ಕೇಪು: ಕೆರೆಗೆ ಬಿದ್ದು ವ್ಯಕ್ತಿ ಮೃತ್ಯು

0

ವಿಟ್ಲ: ಕೆರೆಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ವಿಟ್ಲ ಸಮೀಪದ ಕೇಪು ಎಂಬಲ್ಲಿ ನಡೆದಿದೆ.

ಕೇಪು ಗ್ರಾಮದ ಗುತ್ತುದಡ್ಕ ನಿವಾಸಿ ಕೊರಗಪ್ಪ ನಾಯ್ಕ ರವರ ಪುತ್ರ ನವೀನ್ ನಾಯ್ಕ (36 ವ.) ಮೃತ ದುರ್ದೈವಿ.

ನವೀನ್ ನಾಯ್ಕ ರವರು ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು, ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮೃತದೇಹ ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿಡಲಾಗಿದೆ. ಮೃತರು ಅವಿವಾಹಿತರಾಗಿದ್ದಾರೆ‌. ಮೃತರ ಸಹೋದರ ಚಂದ್ರ ಶೇಖರ ರವರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here