪ್ರಧಾನ
ವಿವಿಧ ವಿಭಾಗದ ಸ್ಪರ್ಧೆಗಳಲ್ಲಿನ ವಿಜೇತರಿಗೆ ಗಣ್ಯರು ಪ್ರಶಸ್ತಿ ಪ್ರಧಾನ ಮಾಡಿದರು. ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಆಡಳಿತ ಮೊಕ್ತೇಸರ ಉಮೇಶ್ ರಾವ್ ಕೊಂಡೆಪ್ಪಾಡಿ, ನೇಸರ ದಶಪ್ರಣತಿ ಸಮಿತಿ 2026 ರ ಅಧ್ಯಕ್ಷ ಡಾ|ನರಸಿಂಹ ಶರ್ಮ ಕಾನಾವು, ಪ್ರಧಾನ ಕಾರ್ಯದರ್ಶಿ ಜಗನ್ನಾಥ ಪೂಜಾರಿ ಮುಕ್ಕೂರು, ಸಂಚಾಲಕ ಕುಂಬ್ರ ದಯಾಕರ ಆಳ್ವ, ಪ್ರಗತಿಪರ ಕೃಷಿಕರಾದ ಸಂಪತ್ ಕುಮಾರ್ ರೈ ಪಾತಾಜೆ, ಗೋಪಾಲ ಸುವರ್ಣ, ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ, ಬೆಳ್ಳಾರೆ ಜೇಸಿಐ ಮಾಜಿ ಅಧ್ಯಕ್ಷ ಜಗದೀಶ್ ರೈ ಪೆರುವಾಜೆ, ನ್ಯಾಯವಾದಿ ಗಣಪತಿ ಭಟ್ ನೀರ್ಕಜೆ, ಪ್ರಗತಿಪರ ಕೃಷಿಕ ಸತ್ಯಪ್ರಸಾದ್ ಕಂಡಿಪ್ಪಾಡಿ, ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಸುಬ್ರಾಯ ಭಟ್ ನೀರ್ಕಜೆ, ಪ್ರಗತಿಪರ ಕೃಷಿಕರಾದ ಗುಡ್ಡಪ್ಪ ಗೌಡ ಅಡ್ಯತಕಂಡ, ಸುಬ್ರಹ್ಮಣ್ಯ ಗೌಡ ಒರುಂಕು, ಮುಕ್ಕೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮಾಜಿ ಅಧ್ಯಕ್ಷ ಯಶವಂತ ಜಾಲು, ನೇಸರ ಯುವಕ ಮಂಡಲದ ಅಧ್ಯಕ್ಷ ರಮೇಶ್ ಕಾನಾವು ಪ್ರಶಸ್ತಿ ವಿತರಿಸಿದರು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ.ಅರಸಿಕೆರೆ ತಾಲೂಕಿನ ಮೇಲ್ವಿಚಾರಕ ಸೀತಾರಾಮ ಕಾನಾವು, ಪ್ರಗತಿಪರ ಕೃಷಿಕ ಗೋಪಾಲಕೃಷ್ಣ ಭಟ್ ಮನವಳಿಕೆ, ವೆಂಕಪ್ಪ ಗೌಡ ನಾರ್ಕೋಡು ಪೆರ್ಜಿ, ಶಿವಪ್ರಕಾಶ್ ಆಚಾರ್ಯ, ಗಣೇಶ್ ಅಡ್ಯತಕಂಡ, ಕಿಶನ್ ಅಡ್ಯತಕಂಡ ಮೊದಲಾದವರು ಉಪಸ್ಥಿತರಿದ್ದರು.
ತೀರ್ಪುಗಾರರರಾಗಿ ಸಹಕಾರ
ಕ್ರೀಡಾಕೂಟದಲ್ಲಿ ತೀರ್ಪುಗಾರರಾಗಿ ಎಣ್ಮೂರು ಸ.ಪ್ರೌ.ಶಾಲೆಯ ಶಿಕ್ಷಕ ಲಿಂಗಪ್ಪ ಗೌಡ, ದೈಹಿಕ ಶಿಕ್ಷಣ ನಿರ್ದೇಶಕರಾದ ಚಂದ್ರಶೇಖರ ಕೆ, ರಂಗನಾಥ್ ಸುಳ್ಯ, ರಫೀಕ್ ಟಾಸ್ಕೋ, ಅನ್ವರ್ ಬೀರಿ ಉಳ್ಳಾಲ, ಶರೀಫ್ ಮಾಡಾವು, ಶರೀಫ್ ಕುಂಡಡ್ಕ, ಝುಬೈರ್ ಸಹಕರಿಸಿದರು.ವೀಕ್ಷಕ ವಿವರಣೆಕಾರರಾಗಿ ಪುರುಷೋತ್ತಮ ಕುಂಡಡ್ಕ, ಪ್ರಜ್ವಲ್ ರೈ ಚೆನ್ನಾವರ ಸಹಕರಿಸಿದರು.









