ಪುತ್ತೂರು: ಸ್ನೇಹ ಯುವಕ ಮಂಡಲ ಮತ್ತು ಸ್ನೇಹ ಮಹಿಳಾ ಮಂಡಲ ಇದರ ಜಂಟಿ ಆಶ್ರಯದಲ್ಲಿ 20ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಠಮಿಯನ್ನು ವಿವಿಧ ಆಟೋಟ ಸ್ಪರ್ಧೆಗಳೊಂದಿಗೆ ಆ.26 ರಂದು ಪರ್ಪುಂಜ ರಾಮಜಾಲು ಗರಡಿಯ ವಠಾರದಲ್ಲಿ ಭಕ್ತಿ,ಸಂಭ್ರಮದಿಂದ ಆಚರಿಸಲಾಯಿತು.
ರಾಮಜಾಲು ಶ್ರೀಬ್ರಹ್ಮಬೈದೆರ್ಕಳ ಗರಡಿಯ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲುರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ, ತೆಂಗಿನ ಕಾಯಿ ಒಡೆಯುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಒಳಮೊಗ್ರು ಗ್ರಾಪಂ ಸದಸ್ಯೆ ಸುಂದರಿ, ಅರ್ಚಕ ಹರೀಶ್ ಶಾಂತಿ, ಸ್ನೇಹ ಯುವಕ ಮಂಡಲದ ಗೌರವ ಸಲಹೆಗಾರ ಮಿತ್ರದಾಸ ರೈ ಡೆಕ್ಕಳ, ಮಹಿಳಾ ಮಂಡಲದ ಗೌರವ ಸಲಹೆಗಾರ್ತಿ, ಶಿಕ್ಷಕಿ ಮೋಹನಾಂಗಿ, ಹೊನ್ನಪ್ಪ ಗೌಡ ಕೋಡಿಬೈಲು, ಶ್ರೀನಿವಾಸ ರೈ ಕುಂಬ್ರ, ಅನಿಲ್ ರೈ ಬಾರಿಕೆ, ಯುವರಾಜ್ ಶೆಟ್ಟಿ ಮೇರ್ಲ, ಭವಾನಿ ಬಿ.ಆರ್, ಪ್ರಕಾಶ್ಚಂದ್ರ ರೈ ಕೈಕಾರ, ವೀಣಾ ರೈ ಬಿಜಳ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ಮಾಜಿ ಶಾಸಕ ಸಂಜೀವ ಮಠಂದೂರು, ಉದ್ಯಮಿ ಸಹಜ್ ರೈ ಬಳಜ್ಜ, ಸಾಜ ರಾಧಾಕೃಷ್ಣ ಆಳ್ವ, ದಯಾನಂದ ಶೆಟ್ಟಿ ಉಜಿರೆಮಾರು, ಹರಿಪ್ರಸಾದ್ ಯಾದವ್,ಹರೀಶ್ ಬಿಜತ್ರೆ ಆಗಮಿಸಿ ಶುಭ ಹಾರೈಸಿದರು. ಶ್ರೇಯಾ ಆರ್.ರೈ,ರಕ್ಷಾ ಪ್ರಾರ್ಥಿಸಿದರು. ಯುವಕ ಮಂಡಲದ ಗೌರವ ಸಲಹೆಗಾರ ರಾಜೇಶ್ ರೈ ಪರ್ಪುಂಜ ಸ್ವಾಗತಿಸಿ, ಮಹಿಳಾ ಮಂಡಲದ ಅಧ್ಯಕ್ಷೆ ಪ್ರಮೀಳಾ ಎಸ್.ವಂದಿಸಿದರು. ಭವ್ಯ, ಪವಿತ್ರ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪುರುಷರಿಗೆ, ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ, ಪುಟಾಣಿಗಳಿಗೆ ಹೀಗೆ ಸಾರ್ವಜನಿಕರಿಗೆ ಹಲವು ಆಟೋಟ ಸ್ಪರ್ಧೆಗಳು ನಡೆದವು. ಕಂಬ ಏರುವುದರಿಂದ ಹಿಡಿದು ಹಗ್ಗ ಜಗ್ಗಾಟದ ತನಕ ಹಲವು ಸ್ಪರ್ಧೆಗಳಲ್ಲಿ ಕ್ರೀಡಾಪಟುಗಳು ಭಾಗವಹಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಗೆ ಸನ್ಮಾನ, ರಾಜೇಶ್ ರೈ ಪರ್ಪುಂಜ ನಿರ್ಮಾಣದ ಅಮರ್ ವೀರೆರ್ ಕೋಟಿಚೆನ್ನಯೆರ್ ಆಲ್ಬಂ ಸಾಂಗ್ ಬಿಡುಗಡೆ ಇತ್ಯಾದಿ ಕಾರ್ಯಕ್ರಮ ನಡೆಯಿತು. ಸಭಾಧ್ಯಕ್ಷತೆ ವಹಿಸಿದ್ದ ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಮಾತನಾಡಿ, ನಾವೆಲ್ಲರೂ ಶ್ರೀಕೃಷ್ಣನ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆನೀಡಿದರು. ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈಯವರು, ಕೃಷ್ಣ ಸುಧಾಮರ ಸ್ನೇಹದಂತೆ ನಾವೆಲ್ಲರೂ ಸ್ನೇಹ ಸಹೋದರತೆಯಿಂದ ಬದುಕೋಣ ಎಂದರು. ಅಮರ್ ವೀರೆರ್ ಕೋಟಿಚೆನ್ನಯೆರ್ ತುಳು ಆಲ್ಬಂ ಸಾಂಗ್ ಬಿಡುಗಡೆಗೊಳಿಸಿದ ರಾಮಜಾಲು ಗರಡಿಯ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲುರವರು, ಒಂದು ಒಳ್ಳೆಯ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬರುತ್ತಿರುವ ಸ್ನೇಹ ಯುವಕ ಮತ್ತು ಮಹಿಳಾ ಮಂಡಲದ ಪದಾಧಿಕಾರಿಗಳಿಗೆ ಬ್ರಹ್ಮಬೈದೆರುಗಳು ಒಳ್ಳೆಯದನ್ನು ಕರುಣಿಸಲಿ ಎಂದರು. ಅರ್ಚಕ ಹರೀಶ್ ಶಾಂತಿ ಶುಭ ಹಾರೈಸಿದರು. ಕಾರ್ಪಾಡಿ ಶ್ರೀಕ್ಷೇತ್ರದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಅಧ್ಯಕ್ಷ ಸದಾನಂದ ಶೆಟ್ಟಿ ಕೂರೇಲು, ಕುಂಬ್ರ ಮಾತೃಶ್ರೀ ಅರ್ಥ್ ಮೂವರ್ಸ್ ಮಾಲಕ, ಉದ್ಯಮಿ ಮೋಹನದಾಸ ರೈ ಕುಂಬ್ರ, ಕುಂಬ್ರ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ನಿತೀಶ್ ಕುಮಾರ್ ಶಾಂತಿವನ, ಪತ್ರಕರ್ತ ಸಿಶೇ ಕಜೆಮಾರ್ರವರುಗಳು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸ್ನೇಹ ಯುವಕ ಮಂಡಲದ ಗೌರವಾಧ್ಯಕ್ಷ ಪ್ರೇಮ್ರಾಜ್ ರೈ ಪರ್ಪುಂಜ, ಅಧ್ಯಕ್ಷ ವಿಪಿನ್ ಶೆಟ್ಟಿ, ಕಾರ್ಯದರ್ಶಿ ನಿತಿನ್ ಗೌಡ, ಸ್ನೇಹ ಮಹಿಳಾ ಮಂಡಲದ ಗೌರವಾಧ್ಯಕ್ಷೆ ಬೇಬಿ ರೈ, ಅಧ್ಯಕ್ಷೆ ಪ್ರಮೀಳಾ ಎಸ್, ಕಾರ್ಯದರ್ಶಿ ರೇಖಾ ಎಸ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ತನುಜಾ ಶೆಟ್ಟಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಅಮರ್ ವೀರೆರ್ ಕೋಟಿಚೆನ್ನಯೆರ್ ತುಳು ಆಲ್ಬಂ ಸಾಂಗ್ನ ನಿರ್ಮಾಪಕ ರಾಜೇಶ್ ರೈ ಪರ್ಪುಂಜ, ಗಾಯಕಿ ಸ್ಮೃತಿ ಪಲ್ಲತ್ತಾರು, ಸಾಹಿತ್ಯ ರಚನೆಕಾರರಾದ ಪ್ರವೀನ್ ಕಕ್ಕೆಬೆಟ್ಟು, ನವೀನ್ ಕುಮಾರ್ ನಾಕೂರು, ಛಾಯಾಗ್ರಾಹಕ ಕಿಶೋರ್ ಕ್ಲಿಕ್ ಕುಂಬ್ರ ಹಾಗೂ ತಂಡದವರನ್ನು ಈ ಸಂದರ್ಭದಲ್ಲಿ ಗುರುತಿಸಿ ಗೌರವಿಸಲಾಯಿತು. ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಶ್ರೇಯಾ ಆರ್.ರೈ ಮತ್ತು ರಕ್ಷಾ ಪ್ರಾರ್ಥಿಸಿದರು. ಉಪನ್ಯಾಸಕಿ ಶೋಭಾ ಸ್ವಾಗತಿಸಿದರು. ಪ್ರಿಯದರ್ಶಿನಿ ಶಿಕ್ಷಕಿ ಭವ್ಯ ವೇಣುಗೋಪಾಲ್ ಕಾರ್ಯಕ್ರಮ ನಿರೂಪಿಸಿದರು.ಮಾಲತಿ ಜಗದೀಶ್ ವಂದಿಸಿದರು. ಸ್ನೇಹ ಯುವಕ ಮಂಡಲ ಮತ್ತು ಮಹಿಳಾ ಮಂಡಲದ ಪದಾಧಿಕಾರಿಗಳು ಸಹಕರಿಸಿದ್ದರು.