ಪುತ್ತೂರು: ಮೂಡಬಿದ್ರೆ ಸಮೀಪದ ಕೊಣಾಜೆಕಲ್ಲು ಗುಡ್ಡದಲ್ಲಿ ಟ್ರಕ್ಕಿಂಗ್ ಗೆ ಗೆಳೆಯನೊಂದಿಗೆ ತೆರಳಿದ್ದ, ಸಿಎ ವಿದ್ಯಾರ್ಥಿಯೋರ್ವರು ಕುಸಿದು ಬಿದ್ದು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಇರ್ದೆ ಗ್ರಾಮದ ನಡುವಡ್ಕ ನಿವಾಸಿ ಗೋಪಾಲಕೃಷ್ಣ ಭಟ್ ಅವರ ಪುತ್ರ ಮನೋಜ್(22ವ.)ಮೃತಪಟ್ಟವರು. ಮಂಗಳೂರಿನಲ್ಲಿ ಸಿ.ಎ.ಅಂತಿಮ ವರ್ಷದ ವಿದ್ಯಾಭ್ಯಾಸ ಪಡೆಯುತ್ತಿರುವ ಮನೋಜ್ ಹಾಗೂ ಕೇರಳ ಅಡೂರು ನಿವಾಸಿ ಕಾರ್ತಿಕ್ ಸೆ.17ರಂದು ಬೆಳಿಗ್ಗೆ ಮೂಡಬಿದರೆ ಸಮೀದ ಕೊಣಾಜೆಕಲ್ಲು ಗುಡ್ಡಕ್ಕೆ ಟ್ರಕ್ಕಿಂಗ್ ಹೋಗಿದ್ದರು. ಗುಡ್ಡದ ದಾರಿಯಲ್ಲಿ ಅಸ್ವಸ್ಥಗೊಂಡ ಮನೋಜ್ ಅವರು ಕುಸಿದು ಬಿದ್ದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.