ಸರಕಾರದ ಗ್ಯಾರಂಟಿ ಯೋಜನೆಯಿಂದ ದೇವರ ಮೇಲಿನ ಭಕ್ತಿ, ಶ್ರದ್ಧೆ ಹೆಚ್ಚಿದೆ-ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಶ್ರೀಕೃಷ್ಣ ಜಯಂತಿಯಲ್ಲಿ ಅಶೋಕ್ ಕುಮಾರ್ ರೈ

0

ಪುತ್ತೂರು: ದೇವರ ಪೂಜೆ ಪುನಸ್ಕಾರದಿಂದ ಅನೇಕ ಸಮಸ್ಯೆಗಳು, ತೊಂದರೆಗಳು ನಿವಾರಣೆಯಾಗುತ್ತವೆ. ಆಚರಣೆಯ ಮೂಲಕ ಆಚಾರ ವಿಚಾರ, ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡಬೇಕು. ಇದಕ್ಕೆ ಪೂರಕವಾಗಿ ಕರ್ನಾಟಕ ಸರಕಾರದ 5 ಗ್ಯಾರೆಂಟಿ ಯೋಜನೆಗಳಿಂದ ದೇವರ ಮೇಲಿನ ಭಕ್ತಿ, ಶ್ರದ್ಧೆ ಹೆಚ್ಚಿದೆ. ಈ ಮೂಲಕ ಧಾರ್ಮಿಕವಾಗಿ ಬೇರೆ ಬೇರೆ ರೀತಿಯಲ್ಲಿ ಸಹಾಯ ಮಾಡುತ್ತಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಅವರು ಹೇಳಿದರು.


ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಪುತ್ತೂರು ತಾಲೂಕು ಗೊಲ್ಲ / ಯಾದವ ಸಂಘದ ಮತ್ತು ಯಾದವ ಸಭಾ ಪುತ್ತೂರು ತಾಲೂಕು ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಆ.25ರಂದು ತಾಲೂಕು ಆಡಳಿತ ಸೌಧದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಇವತ್ತು ಆಚರಣೆಯ ಮೂಲಕ ಮಾಡುವ ಜೊತೆಗೆ ಆಚಾರ ವಿಚಾರ ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡಬೇಕು. ಸರಕಾರದ ಯೋಜನೆ ಧಾರ್ಮಿಕತೆಗೆ ಪೂರಕವಾಗಿದೆ. ಅದರಲ್ಲೂ ಗೃಹಲಕ್ಷ್ಮೀ ಯೋಜನೆಯಿಂದ ಪ್ರತಿ ದೇವಸ್ಥಾನದಲ್ಲಿ ಭಕ್ತರು ಹೆಚ್ಚಿದ್ದಾರೆ, ದೇವಳದ ಹುಂಡಿಯೂ ಜಾಸ್ತಿಯಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವಿರೇಂದ್ರ ಹೆಗ್ಗಡೆಯವರೇ ಶಕ್ತಿ ಯೋಜನೆಯಿಂದ ಜನರಲ್ಲಿ ಶಕ್ತಿ ಹೆಚ್ಚಿದೆ ಎಂದು ಪ್ರಶಂಸಿದ್ದಾರೆ. ದೇವಸ್ಥಾನಗಳಲ್ಲೂ ಕೂಡಾ ಪೂಜೆ ಮಾಡಲು ಸರಕಾರ ಸುತ್ತೋಲೆ ಹೊರಡಿಸಿದೆ ಎಂದರು.


ದೇವರನ್ನು ನೋಡಿದವರು ಯಾರು ಇಲ್ಲ:
ದೇವರನ್ನು ನೋಡಿದವರು ಯಾರು ಇಲ್ಲ. ದೇವರು ಇದ್ದಾರೆಂಬುದು ನಂಬಿಕೆ ಮಾತ್ರ. ದೇವರು ಇದ್ದಾರ? ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ನಾನು ಕೂಡಾ ದೇವರ ಭಕ್ತ. ಬೆಳಿಗ್ಗೆ 50 ಶ್ಲೋಕ ಹೇಳದೆ ಮನೆಯಿಂದ ಹೊರಗೆ ಬರುವುದಿಲ್ಲ. ರಾತ್ರಿ 50 ಶ್ಲೋಕ ಹೇಳದೆ ಮಲಗುವುದಿಲ್ಲ. ನಾನು ಈವರೆಗೂ ಎಲ್ಲದಕ್ಕೂ ದೇವರೆ ಕಾರಣ ಎಂದು ಅಂದುಕೊಂಡವನು.ಮಹಿಷಿಮರ್ದಿನಿ ದೇವರು ಅನುಗ್ರಹ ಇರಬೇಕು. ಒಟ್ಟಿನಲ್ಲಿ ನಾವು ಜನ್ಮಕೊಟ್ಟ ದೇವರ ಆರಾಧನೆ ಮಾಡಿದರೆ ಗರ್ಭಗುಡಿಯಲ್ಲಿರುವ ದೇವರು ಆಶೀರ್ವಾದ ಮಾಡುತ್ತಾರೆ. ನಾವು ಏನು ದೇವರಿಗೆ ಸಮರ್ಪಣೆ ಮಾಡಿದರೂ ಅದಕ್ಕಿಂತ ಹೆಚ್ಚು ಪಟ್ಟು ದೇವರು ನಮಗೆ ಕೊಡುತ್ತಾರೆ ಎಂಬ ನಂಬಿಕೆ ನಮ್ಮಲ್ಲಿ ಇರಬೇಕೆಂದರು.


ನಿವೃತ್ತ ಅಂಚೆ ಅಧಿಕಾರಿ ಯಕ್ಷಗಾನ ಕಲಾವಿದ ಈಶ್ವರ ಭಟ್ ಗುಂಡ್ಯಡ್ಕ ಅವರು ಸಂಸ್ಮರಣಾ ಉಪನ್ಯಾಸ ನೀಡಿದರು. ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ತಹಸೀಲ್ದಾರ್ ಪುರಂದರ, ಗೊಲ್ಲ (ಯಾದವ) ಸಂಘ ಪುತ್ತೂರು ವಲಯದ ಅಧ್ಯಕ್ಷ ಇ.ಎಸ್ ವಾಸುದೇವ, ಯಾದವ ಸಭಾ ತಾಲೂಕು ಸಮಿತಿ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಪೌರಾಯುಕ್ತ ಮಧು ಎಸ್ ಮನೋಹರ್, ರಾಷ್ಟ್ರೀಯ ಹಬ್ಬಗಳ ಅಚರಣಾ ಸಮಿತಿ ಸಾಂಸ್ಕೃತಿಕ ಸಮಿತಿಯ ಸಂಚಾಲಕ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪತಹಶೀಲ್ದಾರ್ ಸುಲೋಚನಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು

LEAVE A REPLY

Please enter your comment!
Please enter your name here